ತಮಿಳುನಾಡಿನಲ್ಲಿ ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ ಎನ್ಐಎ

ತಮಿಳುನಾಡಿನ ಮೈಲಾಡುತುರೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಗುರುವಾರ ರಾತ್ರಿ ಐಎಸ್ಐಎಸ್ ಶಂಕಿತ ಉಗ್ರನನ್ನು ಬಂಧಿಸಿದೆ.
ಮೊಹಮ್ಮದ್ ಆಶಿಕ್
ಮೊಹಮ್ಮದ್ ಆಶಿಕ್

ಮೈಲಾಡುತುರೈ: ತಮಿಳುನಾಡಿನ ಮೈಲಾಡುತುರೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಗುರುವಾರ ರಾತ್ರಿ ಐಎಸ್ಐಎಸ್ ಶಂಕಿತ ಉಗ್ರನನ್ನು ಬಂಧಿಸಿದೆ.

ಬಂಧಿತ ಶಂಕಿತ ಉಗ್ರ 25 ವರ್ಷದ ಎ ಮೊಹಮ್ಮದ್ ಆಶಿಕ್ ಎಂದು ಗುರುತಿಸಲಾಗಿದ್ದು, ಈ ಮುಂಜೆ 2018ರಲ್ಲಿ ಕೊಯಮತ್ತೂರಿನಲ್ಲಿ ಕೆಲವು ನಾಯಕರನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.

ಮಾಯಿಲಾಡುತುರೈ ಬಳಿಯ ನೀಡೂರ್ನಲ್ಲಿ ಶಂಕಿತನನ್ನು ಬಂಧಿಸಲಾಗಿದೆ. ಈ ಹಿಂದೆ 2018ರಲ್ಲಿ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್)ಗೆ ನಿಷ್ಠೆ ತೋರಿದ್ದಾರೆ ಮತ್ತು ಕೊಯಮತ್ತೂರಿನಲ್ಲಿ ಕೆಲವು ನಾಯಕರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಪ್ರಮುಖ ಶಂಕಿತನಾಗಿ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಆದಾಗ್ಯೂ, ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದ ಮೊಹಮ್ಮದ್ ಆಶಿಕ್ ವಿರುದ್ಧ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ಈಗ ಮತ್ತೆ ಆಶಿಕ್ ನನ್ನು ಬಂಧಿಸಿದೆ.

ಎನ್ಐಎ ಮೂಲಗಳ ಪ್ರಕಾರ, ತಮಿಳುನಾಡಿನ ವಿವಿಧ ಭಾಗದ ಏಳು ಜನರ ಗುಂಪು ಕೊಯಮತ್ತೂರಿನಲ್ಲಿ ಒಂದು ಗುಂಪನ್ನು ರಚಿಸಿ ಭಯೋತ್ಪಾದಕ ಸಂಘಟನೆಯಾದ ‘ಐಸಿಸ್’ಗೆ ನಿಷ್ಠರಾಗಿರುವುದಾಗಿ ಪ್ರತಿಜ್ಞೆ ಮಾಡಿತ್ತು. ಅವರು ಕೊಯಮತ್ತೂರು ಮೂಲದ ನಾಯಕರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಇದರಿಂದಾಗಿ ಕೋಮು ಸೌಹಾರ್ದತೆ ಮತ್ತು ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಎನ್‌ಐಎ ಈ ಗುಂಪನ್ನು ಬಂಧಿಸಿ 2018ರ ಸೆಪ್ಟೆಂಬರ್‌ನಲ್ಲಿ ದೆಹಲಿಯ ಎನ್‌ಐಎ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿತ್ತು.

ಕೊಯಮತ್ತೂರಿನ ಮರಕ್ಕಡೈ ಮೂಲದ ಮೊಹಮ್ಮದ್ ಆಶಿಕ್ ನನ್ನು ಪ್ರಕರಣದ ಪ್ರಮುಖ ಶಂಕಿತ ಎಂದು ಹೆಸರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com