ಬಿಹಾರದ ಕೋವಿಡ್ ಆ್ಯಪ್‌ನಿಂದ ಪ್ರಭಾವಿತರಾದ ಪ್ರಧಾನಿ, ದೇಶಾದ್ಯಂತ ಬಳಕೆಗಾಗಿ ವಿವರ ಕೇಳಿದ ಮೋದಿ

ಕೋವಿಡ್ ಸೋಂಕಿತರು ತಮ್ಮ ನಿವಾಸದಲ್ಲಿಯೇ ಚೇತರಿಸಿಕೊಳ್ಳುತ್ತಿರುವ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರ ಮೇಲೆ ನಿಗಾ ವಹಿಸಲು ಬಿಹಾರ ಸರ್ಕಾರ ಅಭಿವೃದ್ಧಿಪಡಿಸಿದ ಹೊಸ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಪಾಟ್ನಾ: ಕೋವಿಡ್ ಸೋಂಕಿತರು ತಮ್ಮ ನಿವಾಸದಲ್ಲಿಯೇ ಚೇತರಿಸಿಕೊಳ್ಳುತ್ತಿರುವ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರ ಮೇಲೆ ನಿಗಾ ವಹಿಸಲು ಬಿಹಾರ ಸರ್ಕಾರ ಅಭಿವೃದ್ಧಿಪಡಿಸಿದ ಹೊಸ ಹೋಮ್ ಐಸೊಲೇಷನ್ ಟ್ರ್ಯಾಕಿಂಗ್(ಎಚ್‌ಐಟಿ) ಆ್ಯಪ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಸೇರಿದಂತೆ ಒಂಬತ್ತು ರಾಜ್ಯಗಳ ಹಲವಾರು ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ಸಂವಾದ ನಡೆಸುತ್ತಿದ್ದಾಗ ಮೋದಿ ಅವರು ಎಚ್ಐಟಿ ಆ್ಯಪ್ ಬಗ್ಗೆ ತಿಳಿದುಕೊಂಡಿದ್ದರು. 

ಹೊಸ ಪರಿಕಲ್ಪನೆಯಿಂದ ಪ್ರಭಾವಿತರಾದ ಪ್ರಧಾನಿ ಮೋದಿ, ದೇಶಾದ್ಯಂತ ಅದರ ಬಳಕೆಗಾಗಿ ಆ್ಯಪ್ ನ ವಿವರಗಳನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕಳುಹಿಸುವಂತೆ ಆದೇಶಿಸಿದ್ದಾರೆ ಎಂದು ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ.

ಆರೋಗ್ಯ ಇಲಾಖೆಯು ಎಚ್‌ಐಟಿ ಕೋವಿಡ್ ಆ್ಯಪ್‌ನ ಒಂದು ಪುಟದ ವಿವರವನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕಳುಹಿಸಿದೆ ಎಂದು ಆರೋಗ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮೃತ್ ಬುಧವಾರ ಪಿಟಿಐಗೆ ತಿಳಿಸಿದ್ದಾರೆ. 

ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ "ಎಚ್‌ಐಟಿ ಕೋವಿಡ್ ಆ್ಯಪ್" ಅನ್ನು ಬಿಡುಗಡೆ ಮಾಡಿದ್ದರು. ಮನೆ ಪ್ರತ್ಯೇಕವಾಗಿದ್ದು, ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಈ ಆ್ಯಪ್ ನಿಗಾವಹಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com