ದೆಹಲಿಯಲ್ಲಿಂದು 3,009 ಮಂದಿಗೆ ಕೊರೋನಾ ಪಾಸಿಟಿವ್, 252 ಸಾವು; ಪಾಸಿಟಿವ್ ಪ್ರಮಾಣ ಶೇ.4.76ಕ್ಕೆ ಇಳಿಕೆ

ದೆಹಲಿಯಲ್ಲಿ ಶುಕ್ರವಾರ 3,009 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನವೂ 4,000 ಕ್ಕಿಂತ ಕಡಿಮೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯಲ್ಲಿ ಶುಕ್ರವಾರ 3,009 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನವೂ 4,000 ಕ್ಕಿಂತ ಕಡಿಮೆ ಬಂದಿದೆ.

ದೆಹಲಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡಾ 4.76ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ಹಂಚಿಕೊಂಡ ಅಂಕಿ ಅಂಶಗಳು ತಿಳಿಸಿವೆ.

ಇತ್ತೀಚಿನ ಆರೋಗ್ಯ ಬುಲೆಟಿನ್ ಪ್ರಕಾರ, ಇಂದು ಕೊರೋನಾದಿಂದ 252 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಾವಿನ ಸಂಖ್ಯೆ 22,831ಕ್ಕೆ ಏರಿಕೆಯಾಗಿದೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ದೈನಂದಿನ ಪ್ರಕರಣಗಳು ಇಳಿಕೆಯಾಗುವುದಕ್ಕೆ ಲಾಕ್ ಡೌನ್ ಪ್ರಮುಖ ಕಾರಣ ವೈದ್ಯಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ದೆಹಲಿಯಲ್ಲಿ 3,846 ಪಾಸಿಟಿವ್ ಪ್ರಕರಣಗಳು ಮತ್ತು 235 ಸಾವುಗಳು ವರದಿಯಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com