ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಚಮನ್ ಲಾಲ್ ಗುಪ್ತಾ ನಿಧನ

ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಚಮನ್ ಲಾಲ್ ಗುಪ್ತಾ ದೀರ್ಘಕಾಲದ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. 
ಚಮನ್ ಲಾಲ್ ಗುಪ್ತಾ
ಚಮನ್ ಲಾಲ್ ಗುಪ್ತಾ

ಜಮ್ಮು: ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಚಮನ್ ಲಾಲ್ ಗುಪ್ತಾ ದೀರ್ಘಕಾಲದ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. 

87 ವರ್ಷದ ಗುಪ್ತಾ ತಮ್ಮ ಗಾಂಧಿ ನಗರದ ನಿವಾಸದಲ್ಲಿ ಮಂಗಳವಾರ ಸಾವನ್ನಪ್ಪಿದ್ದು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಮೇ 5 ರಂದು ನಾರಾಯಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಆದರೆ ಇದ್ದಕ್ಕಿದ್ದಂತೆಅವರ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿತ್ತು, ಮುಂಜಾನೆ 5.10 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅನಿಲ್ ಗುಪ್ತ ಹೇಳಿದ್ದಾರೆ.

ಏಪ್ರಿಲ್ 13, 1934 ರಂದು ಜಮ್ಮುವಿನಲ್ಲಿ ಜನಿಸಿದ್ದ ಅವರು ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದರು.  ಕಳೆದ ಎರಡು ವರ್ಷಗಳಿಂದ ವಿವಿಧ ಕಾಯಿಲೆಗಳಿಂದಬಳಲುತ್ತಿದ್ದರಿಂದ ಮತ್ತು ಸಾರ್ವಜನಿಕ ಜೀವನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

1972 ರಲ್ಲಿ ಮೊದಲ ಬಾರಿಗೆ ಜೆ & ಕೆ ಶಾಸಕಾಂಗ ಸಭೆಯ ಸದಸ್ಯರಾದ ನಂತರ ಮೃತ ನಾಯಕ ಐದು ದಶಕಗಳ ಕಾಲ ರಾಜಕೀಯ ನಡೆಸಿದ್ದರು. ಅವರು 2008 ಮತ್ತು 2014 ರ ನಡುವೆ ಮತ್ತೆ ಜೆ & ಕೆ ವಿಧಾನಸಭೆಯ ಸದಸ್ಯರಾಗಿದ್ದರು.

ಚಮನ್ ಲಾಲ್ ಗುಪ್ತಾ ಅವರು 1996 ರಲ್ಲಿ ಜಮ್ಮುವಿನ ಉಧಂಪುರ್ ಕ್ಷೇತ್ರದಿಂದ 11 ನೇ ಲೋಕಸಭೆಗೆ ಆಯ್ಕೆಯಾದರು ಮತ್ತು 1998 ಮತ್ತು 1999 ರಲ್ಲಿ 12 ಮತ್ತು 13 ನೇ ಲೋಕಸಭೆಗೆ ಮರು ಆಯ್ಕೆಯಾದರು. ಚಮನ್ ಲಾಲ್ ಗುಪ್ತಾ ಅವರು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com