ಬುದ್ಧನ ಪ್ರತಿಮೆ ಧ್ವಂಸ ಮಾಡಿದಕ್ಕೆ ಅಮೆರಿಕಾದಿಂದ ತಾಲಿಬಾನ್ ಮೇಲೆ ಬಾಂಬ್ ದಾಳಿ: ಸಿಎಂ ಯೋಗಿ ಆದಿತ್ಯನಾಥ್
20 ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಮಾಡಿದ್ದಕ್ಕಾಗಿ ತಾಲಿಬಾನಿಗಳ ಮೇಲೆ ಅಮೆರಿಕಾ ಬಾಂಬ್ ದಾಳಿ ನಡೆಸಿದೆ. ಇದು ಅವರಿಗೆ ದೇವರು ನೀಡಿರುವ ಶಿಕ್ಷೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಲಿಬಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published: 14th November 2021 09:07 PM | Last Updated: 14th November 2021 09:07 PM | A+A A-

ಯೋಗಿ ಆದಿತ್ಯನಾಥ್
ಲಖನೌ: 20 ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಮಾಡಿದ್ದಕ್ಕಾಗಿ ತಾಲಿಬಾನಿಗಳ ಮೇಲೆ ಅಮೆರಿಕಾ ಬಾಂಬ್ ದಾಳಿ ನಡೆಸಿದೆ. ಇದು ಅವರಿಗೆ ದೇವರು ನೀಡಿರುವ ಶಿಕ್ಷೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಲಿಬಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಗವಾನ್ ಬುದ್ಧ ಯಾವಾಗಲೂ ಅಹಿಂಸೆ, ಸಂದೇಶ ಶಾಂತಿ, ಸಹೋದರತ್ವವನ್ನು ಪ್ರತಿಪಾದಿಸುತ್ತಿದ್ದ. ಅಂತ ವ್ಯಕ್ತಿಯ ಪ್ರತಿಮೆಯನ್ನು ನಾಶಪಡಿಸಿರುವುದಕ್ಕೆ ದೇವರು ಈ ರೀತಿ ಶಿಕ್ಷೆ ನೀಡಿದ್ದಾನೆ ಎಂದು ಮುಖ್ಯಮಂತ್ರಿ ಹೇಳಿದರು.
ಲಕ್ನೋದಲ್ಲಿ ನಡೆದ ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, 20 ವರ್ಷಗಳ ಹಿಂದೆ ಅಫ್ಘಾನಿಸ್ತಾನದ ಬಾಮಿಯಾನ್ ನಲ್ಲಿ ತಾಲಿಬಾನಿಗಳು 2,500 ವರ್ಷಗಳಷ್ಟು ಹಳೆಯ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು.
ತಾಲಿಬಾನಿಗಳ ಅನಾಗರಿಕತೆಯನ್ನು ಜಗತ್ತು ನೋಡಿದೆ. ಬುದ್ಧ ಎಂದಿಗೂ ಯುದ್ಧ ಮಾಡಲು ಹೇಳಿಲ್ಲ. ಆತ ಯಾವಾಗಲೂ ಮಾನವೀಯತೆಗೆ ಸ್ಫೂರ್ತಿಯ ಮೂಲ ಮತ್ತು ಭಕ್ತಿಯ ಕೇಂದ್ರವಾಗಿರುತ್ತಾನೆ. ಯಾರೂ ಕೂಡ ಇಂತ ವ್ಯಕ್ತಿಯ ಪ್ರತಿಮೆಯನ್ನು ನಾಶಪಡಿಸಿದ ದೃಶ್ಯವನ್ನು ಮರೆಯಬಾರದು ಎಂದರು.