ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ: ಎನ್ ಕೆ ಅರೋರಾ

ಮುಂಬರುವ ವಾರಗಳು ಮತ್ತು ತಿಂಗಳು ಅಥವಾ ಮುಂದಿನ ಮೂರನೇ ಅಲೆಯಲ್ಲಿ ಕೊರೋನಾ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಂಬಲು ಯಾವುದೇ ಕಾರಣಗಳಿಲ್ಲ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂಬರುವ ವಾರಗಳು ಮತ್ತು ತಿಂಗಳು ಅಥವಾ ಮುಂದಿನ ಮೂರನೇ ಅಲೆಯಲ್ಲಿ ಕೊರೋನಾ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಂಬಲು ಯಾವುದೇ ಕಾರಣಗಳಿಲ್ಲ ಎಂದು ಸರ್ಕಾರಿ ಕಾರ್ಯ ಸಮೂಹದ ಮುಖ್ಯಸ್ಥರು ಹೇಳಿದ್ದಾರೆ. ಆದರೆ ಮಕ್ಕಳ ಕೋವಿಡ್ ಸೇವೆ ಸುಧಾರಿಸಲು ಹೆಚ್ಚುವರಿ ಸಂಪನ್ಮೂಲ ಸಂಗ್ರಹದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಭಾರತದ ಕೋವಿಡ್ -19 ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷ ಡಾ.ಎನ್.ಕೆ.ಅರೋರಾ, ಭಾರತೀಯ ದತ್ತಾಂಶವು ಪ್ರಸ್ತುತ ಕೊರೋನಾ ವೈರಸ್ ತಳಿಗಳು ಯುವಕರಿಗೆ ಅಥವಾ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಯಾವುದೇ ನಿರ್ದಿಷ್ಟ ಮುನ್ಸೂಚನೆ ನೀಡಿಲ್ಲ ಎಂದಿದ್ದಾರೆ.

ಆದಾಗ್ಯೂ, ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆಗಳು ಹೆಚ್ಚಾದ ಕಾರಣ, ಎರಡೂ ವಯಸ್ಸಿನ ರೋಗಿಗಳು ಹೆಚ್ಚು ಗಮನಕ್ಕೆ ಬರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸಮಯದಲ್ಲಿ ಯಾವುದೇ ಮೂರನೇ ಅಲೆಯ ಬಗ್ಗೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಐಎನ್ ಸಿಎಲ್ ಇಎನ್ ಟ್ರಸ್ಟ್‌ನ ನಿರ್ದೇಶಕರಾಗಿರುವ ಅರೋರಾ ಅವರು ತಿಳಿಸಿದ್ದಾರೆ.

"ಆದರೆ ನಮ್ಮ ದೇಶದಿಂದ ಮತ್ತು ಪ್ರಪಂಚದ ಇತರ ಭಾಗಗಳಿಂದ ಯಾವ ಅನುಭವ ಲಭ್ಯವಿದೆ ಎಂಬುದರ ಆಧಾರದ ಮೇಲೆ, ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಅಥವಾ ಮುಂದಿನ ಅಲೆಯಲ್ಲಿ ಮಕ್ಕಳು ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ನಂಬಲು ಯಾವುದೇ ಕಾರಣಗಳಿಲ್ಲ" ಎಂದು ಅವರು ಹೇಳಿದರು.

ಆದರೆ ಮಕ್ಕಳ ಕೋವಿಡ್ ಸೇವೆಗಳನ್ನು ಸುಧಾರಿಸುವ ಮತ್ತು ಉಳಿದ ಕೋವಿಡ್ ನಿರ್ವಹಣಾ ಚೌಕಟ್ಟಿನೊಂದಿಗೆ ಹೊಂದಾಣಿಕೆ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com