ಕೊರೊನಾ ಎದುರಿಸಲು ಲಸಿಕೆ ಅತ್ಯಾವಶ್ಯಕ, ಸಂಶೋಧನೆಯಲ್ಲಿ ಸೇವೆ ಸಲ್ಲಿಸಿದ ವಿಜ್ಞಾನಿಗಳ ಕುರಿತು ನಮಗೆ ಹೆಮ್ಮೆ ಇದೆ: ಪ್ರಧಾನಿ ಮೋದಿ

ಕೊರೊನಾ ಸಾಂಕ್ರಾಮಿಕ ಎದುರಿಸಲು ಕೋವಿಡ್ ಲಸಿಕೆ ಅತ್ಯಾವಶ್ಯಕವಾದಿದ್ದು, ಲಸಿಕೆ ಸಂಶೋಧನೆಯಲ್ಲಿ ಸೇವೆ ಸಲ್ಲಿಸಿದ್ದ ವಿಜ್ಞಾನಿಗಳ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೊರೊನಾ ಸಾಂಕ್ರಾಮಿಕ ಎದುರಿಸಲು ಕೋವಿಡ್ ಲಸಿಕೆ ಅತ್ಯಾವಶ್ಯಕವಾದಿದ್ದು, ಲಸಿಕೆ ಸಂಶೋಧನೆಯಲ್ಲಿ ಸೇವೆ ಸಲ್ಲಿಸಿದ್ದ ವಿಜ್ಞಾನಿಗಳ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬುದ್ಧಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ‘ವರ್ಚುವಲ್‌ ವೆಸಾಕ್‌ ಗ್ಲೋಬಲ್‌ ಸೆಲೆಬ್ರೇಷನ್‌’ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಪೆರೆನ್ಸ್ ಮೂಲಕ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಗತ್ತು ಶತಮಾನಗಳಲ್ಲಿ ಈ ರೀತಿಯ ಸಾಂಕ್ರಾಮಿಕವನ್ನು ಕಂಡಿಲ್ಲ. ಆದರೆ, ಈಗ  ಸಾಂಕ್ರಾಮಿಕದ ಬಗ್ಗೆ ಮೊದಲಿಗಿಂತ ಹೆಚ್ಚಿನ ತಿಳುವಳಿಕೆ ಇದೆ. ಕೊರೊನಾ ವಿರುದ್ಧದ ಹೋರಾಟ ಮತ್ತು ಜೀವಗಳನ್ನು ಉಳಿಸಲು ಲಸಿಕೆಯು ಬಹಳ ಮಹತ್ವದಾಗಿದೆ. ಕೊರೊನಾ ಸಾಂಕ್ರಾಮಿಕ ಎದುರಿಸಲು ಕೋವಿಡ್ ಲಸಿಕೆ ಅತ್ಯಾವಶ್ಯಕವಾದಿದ್ದು, ಲಸಿಕೆ ಸಂಶೋಧನೆಯಲ್ಲಿ ಸೇವೆ ಸಲ್ಲಿಸಿದ್ದ ವಿಜ್ಞಾನಿಗಳ ಬಗ್ಗೆ  ನಮಗೆ ಅತೀವ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸಾಂಕ್ರಾಮಿಕದಿಂದಾಗಿ ತಮ್ಮ ಹತ್ತಿರದವರನ್ನು ಕಳೆದುಕೊಂಡವರಿಗೆ ಸಂತಾ‍ಪ ಸೂಚಿಸಿದರು. ಕೊರೋನಾದಿಂದಾಗಿ ತಮ್ಮವರನ್ನು ಕಳೆದುಕೊಂಡವರ ನೋವಿನಲ್ಲಿ ತಾನೂ ಭಾಗಿಯಾಗುತ್ತೇನೆ ಎಂದು ಹೇಳಿದರು. ಅಂತೆಯೇ 'ಕೊರೋನಾ ಸಾಂಕ್ರಾಮಿಕ ರೋಗವು ಮಾನವರು  ಎದುರಿಸುತ್ತಿರುವ ಭೀಕರ ಬಿಕ್ಕಟ್ಟು. ಸಾಂಕ್ರಾಮಿಕ ರೋಗವು ಪ್ರತಿ ದೇಶದ ಮೇಲೆ ಪರಿಣಾಮ ಬೀರಿದೆ. ಕೊರೋನಾ ಇಡೀ ವಿಶ್ವವನ್ನೇ ಬದಲಿಸಿಬಿಟ್ಟಿದೆ. ಕೊರೋನಾ ನಂತರ ಈ ಜಗತ್ತು ಮೊದಲಿನಂತೆ ಇರುವುದಿಲ್ಲ. ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳನ್ನು ಕೋವಿಡ್‌ ಪೂರ್ವ ಅಥವಾ ಕೋವಿಡ್‌ ನಂತರದ  ಘಟನೆಗಳು ಎಂದು ನೆನಪಿಸಲಾಗುತ್ತದೆ ಎಂದು ಹೇಳಿದರು.

'ಭಾರತ ಈ ಸವಾಲನ್ನು ಅತ್ಯಂತ ಧೈರ್ಯದಿಂದ ಎದುರಿಸುತ್ತಿದ್ದು, ಇದರಲ್ಲಿ ಲಸಿಕೆಗಳ ಪಾತ್ರ ಮಹತ್ವದ್ದಾಗಿದೆ. ಕೋವಿಡ್-19 ಮಾನವೀಯತೆ ಎದುರಿಸುತ್ತಿರುವ ಅತ್ಯಂತ ಭೀಕರ ಬಿಕ್ಕಟ್ಟು. ಈ ಹಿಂದೆ ಇಂಥಹ ಸಾಂಕ್ರಾಮಿಕ ರೋಗವನ್ನು ನಾವೆಂದೂ ಕಂಡಿರಲಿಲ್ಲ, ಈ ಸಾಂಕ್ರಾಮಿಕದ ಬಗ್ಗೆ ಜನರಿಗೆ ಈಗ ತಿಳುವಳಿಕೆ  ಬಂದಿದೆ. ನಮ್ಮಲ್ಲಿ ಲಸಿಕೆಗಳು ಲಭ್ಯವಿದೆ. ಜನರ ಜೀವ ಉಳಿಸುವಲ್ಲಿ ಮತ್ತು ಸಾಂಕ್ರಾಮಿಕ ರೋಗವನ್ನು ಸೋಲಿಸುವಲ್ಲಿ ಈ ಲಸಿಕೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಲಸಿಕೆಗಳ ಸಂಶೋಧನೆಯಲ್ಲಿ ಸೇವೆ ಸಲ್ಲಿಸಿದ ನಮ್ಮ ವಿಜ್ಞಾನಿಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ಮೋದಿ ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com