ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ 1,000 ಕೋಟಿ ರೂ. ಮಾನನಷ್ಟ ನೋಟೀಸ್‌

ಅಲೋಪತಿ ವೈದ್ಯ ಪದ್ದತಿ ಹಾಗೂ ಔಷಧಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ ಉತ್ತರಾಖಂಡ ರಾಜ್ಯದ ವೈದ್ಯರ ತಂಡ 1,000 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡಿದೆ.
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ಡೆಹ್ರಾಡೂನ್: ಅಲೋಪತಿ ವೈದ್ಯ ಪದ್ದತಿ ಹಾಗೂ ಔಷಧಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ ಉತ್ತರಾಖಂಡ ರಾಜ್ಯದ ವೈದ್ಯರ ತಂಡ 1,000 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡಿದೆ.

15 ದಿನಗಳಲ್ಲಿ ಭಾಬಾ ರಾಂ ದೇವ್ ಲಿಖಿತ ಕ್ಷಮಾಪಣೆ ಕೋರಬೇಕು, ಇಲ್ಲವಾದರೆ ರೂ 1,000 ಕೋಟಿ ರೂ ಮಾನನಷ್ಟ ದಾವೆ ಎದುರಿಸಬೇಕು ಉತ್ತರಾಖಂಡ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ನೋಟೀಸ್ ಕಳುಹಿಸಿದೆ. ಬಾಬಾ ರಾಮ್ ದೇವ್ ಅವರ ವಿರುದ್ಧ ಕೂಡಲೇ ಕಠಿಣ ಕ್ರಮ  ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಅವರಿಗೂ ಪತ್ರ ಬರೆದಿದೆ.

ಅಲೋಪಥಿ ವೈದ್ಯಪದ್ದತಿ ಹಾಗೂ ಔಷಧಿಗಳ ಬಗ್ಗೆ ಬಾಬಾ ರಾಮ್ ದೇವ್ ಇತ್ತೀಚಿಗೆ ನೀಡಿದ್ದ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 'ಅಲೋಪತಿ ಒಂದು ನಿಷ್ಪ್ರಯೋಜಕ ಚಿಕಿತ್ಸೆ' ಎಂಬ ಅವರ ಹೇಳಿಕೆಯ ವೀಡಿಯೊ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಿಂದ ಮೆಡಿಕಲ್ ಕೌನ್ಸಿಲ್  ಆಫ್ ಇಂಡಿಯಾ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು.

‘ಅಲೋಪತಿ ವೈದ್ಯ ಪದ್ದತಿ ಹಾಗೂ ಔಷಧಿಗಳ ಕುರಿತು ನಿಮ್ಮ ಅಭಿಪ್ರಾಯಗಳು ಅತ್ಯಂತ ದುರದೃಷ್ಟಕರ. ಇದು ಕೊರೊನ ಯೋಧರನ್ನು ಅವಮಾನಿಸುವುದಲ್ಲದೆ .ಆರೋಗ್ಯ ಕಾರ್ಯಕರ್ತರ ಮನೋ ಸ್ಥೈರ್ಯವನ್ನು ಹಾಳು ಗೆಡವಲಿದೆ ಎಂದು ಹೇಳಿದ್ದರು. ನಿಮ್ಮ ಹೇಳಿಕೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಿ ಎಂದು  ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಾಬಾ ರಾಮ್ ದೇವ್ ಅವರಿಗೆ ಬರೆದ ಪತ್ರದಲ್ಲಿಸೂಚಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಾಬಾ ರಾಮ್ ದೇವ್ ಕೂಡಲೇ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು, ಎಲ್ಲಾ ರೀತಿಯ ವೈದ್ಯಕೀಯ ಪದ್ದತಿಗಳನ್ನು ಗೌರವಿಸುವುದಾಗಿ ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com