ಕೋಲ್ಕತ್ತಾ: ಬ್ಲ್ಯಾಕ್ ಫಂಗಸ್ ನಿಂದ 32 ವರ್ಷದ ಮಹಿಳೆ ಸಾವು!

ಕೋವಿಡ್-19 ನಿಂದ ಚೇತರಿಕೆ ಕಂಡ ನಂತರ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿದ್ದು, ಕೋಲ್ಕತ್ತಾದಲ್ಲಿ 32 ವರ್ಷದ ಮಹಿಳೆಯೊಬ್ಬರು ಮ್ಯೂಕೋರ್ಮೈಕೋಸಿಸ್ ನಿಂದ ಸಾವನ್ನಪ್ಪಿದ್ದಾರೆ. 
ಬ್ಲಾಕ್ ಫಂಗಸ್ ರೋಗಿಯ ಪರೀಕ್ಷಾ ವರದಿಯನ್ನು ಗಮನಿಸುತ್ತಿರುವ ವೈದ್ಯರು
ಬ್ಲಾಕ್ ಫಂಗಸ್ ರೋಗಿಯ ಪರೀಕ್ಷಾ ವರದಿಯನ್ನು ಗಮನಿಸುತ್ತಿರುವ ವೈದ್ಯರು

ಕೋಲ್ಕತ್ತ: ಕೋವಿಡ್-19 ನಿಂದ ಚೇತರಿಕೆ ಕಂಡ ನಂತರ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿದ್ದು, ಕೋಲ್ಕತ್ತಾದಲ್ಲಿ 32 ವರ್ಷದ ಮಹಿಳೆಯೊಬ್ಬರು ಮ್ಯೂಕೋರ್ಮೈಕೋಸಿಸ್ ನಿಂದ ಸಾವನ್ನಪ್ಪಿದ್ದಾರೆ. 

ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಹರಿ ದೇವ್ ಪುರದ ಶಂಪಾ ಚಕ್ರಬೋರ್ತಿ ಅವರನ್ನು ಕೋವಿಡ್-19 ಹಿನ್ನೆಲೆ ಶಂಭುನಾಥ್ ಪಂಡಿತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆಗೆ ಕೋವಿಡ್-19 ನಿಂದ ಚೇತರಿಕೆ ಕಂಡಿದ್ದ ಮಹಿಳೆ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. 

ಇತ್ತ ಕೇಂದ್ರ ಆರೋಗ್ಯ ಸಚಿವಾಲಯ ಬ್ಲಾಕ್ ಫಂಗಸ್ ನ ಪ್ರಕರಣಗಳ ಮೇಲೆ ನಿಗಾ ವಹಿಸುವುದಕ್ಕಾಗಿ ತಜ್ಞರ ಸಮಿತಿಯನ್ನು ರಚನೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com