ಕೇರಳದಲ್ಲಿ ಝೀಕಾ ವೈರಸ್ ಹೆಚ್ಚಳ: ಕಣ್ಪುರ್ ನಲ್ಲಿ ಒಂದೇ ದಿನ 30 ಮಂದಿಗೆ ಪಾಸಿಟೀವ್: ಒಟ್ಟು ಪ್ರಕರಣ 66 ಕ್ಕೆ ಏರಿಕೆ
ಕೇರಳದಲ್ಲಿ ಝಿಕಾ ವೈರಾಣು ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು ಕಣ್ಪುರ್ ಪ್ರದೇಶದಲ್ಲಿ ಒಂದೇ ದಿನ 30 ಮಂದಿಗೆ ಝಿಕಾ ಸೋಂಕು ದೃಢಪಟ್ಟಿದೆ.
Published: 05th November 2021 02:54 PM | Last Updated: 05th November 2021 02:54 PM | A+A A-

ಝಿಕಾ ವೈರಾಣು ಹರಡುವ ಸೊಳ್ಳೆ (ಸಂಗ್ರಹ ಚಿತ್ರ)
ತಿರುವನಂತಪುರಂ: ಕೇರಳದಲ್ಲಿ ಝಿಕಾ ವೈರಾಣು ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು ಕಣ್ಪುರ್ ಪ್ರದೇಶದಲ್ಲಿ ಒಂದೇ ದಿನ 30 ಮಂದಿಗೆ ಝಿಕಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ಒಟ್ಟು ಝಿಕಾ ಸೋಂಕು ಪ್ರಕರಣದ ಸಂಖ್ಯೆ 66 ಕ್ಕೆ ಏರಿಕೆಯಾಗಿದೆ.
ಸೋಂಕು ಪೀಡಿತರ ಪೈಕಿ 45 ಮಂದಿ ಪುರುಷರಾಗಿದ್ದು 21 ಮಂದಿ ಮಹಿಳೆಯರಾಗಿದ್ದಾರೆ. ಕಣ್ಪುರದಲ್ಲಿ ಮೊದಲ ಝಿಕಾ ವೈರಾಣು ಪ್ರಕರಣ ವರದಿಯಾಗಿದ್ದು ಅ.23 ರಂದು. ಐಎಎಫ್ ವಾರೆಂಟ್ ಅಧಿಕಾರಿಗೆ ಸೋಂಕು ತಗುಲುವ ಮೂಲಕ.
ಝಿಕಾ ವೈರಾಣು ಸೊಳ್ಳೆಗಳಿಂದ ಹರಡುವ ಸೋಂಕಾಗಿದ್ದು, ಸೊಳ್ಳೆಗಳಿಂದ ಮುಕ್ತಿ ಪಡೆಯುವುದೊಂದೇ ಇದನ್ನು ತಡೆಗಟ್ಟುವುದಕ್ಕೆ ಇರುವ ದಾರಿಯಾಗಿದೆ.
ಝಿಕಾ ವೈರಾಣು ಹರಡುವಿಕೆ ತಡೆಗಟ್ಟುವುದಕ್ಕಾಗಿ ಆರೋಗ್ಯ ತಂಡಗಳು ಹಲವು ಕ್ರಮಗಳನ್ನು ಕೈಗೊಂಡಿದ್ದು, ಲಾರ್ವಾ ನಿವಾರಕ ಸಿಂಪಡಣೆ, ಜ್ವರವಿರುವ ರೋಗಿಗಳನ್ನು ಪತ್ತೆ ಮಾಡುವುದು ಮುಂತಾದ ಸಮರ್ಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.