ಪೊಲೀಸರು ಸೇರಿದಂತೆ 400ಕ್ಕೂ ಹೆಚ್ಚು ಜನರಿಂದ ಅಪ್ರಾಪ್ತ ವಿವಾಹಿತ ಮಹಿಳೆ ಮೇಲೆ ಕಳೆದ 6 ತಿಂಗಳಿಂದ ಅತ್ಯಾಚಾರ!
ಕೆಲಸದ ನೆಪದಲ್ಲಿ ಅಪ್ರಾಪ್ತ ವಿವಾಹಿತ ಮಹಿಳೆಯ ಮೇಲೆ ಆರು ತಿಂಗಳಲ್ಲಿ 400ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೀಡ್ನ ಅಂಬೇಜೋಗೈಯಲ್ಲಿ ನಡೆದಿದೆ.
Published: 14th November 2021 09:28 PM | Last Updated: 14th November 2021 09:28 PM | A+A A-

ಸಾಂದರ್ಭಿಕ ಚಿತ್ರ
ಬೀಡ್: ಕೆಲಸದ ನೆಪದಲ್ಲಿ ಅಪ್ರಾಪ್ತ ವಿವಾಹಿತ ಮಹಿಳೆಯ ಮೇಲೆ ಆರು ತಿಂಗಳಲ್ಲಿ 400ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೀಡ್ನ ಅಂಬೇಜೋಗೈಯಲ್ಲಿ ನಡೆದಿದೆ.
ಘಟನೆಯ ನಂತರ ಸಂತ್ರಸ್ತೆ ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಈ ವೇಳೆ ಮಕ್ಕಳ ಕಲ್ಯಾಣ ಸಮಿತಿಯು ಮಗುವಿನ ಗರ್ಭಪಾತಕ್ಕೆ ಮುಂದಾಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಅಂಬೇಜೋಗೈ ಗ್ರಾಮಾಂತರ ಠಾಣೆಯಲ್ಲಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಅಪ್ರಾಪ್ತ ಬಾಲಕಿಯ ತಾಯಿ ಸುಮಾರು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ತಂದೆ ಆಕೆಗೆ ಮದುವೆ ಮಾಡಿದ್ದರು. ಮಾವನ ಕಿರುಕುಳದಿಂದ ಬೇಸತ್ತಿದ್ದಳು. ಕೆಲವು ದಿನಗಳ ನಂತರ ಅವಳು ಕೆಲಸ ಹುಡುಕಿಕೊಂಡು ಅಂಬೇಜೋಗಿ ನಗರಕ್ಕೆ ಹೋದಳು. ಆಕೆಗೆ ಕೆಲಸ ಕೊಡಿಸುವುದಾಗಿ ಇಬ್ಬರು ವ್ಯಕ್ತಿಗಳು ಅಂಬೆಜೋಗಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಅದರ ನಂತರ, ಪೊಲೀಸ್ ಅಧಿಕಾರಿ ಸೇರಿದಂತೆ ನೂರಾರು ಜನರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಒಟ್ಟಾರೆಯಾಗಿ ಅವಳು 400 ವಿಭಿನ್ನ ಜನರಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದಾಳೆ.
ಡೊಂಬಿವಿಲಿ ಸಾಮೂಹಿಕ ಅತ್ಯಾಚಾರ ಪ್ರಕರಣ
ಇತ್ತೀಚೆಗೆ ಮುಂಬೈ ಸಮೀಪದ ಥಾಣೆ ಜಿಲ್ಲೆಯ ಡೊಂಬಿವಿಲಿ ಪ್ರದೇಶದಲ್ಲಿ 33 ಯುವಕರು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ವರ್ಷದ ಜನವರಿ 29 ಮತ್ತು ಸೆಪ್ಟೆಂಬರ್ 22 ರ ನಡುವೆ ಡೊಂಬಿವಿಲಿ ಪ್ರದೇಶದ ವಿವಿಧ ಸ್ಥಳಗಳಲ್ಲಿ 33 ಯುವಕರು ತನ್ನ ಮೇಲೆ ಹಲವಾರು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಳು. ಜನವರಿಯಲ್ಲಿ ಆರೋಪಿ ಯುವಕನೊಬ್ಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹೇಯ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿದ್ದ. ನಂತರ ಇತರ ಆರೋಪಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಬ್ಲ್ಯಾಕ್‌ಮೇಲ್ ಮಾಡಲು ವೀಡಿಯೊವನ್ನು ಬಳಸಲಾಗಿತ್ತು.