ಮುಂದಿನ ವರ್ಷ ಮಾಡೆರ್ನಾ ಸಂಸ್ಥೆಯಿಂದ ಸಿಂಗಲ್ ಡೋಸ್ ಕೋವಿಡ್ ಲಸಿಕೆ; 2021ಕ್ಕೆ 5 ಕೋಟಿ ಲಸಿಕೆ ಸಿದ್ಧ ಎಂದ ಫೈಜರ್!

ದೇಶದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಮುಂದುವರೆದಿರುವಂತೆಯೇ ಕೋವಿಡ್ ಲಸಿಕೆಗೆ ವ್ಯಾಪಕ ಬೇಡಿಕೆ ಮತ್ತು ಕೊರತೆ ಎದುರಾಗಿದ್ದು, ಇದನ್ನು ನೀಗಿಸುವ ನಿಟ್ಟಿನಲ್ಲಿ ವಿದೇಶ ಲಸಿಕಾ ತಯಾರಿಕಾ ಸಂಸ್ಥೆಗಳಾದ ಮಾಡೆರ್ನಾ ಮತ್ತು ಫೈಜರ್ ಸಂಸ್ಥೆಗಳು ಲಸಿಕೆ ವಿತರಣೆಗೆ ಮುಂದಾಗಿವೆ.
ಮಾಡರ್ನಾ ಕೋವಿಡ್-19 ಲಸಿಕೆ
ಮಾಡರ್ನಾ ಕೋವಿಡ್-19 ಲಸಿಕೆ

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಮುಂದುವರೆದಿರುವಂತೆಯೇ ಕೋವಿಡ್ ಲಸಿಕೆಗೆ ವ್ಯಾಪಕ ಬೇಡಿಕೆ ಮತ್ತು ಕೊರತೆ ಎದುರಾಗಿದ್ದು, ಇದನ್ನು ನೀಗಿಸುವ ನಿಟ್ಟಿನಲ್ಲಿ ವಿದೇಶ ಲಸಿಕಾ ತಯಾರಿಕಾ ಸಂಸ್ಥೆಗಳಾದ ಮಾಡೆರ್ನಾ ಮತ್ತು ಫೈಜರ್ ಸಂಸ್ಥೆಗಳು ಲಸಿಕೆ ವಿತರಣೆಗೆ  ಮುಂದಾಗಿವೆ.

ಹೌದು.. ಭಾರತದಲ್ಲಿ ಕೋವಿಡ್ ಲಸಿಕೆ ನೀಡುವ ಕುರಿತು ಒಪ್ಪಂದ ಮಾಡಿಕೊಂರುವ ದೈತ್ಯ ಔಷಧ ತಯಾರಿಕಾ ಸಂಸ್ಥೆ ಮಾಡೆರ್ನಾ ಮುಂದಿನ ವರ್ಷ ಸಿಂಗಲ್ ಡೋಸ್ ಕೋವಿಡ್ ಲಸಿಕೆಗಳನ್ನು ಭಾರತದಲ್ಲಿ ನೀಡುವುದಾಗಿ ಘೋಷಣೆ ಮಾಡಿದೆ. ಈಗಾಗಲೇ ಸಾಕಷ್ಟು ದೇಶಗಳಲ್ಲಿ ಕೋವಿಡ್ ಲಸಿಕೆ ಸರಬರಾಜು  ಒಪ್ಪಂದ ಮಾಡಿಕೊಂಡಿರುವ ಮಾಡೆರ್ನಾ ಸಂಸ್ಥೆ 2021ರಲ್ಲಿ ಭಾರತಕ್ಕೆ ಹೆಚ್ಚುವರಿ ಲಸಿಕೆ ನೀಡುವ ಸಾಧ್ಯತೆ ಅಥವಾ ಸಾಕಷ್ಟು ದಾಸ್ತಾನು ಇಲ್ಲ ಎಂದು ಹೇಳಿದೆ. ಇದೇ ವೇಳೆ ಅಮೆರಿಕದ ದೈತ್ಯ ಔಷಧ ತಯಾರಿಕಾ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಮುಂದಿನ ದಿನಗಳಲ್ಲಿ ತನ್ನ ಕೋವಿಡ್ ಲಸಿಕೆಗಳನ್ನು ಭಾರತಕ್ಕೆ  ಸರಬರಾಜು ಮಾಡುವ ಸಾಧ್ಯತೆ ಇದೆ.

2021ರಲ್ಲಿ ಮಾಡೆರ್ನಾ ಸಂಸ್ಥೆಯ ಹೆಚ್ಚುವರಿ ಲಸಿಕೆಯ ಬಳಕೆ ಮಾಡಲು ದಾಸ್ತಾನಿಲ್ಲ ಎಂದು ಹೇಳಲಾಗಿದ್ದು, ಮುಂದಿನ ವರ್ಷ ಭಾರತದಲ್ಲಿ ಸಿಂಗಲ್ ಡೋಸ್ ಲಸಿಕೆಯನ್ನು ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಕುರಿತಂತೆ ವಿದೇಶಾಂಗ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ  ನೀತಿ ಆಯೋಗ, ಜೈವಿಕ ತಂತ್ರಜ್ಞಾನ ಇಲಾಖೆ, ಕಾನೂನು ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಅಂತೆಯೇ ಮಾಡೆರ್ನಾ ಸಂಸ್ಥೆಯ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ನಿಟ್ಟಿನಲ್ಲಿ ಸಿಪ್ಲಾ ಮತ್ತು ಇತರೆ ಭಾರತೀಯ ಔಷಧ ತಯಾರಿಕಾ  ಸಂಸ್ಥೆಗಳೊಂದಿಗೆ ಚರ್ಚಿಸಲಾಗುತ್ತಿದೆ. ಸಿಪ್ಲಾ ಸಂಸ್ಥೆ ಈಗಾಗಲೇ ಮಾಡೆರ್ನಾದಿಂದ 5 ಕೋಟಿ ಡೋಸ್‌ ಲಸಿಕೆಗಳನ್ನು ಖರೀದಿಸಲು ಆಸಕ್ತಿ ತೋರಿದ್ದು, ಈ ಕುರಿತ ನಿರ್ಧಾರವನ್ನು ಶೀಘ್ರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇತ್ತ ಫೈಜರ್ ಸಂಸ್ಥೆಯ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ನೀಡುವ ಕುರಿತೂ ಚರ್ಚೆಗಳು ನಡೆದಿದ್ದು, ಒಟ್ಟು 5 ಕೋಟಿ ಲಸಿಕೆ ಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಅದರಂತೆ 2021ರ ಜುಲೈನಲ್ಲಿ 1 ಕೋಟಿ, ಆಗಸ್ಟ್‌ನಲ್ಲಿ 1 ಕೋಟಿ, ಸೆಪ್ಟೆಂಬರ್‌ನಲ್ಲಿ 2 ಕೋಟಿ ಮತ್ತು ಅಕ್ಟೋಬರ್‌ನಲ್ಲಿ 1 ಕೋಟಿ  ಡೋಸ್ ಲಸಿಕೆ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಫೈಜರ್ ಸಂಸ್ಥೆ ನಿರಂತರ ಚರ್ಚೆ ನಡೆಸುತ್ತಿದೆ. 

ಇದೇ ಕಾರಣಕ್ಕಾಗಿ ಫೈಜರ್ ಸಂಸ್ಥೆ ಭಾರತದ ರಾಜ್ಯ ಸರ್ಕಾರಗಳಿಗೆ ಲಸಿಕೆ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದು, ರಾಜ್ಯಗಳಿಗೆ ಲಸಿಕೆ ಮಾರಾಟದ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರಕುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ  ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, 'ಮಾಡೆರ್ನಾ ಮತ್ತು ಫೈಜರ್‌ನಿಂದ ನೇರವಾಗಿ ಲಸಿಕೆಗಳನ್ನು ಖರೀದಿಸಲು ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಇದು ಫೈಜರ್ ಆಗಿರಲಿ ಅಥವಾ ಮಾಡೆರ್ನಾ ಆಗಿರಲಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಒಪ್ಪಂದವಾಗಿದ್ದು, , ನಾವು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ  ನಿರ್ವಹಣೆ ಮಾಡುತ್ತಿದ್ದೇವೆ. ಅಲ್ಲದೆ, ಫೈಜರ್ ಮತ್ತು ಮಾಡೆರ್ನಾ ಎರಡೂ ಸಂಸ್ಥೆಗಳೂ ಮುಂದಿನ ಕೆಲ ತಿಂಗಳಿಗೆ ಆಗುವಷ್ಟು ಲಸಿಕೆಗಳ ಆರ್ಡರ್ ಬುಕ್ ಆಗಿದೆ, ಆದ್ದರಿಂದ ಅವರು ಭಾರತದಲ್ಲಿ ಎಷ್ಟು ಪ್ರಮಾಣದ ಲಸಿಕೆಗಳನ್ನು ಒದಗಿಸಬಹುದೆಂಬ ದತ್ತಾಂಶ ಇದರ ಮೇಲೆ ಅವಲಂಬಿತವಾಗಿರುತ್ತದೆ ಎಂದು  ಹೇಳಿದ್ದಾರೆ.

ಭಾರತದಲ್ಲಿ ಪ್ರಸ್ತುತ ದೇಶೀಯ ನಿರ್ಮಿತ ಕೋವಿಡ್ ಲಸಿಕೆಗಳಾದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಬಳಕೆ ಮಾಡುತ್ತಿದ್ದು, ಮೂರನೇ ಲಸಿಕೆಯಾಗಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಬಳಕೆಗಾಗಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ದೇಶದಲ್ಲಿ ಇದೀಗ ಈ ಲಸಿಕೆಯ ಸಣ್ಣ ಪ್ರಮಾಣದ  ಬಳಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲೇ ಈ ಲಸಿಕೆ ತಯಾರಿಸಲು ಅನುಮತಿ ಕೂಡ ಪಡೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com