ಡ್ರಗ್ಸ್ ಕೇಸ್: ಪ್ರಭಾಕರ್ ಸೈಲ್ ವಿಚಾರಣೆಗಾಗಿ ವಾಂಖೆಡೆಯೊಂದಿಗೆ ಕಾರ್ಡೆಲಿಯಾ ಕ್ರೂಸ್ ಹಡಗಿಗೆ ಎನ್ ಸಿಬಿ ಭೇಟಿ

ಮುಂಬೈ ಕ್ರೂಸ್ ಹಡಗು ಮೇಲಿನ ದಾಳಿ ಪ್ರಕರಣವನ್ನು ಸೆಂಟ್ರಲ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಂಡ ವಹಿಸಿಕೊಂಡ ನಂತರ, ಅಕ್ಟೋಬರ್ 2 ರಂದು ರೇವ್ ಪಾರ್ಟಿ ಆಯೋಜನೆ ಆರೋಪವಿರುವ ಕಾರ್ಡೆಲಿಯಾ ಕ್ರೂಸ್ ಹಡಗಿನ ಭೇಟಿ ಮಾಡಿರುವುದಾಗಿ ಎನ್ ಸಿಬಿ ಸೋಮವಾರ ಮಾಹಿತಿ ನೀಡಿದೆ.
ಎನ್ ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ
ಎನ್ ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ

ಮುಂಬೈ: ಮುಂಬೈ ಕ್ರೂಸ್ ಹಡಗು ಮೇಲಿನ ದಾಳಿ ಪ್ರಕರಣವನ್ನು ಸೆಂಟ್ರಲ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಂಡ ವಹಿಸಿಕೊಂಡ ನಂತರ, ಅಕ್ಟೋಬರ್ 2 ರಂದು ರೇವ್ ಪಾರ್ಟಿ ಆಯೋಜನೆ ಆರೋಪವಿರುವ ಕಾರ್ಡೆಲಿಯಾ ಕ್ರೂಸ್ ಹಡಗಿನ ಭೇಟಿ ಮಾಡಿರುವುದಾಗಿ ಎನ್ ಸಿಬಿ ಸೋಮವಾರ ಮಾಹಿತಿ ನೀಡಿದೆ.

ಉಪ ಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿನ ಎಸ್ ಐಟಿ ತಂಡ, ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ತಂಡದೊಂದಿಗೆ ಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲಿದ್ದ ಕಾರ್ಡೆಲಿಯಾ ಕ್ರೂಸ್  ಹಡಗನ್ನು ಶನಿವಾರ ಭೇಟಿ ನೀಡಿತ್ತು ಎಂದು ಎನ್ ಸಿಬಿ ಹೇಳಿದೆ.

ವಾಂಖೆಡೆ ದಾಖಲಾತಿಗಳು ಮತ್ತಿತರ ಗುಪ್ತಚರ ಮಾಹಿತಿಯನ್ನು ಸಿಂಗ್ ಅವರಿಗೆ ಹಸ್ತಾಂತರಿಸಿದರು. ಸಿಂಗ್ ಮತ್ತು ವಾಖೆಂಡೆ ಸುಮಾರು 2 ಗಂಟೆಗಳ ಕಾಲ ಕ್ರೂಸ್ ನಲ್ಲಿದ್ದರು. ಎನ್ ಸಿಬಿ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್, ಸೋಮವಾರ ದೆಹಲಿಯಿಂದ ಮುಂಬೈಗೆ ತೆರಳಿದ್ದಾರೆ. ಡ್ರಗ್ಸ್ ಕೇಸಿನ ಪ್ರಮುಖ ಸಾಕ್ಷಿಧಾರ ಪ್ರಭಾಕರ್ ಸ್ಮೈಲ್  ಹೇಳಿಕೆಯನ್ನು ದಾಖಲಿಸುವಂತೆ ತನಿಖಾ ತಂಡ ಸಮನ್ಸ್ ನೀಡಿ್ತು. ಇಂದು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಏಜೆನ್ಸಿ ಹೇಳಿರುವುದಾಗಿ ಎನ್ ಸಿಬಿ ಹೇಳಿದೆ.

ಡ್ರಗ್ಸ್ ಕೇಸಿಗೆ ಸಂಬಂಧಿಸಿದಂತೆ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ತನಿಖೆಗಾಗಿ ಜ್ಞಾನೇಶ್ವರ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಕಿರಣ್ ಗೋಸಾವಿ ಅವರ ಬಾಡಿಗಾರ್ಡ್ ಆಗಿರುವ ಸೈಲ್ ಮುಂಬೈ ಕ್ರೂಸ್ ಹಡಗು ಮೇಲಿನ ದಾಳಿಯಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿದ್ದಾರೆ. 

ಈ ಮಧ್ಯೆ ಇದೇ ಪ್ರಕರಣದಲ್ಲಿ ಇತ್ತೀಚಿಗೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್, ಭಾನುವಾರ ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಜ್ವರದ ಕಾರಣದಿಂದ ವಿಚಾರಣೆಗೆ ಹಾಜರಾಗಲಿಲ್ಲ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಯಾರ ಹೆಸರನ್ನು ನಾನು ತೆಗೆದುಕೊಳ್ಳುವುದಿಲ್ಲ,ಆದರೆ, ಅಗತ್ಯಬಿದ್ದರೆ ವಿಚಾರಣೆಗಾಗಿ ಎಲ್ಲರನ್ನು ಕರೆಯಲಾಗುವುದು, ಪ್ರಭಾಕರ್ ಸ್ಮೈಲ್ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿರುವುದಾಗಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com