ಆರ್ಯನ್ ಖಾನ್ ಡ್ರಗ್ ಕೇಸ್: ದೇವೇಂದ್ರ ಫಡ್ನವೀಸ್, ನವಾಬ್ ಮಲಿಕ್ ಜಟಾಪಟಿ!

ಆರ್ಯನ್ ಖಾನ್ ಡ್ರಗ್ ಪ್ರಕರಣ ಮಹಾರಾಷ್ಟ್ರ ಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಮಹಾರಾಷ್ಟ್ರ ಪ್ರಸ್ತುತ ಮಂತ್ರಿಯಾಗಿರುವ ನವಾಬ್ ಮಲಿಕ್ ಮೇಲೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಗುರುತರ ಆರೋಪ ಮಾಡಿದ್ದಾರೆ. 
ದೇವೇಂದ್ರ ಫಡ್ನವೀಸ್ ಹಾಗೂ ಆತನ ಹೆಂಡತಿ, ಡ್ರಗ್ ಪೆಡ್ಲರ್
ದೇವೇಂದ್ರ ಫಡ್ನವೀಸ್ ಹಾಗೂ ಆತನ ಹೆಂಡತಿ, ಡ್ರಗ್ ಪೆಡ್ಲರ್

ಮುಂಬೈ: ಆರ್ಯನ್ ಖಾನ್ ಡ್ರಗ್ ಪ್ರಕರಣ ಮಹಾರಾಷ್ಟ್ರ ಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಮಹಾರಾಷ್ಟ್ರ ಪ್ರಸ್ತುತ ಮಂತ್ರಿಯಾಗಿರುವ ನವಾಬ್ ಮಲಿಕ್ ಮೇಲೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಗುರುತರ ಆರೋಪ ಮಾಡಿದ್ದಾರೆ. 

ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಹಾಗೂ ಡ್ರಗ್ಸ್ ದಂಧೆಕೋರನ ಫೋಟೋವನ್ನು ನವಾಬ್ ಮಲಿಕ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಮಾಜಿ ಸಿಎಂ ಫಡ್ನವೀಸ್ ಹಾಗೂ ಮಲಿಕ್ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದ್ದು, ಡ್ರಗ್ಸ್ ದಂಧೆಕೋರ ಜೈದೀಪ್ ರಾಣಾಗೂ ನಮ್ಗೂ ಯಾವುದೇ ರೀತಿಯ ಸಂಬಂಧ ಇಲ್ಲ ಅಂತಾ ತಿಳಿಸಿದ್ದಾರೆ.  ಅಮೃತಾ ಫಡ್ನವೀಸ್ ಜೊತೆಗೆ ಫೋಟೋದಲ್ಲಿರುವ ವ್ಯಕ್ತಿ ಜೈದೀಪ್ ರಾಣಾ. ಈತ ಮುಂಬೈನ ಡ್ರಗ್ಸ್ ದಂಧೆಕೋರನಾಗಿದ್ದು, ಜೈಲು ಪಾಲಾಗಿದ್ದಾನೆ.

ಪತ್ನಿಯ ಫೋಟೋ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವೀಸ್, ನಾಲ್ಕೈದು ವರ್ಷಗಳ ಹಿಂದೆ ಈ ಫೋಟೋ ತೆಗೆಯಲಾಗಿದೆ. ಜೈದೀಪ್ ರಾಣಾ ಡ್ರಗ್ಸ್ ವಿಚಾರದಲ್ಲಿ ಜೈಲಿಗೆ ಹೋಗೋಕು ಮುನ್ನ ಸಭೆಯೊಂದರಲ್ಲಿ ಪತ್ನಿ ಜೊತೆಗೆ ಮೀಟ್ ಮಾಡಿದ್ದರು. ಆನಂತರ ಡ್ರಗ್ಸ್ ಕೇಸ್ ನಲ್ಲಿ ಜೈಲಿಗೆ ಹೋಗಿದ್ದಾರೆ ಅಂತಾ ಫಡ್ನವೀಸ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com