ಕೋವಿಡ್-19 ಲಸಿಕೆಗಳ ವ್ಯರ್ಥ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರಲಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ದೇಶದಲ್ಲಿ ಕೋವಿಡ್ ಲಸಿಕೆಗಳಿಗೆ ವ್ಯಾಪಕ ಅಭಾವ ಉಂಟಾಗಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಲಸಿಕೆಗಳ ವ್ಯರ್ಥದ ಮೇಲೆ ಸಂಪೂರ್ಣ ನಿಯಂತ್ರಣ ಹೇರುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕೋವಿಡ್-19 ಲಸಿಕೆ ನೀಡಿಕೆ (ಸಂಗ್ರಹ ಚಿತ್ರ)
ಕೋವಿಡ್-19 ಲಸಿಕೆ ನೀಡಿಕೆ (ಸಂಗ್ರಹ ಚಿತ್ರ)

ನವದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆಗಳಿಗೆ ವ್ಯಾಪಕ ಅಭಾವ ಉಂಟಾಗಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಲಸಿಕೆಗಳ ವ್ಯರ್ಥದ ಮೇಲೆ ಸಂಪೂರ್ಣ ನಿಯಂತ್ರಣ ಹೇರುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

States have been urged repeatedly to keep vaccine wastage below 1%, many States like Jharkhand (37.3%), Chhattisgarh (30.2%), Tamil Nadu (15.5%), Jammu & Kashmir (10.8%), Madhya Pradesh (10.7%) are reporting much higher wastage than the national average (6.3%): Ministry of Health

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ವ್ಯರ್ಥದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಲಸಿಕೆಗಳಿಗೆ ಅಭಾವ ಇರುವ ಈ ಹೊತ್ತಿನಲ್ಲಿ ಇಂತಹ ನಡೆ ದುಬಾರಿಯಾಗಿ ಪರಿಣಮಿಸುತ್ತಿದೆ. ಜಾರ್ಖಂಡ್, ತಮಿಳುನಾಡು, ಛತ್ತೀಸ್ ಘಡ  ಸೇರಿದಂತೆ ಸಾಕಷ್ಟು ರಾಜ್ಯಗಳಲ್ಲಿ ಲಸಿಕೆ ವ್ಯರ್ಥ ಪ್ರಮಾಣ ಹೆಚ್ಚಿದೆ. ಪ್ರಮುಖವಾಗಿ ಜಾರ್ಖಂಡ್ (37.3%), ಛತ್ತೀಸ್‌ಗಢ (30.2%), ತಮಿಳುನಾಡು (15.5%), ಜಮ್ಮು ಮತ್ತು ಕಾಶ್ಮೀರ (10.8%), ಮಧ್ಯಪ್ರದೇಶ (10.7%) ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಲಸಿಕೆ ವ್ಯರ್ಥ ಪ್ರಮಾಣ ರಾಷ್ಟ್ರೀಯ  ಸರಾಸರಿ (6.3%) ಗಿಂತ ಹೆಚ್ಚಿದೆ. ಹೀಗಾಗಿ ಲಸಿಕೆ ವ್ಯರ್ಥ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವಂತೆ ರಾಜ್ಯಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com