'ವಾಯುಮಾಲಿನ್ಯ ನಿಯಂತ್ರಿಸಲು ಕನಿಷ್ಠ ತಿಂಗಳಲ್ಲಿ ಒಮ್ಮೆಯಾದರೂ ಸೈಕಲ್, ಬಸ್ಸಿನಲ್ಲಿ ಪ್ರಯಾಣಿಸಿ': ದೆಹಲಿ ನಿವಾಸಿಗಳಿಗೆ ಮನೀಶ್ ಸಿಸೋಡಿಯಾ ಮನವಿ 

ದೆಹಲಿಯ ವಾತಾವರಣ ಮಾಲಿನ್ಯ ಗುಣಮಟ್ಟವು ಭಾನುವಾರ ತೀವ್ರ ಮಟ್ಟದಿಂದ ಅತ್ಯಂತ ಕಳಪೆ ಮಟ್ಟಕ್ಕೆ ಸುಧಾರಿಸಿದ್ದು, ಎಕ್ಯುಐ 338ರಷ್ಟು ದಾಖಲಾಗಿದೆ.
ದೆಹಲಿಯಲ್ಲಿ ನಿನ್ನೆ ಕಂಡುಬಂದಿದ್ದು ಹೀಗೆ
ದೆಹಲಿಯಲ್ಲಿ ನಿನ್ನೆ ಕಂಡುಬಂದಿದ್ದು ಹೀಗೆ

ನವದೆಹಲಿ: ದೆಹಲಿಯ ವಾತಾವರಣ ಮಾಲಿನ್ಯ ಗುಣಮಟ್ಟವು ಭಾನುವಾರ ತೀವ್ರ ಮಟ್ಟದಿಂದ ಅತ್ಯಂತ ಕಳಪೆ ಮಟ್ಟಕ್ಕೆ ಸುಧಾರಿಸಿದ್ದು, ಎಕ್ಯುಐ 338ರಷ್ಟು ದಾಖಲಾಗಿದೆ.

ಫರಿದಾಬಾದ್, ಗಾಜಿಯಾಬಾದ್, ಗುರ್ಗಾಂವ್ ಮತ್ತು ನೋಯ್ಡಾದ ನೆರೆಯ ಪ್ರದೇಶಗಳ ವಾಯು ಗುಣಮಟ್ಟ ಸೂಚ್ಯಂಕವು ಕ್ರಮವಾಗಿ 312, 368, 301 ಮತ್ತು 357 ನಲ್ಲಿ ದಾಖಲಾಗಿದೆ.ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು ಇಂದು ಬೆಳಗ್ಗೆ 9.05 ಗಂಟೆಗೆ 338 ಕ್ಕೆ ದಾಖಲಾಗಿದೆ.

ದೆಹಲಿಯ ಲೋಧಿ ರಸ್ತೆ, ಪೂಸಾ ರಸ್ತೆ, ಚಾಂದಿನಿ ಚೌಕ್ ಮತ್ತು ದೆಹಲಿ ವಿಮಾನ ನಿಲ್ದಾಣದ ವಾಯು ಗುಣಮಟ್ಟ ಸೂಚ್ಯಂಕವು ಕ್ರಮವಾಗಿ 295, 313, 352 ಮತ್ತು 321 ನಲ್ಲಿ ದಾಖಲಾಗಿದೆ ಎಂದು ಸಮೀರ್ ಆಪ್ ತಿಳಿಸಿದೆ. ಶೂನ್ಯ ಮತ್ತು 50 ರ ನಡುವಿನ ಎಕ್ಯುಐನ್ನು  "ಉತ್ತಮ", 51 ಮತ್ತು 100 "ತೃಪ್ತಿಕರ", 101 ಮತ್ತು 200 "ಮಧ್ಯಮ", 201 ಮತ್ತು 300 "ಕಳಪೆ", 301 ಮತ್ತು 400 "ಅತ್ಯಂತ ಕಳಪೆ" ಮತ್ತು 401 ಮತ್ತು 500 "ತೀವ್ರ" ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಹೆಚ್ಚಾಗುತ್ತಿದ್ದಂತೆ ನಿನ್ನೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಲವು ತುರ್ತು ಕ್ರಮಗಳನ್ನು ಪ್ರಕಟಿಸಿದ್ದಾರೆ. ಒಂದು ವಾರದವರೆಗೆ ಶಾಲೆಗಳನ್ನು ಮುಚ್ಚುವುದು, ನಿರ್ಮಾಣ ಕೆಲಸಗಳಿಗೆ ನಿಷೇಧ, ಸರ್ಕಾರಿ ಕಚೇರಿಗಳಲ್ಲಿ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಸೌಲಭ್ಯ ಮೊದಲಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಸುಪ್ರೀಂ ಕೋರ್ಟ್ ಮುಂದೆ ಸರ್ಕಾರದ ಲಾಕ್ ಡೌನ್ ಯೋಜನೆಯನ್ನು ಮಂಡಿಸುವ ಯೋಜನೆಯಿದೆ ಎಂದು ಕೂಡ ಕೇಜ್ರಿವಾಲ್ ತಿಳಿಸಿದ್ದಾರೆ.

ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ 10.1 ದಾಖಲಾಗಿದೆ, ಋತುವಿನ ಸರಾಸರಿಗಿಂತ ಮೂರು ಹಂತಗಳು ಕಡಿಮೆಯಾಗಿದೆ. ಬೆಳಿಗ್ಗೆ 8.30 ಕ್ಕೆ ದಾಖಲಾದ ಸಾಪೇಕ್ಷ ಆರ್ದ್ರತೆಯು ಶೇಕಡಾ 83 ರಷ್ಟಿತ್ತು.ಹವಾಮಾನ ಕಚೇರಿಯು ಮುಖ್ಯವಾಗಿ ಸ್ಪಷ್ಟವಾದ ಆಕಾಶವನ್ನು ಮುಂಜಾನೆ ಮಧ್ಯಮ ಮಂಜಿನ ಜೊತೆಗೆ ಗರಿಷ್ಠ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಎಂದು ನಿರೀಕ್ಷಿಸಲಾಗಿದೆ.

ಸೈಕಲ್ ಅಥವಾ ಬಸ್ಸಿನಲ್ಲಿ ಪ್ರಯಾಣಿಸಿ: ವಾಯುಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ಜನರು ಕನಿಷ್ಠ ತಿಂಗಳಲ್ಲಿ ಒಮ್ಮೆಯಾದರೂ ಕಾರು, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಬದಲು ಸೈಕಲ್ ಅಥವಾ ಸಾರ್ವಜನಿಕ ಬಸ್ಸಿನಲ್ಲಿ ಪ್ರಯಾಣಿಸಿ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿ ನಿವಾಸಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ದೆಹಲಿ ಸರ್ಕಾರದ ರಹಗಿರಿ ಕಾರ್ಯಕ್ರಮವನ್ನು ನಿನ್ನೆ ಪಶ್ಚಿಮ ವಿನೋದ್ ನಗರ, ಪತ್ಪರ್ಗಂಜ್ ನಲ್ಲಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಹ್ಗಿರಿ ಕಾರ್ಯಕ್ರಮವನ್ನು ದೆಹಲಿಯ ಪ್ರತಿ ಮೂಲೆ ಮೂಲೆಗೆ ಕೊಂಡೊಯ್ಯಲಿದ್ದೇವೆ. ಆರಂಭದಲ್ಲಿ 6 ಸ್ಥಳಗಳಲ್ಲಿ 6 ವಾರಗಳ ಕಾಲ ರ್ಯಾಲಿ ನಡೆಸುತ್ತೇವೆ. ನಿಮ್ಮ ಪ್ರದೇಶದಲ್ಲಿ ಮಾಲಿನ್ಯವನ್ನು ನಿಯಂತ್ರಿಸುವುದು ಇದರ ಸಂದೇಶ ಎಂದು ಟ್ವೀಟ್ ಮಾಡಿದ್ದಾರೆ.

ಮಾಲಿನ್ಯವನ್ನು ಕಡಿಮೆ ಮಾಡಲು, ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡುವ ಪ್ರಮುಖ ಜವಾಬ್ದಾರಿ ಸರ್ಕಾರದ ಮೇಲಿದೆ. ನಂತರ ಕೈಗಾರಿಕಾ ವಲಯ ಮತ್ತು ಮೂರನೆಯದಾಗಿ, ನಾವು ವ್ಯಕ್ತಿಗಳಾಗಿ; ಸೈಕಲ್/ಬಸ್ ಮೂಲಕ ಪ್ರಯಾಣಿಸಲು ಕನಿಷ್ಠ ಒಂದು ದಿನವನ್ನು ತೆಗೆದುಕೊಳ್ಳಿ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ನಿರ್ಮಾಣ ಉದ್ಯಮದ ಜನರು ನಿರ್ಮಾಣ ಚಟುವಟಿಕೆಗಳ ಸಮಯದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವ ತಂತ್ರಜ್ಞಾನವನ್ನು ತರಬೇಕು. ಮಾಲಿನ್ಯವನ್ನು ತಡೆಗಟ್ಟಲು ಮತ್ತು ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸಲು ಜನರು ತಿಂಗಳಿಗೆ ಒಮ್ಮೆಯಾದರೂ ಸೈಕಲ್ ಸವಾರಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com