ದೆಹಲಿ ಮಾಲಿನ್ಯ: ಅನಿವಾರ್ಯವಲ್ಲದ ನಿರ್ಮಾಣ, ಸಾರಿಗೆ, ವಿದ್ಯುತ್ ಸ್ಥಾವರಗಳನ್ನು ನಿಲ್ಲಿಸುವಂತೆ ಕೇಂದ್ರಕ್ಕೆ 'ಸುಪ್ರೀಂ' ನಿರ್ದೇಶನ

ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯು ವಿಷಕಾರಿಯಾಗುತ್ತಿದೆ. ವಾಯು ಮಾಲಿನ್ಯದಿಂದ ಜನರ ಜೀವನ ಕಷ್ಟಕರವಾಗಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಎದುರಿಸಲು ತುರ್ತು ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯು ವಿಷಕಾರಿಯಾಗುತ್ತಿದೆ. ವಾಯು ಮಾಲಿನ್ಯದಿಂದ ಜನರ ಜೀವನ ಕಷ್ಟಕರವಾಗಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಎದುರಿಸಲು ತುರ್ತು ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವನ್ನು ನಿಭಾಯಿಸಲು ನಿರ್ಮಾಣ, ಅನಿವಾರ್ಯವಲ್ಲದ ಸಾರಿಗೆ, ವಿದ್ಯುತ್ ಸ್ಥಾವರಗಳನ್ನು ನಿಲ್ಲಿಸುವುದು ಮತ್ತು ಮನೆಯಿಂದಲೇ ಕೆಲಸ ಕಾರ್ಯಗತಗೊಳಿಸುವುದು ಮುಂತಾದ ವಿಷಯಗಳ ಕುರಿತು ನಾಳೆ ತುರ್ತು ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ಇನ್ನು ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಯಾವುದೇ ಕ್ರಮಕೈಗೊಳ್ಳದ ದೆಹಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕುಂಟು ನೆಪಗಳನ್ನು ಕೊಡದೇ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೋರ್ಟ್​ ಹೇಳಿದೆ. 

ನವೆಂಬರ್ ಮೊದಲ ವಾರದಿಂದ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಆತಂಕಕಾರಿ ಮಟ್ಟಕ್ಕೆ ಏರಿದೆ. ಗಾಳಿಯ ಗುಣಮಟ್ಟವು ಅತ್ಯಂತ ಕಳಪೆಯಾಗಿದೆ. ಮಾಲಿನ್ಯವನ್ನು ನಿಯಂತ್ರಿಸಲು ಸಂಪೂರ್ಣ ಲಾಕ್‌ಡೌನ್‌ನಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಎಎಪಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಲ್ಲದೇ ನೆರೆಯ ರಾಜ್ಯಗಳ ಎನ್‌ಸಿಆರ್ ಪ್ರದೇಶಗಳಲ್ಲಿ ಇದನ್ನು ಜಾರಿಗೊಳಿಸಿದರೆ ತುಂಬಾ ಅನುಕೂಲವಾಗುತ್ತದೆ. ಲಾಕ್‌ಡೌನ್ ಗಾಳಿಯ ಗುಣಮಟ್ಟದ ಮೇಲೆ ಸೀಮಿತ ಪರಿಣಾಮ ಬೀರಬಹುದು ಎಂದು ದೆಹಲಿ ಸರ್ಕಾರ ಹೇಳಿದೆ.

ದೆಹಲಿ ಮಾಲಿನ್ಯದ ಕುರಿತು ಸುಪ್ರೀಂ ಕೋರ್ಟ್‌ ಹೇಳಿದ್ದೇನು?
* ದೆಹಲಿ ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾದ ಅಂಶಗಳೆಂದರೆ, ಸಾರಿಗೆ, ಕೈಗಾರಿಕೆಗಳು, ವಾಹನ ದಟ್ಟಣೆಯನ್ನು ಹೊರತುಪಡಿಸಿ ಕೆಲವು ಪ್ರದೇಶಗಳಲ್ಲಿ ಹುಲ್ಲು ಸುಡುವುದು ಕಾರಣವೆಂದು ಸುಪ್ರೀಂಕೋರ್ಟ್ ತೀರ್ಮಾನಿಸಿದೆ.

* ಮಾಲಿನ್ಯದ ವಿಷಯದಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನು ದೂಷಿಸಿದ್ದಕ್ಕೆ ನ್ಯಾಯಾಲಯವು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ರಾಷ್ಟ್ರೀಯ ರಾಜಧಾನಿಯಲ್ಲಿ ವಾಯು ಮಾಲಿನ್ಯದ ವಿಷಯದ ಬಗ್ಗೆ ಕುಂಟು ನೆಪಗಳನ್ನು ನೀಡಲಾಗುತ್ತಿದ್ದು, ರಾಜ್ಯ ಸರ್ಕಾರವು ಸಂಗ್ರಹಿಸುತ್ತಿರುವ ಆದಾಯ ಮತ್ತು ಅದನ್ನು ಏನು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸರಿಯಾದ ಲೆಕ್ಕ ನೀಡಲು ನ್ಯಾಯಾಲಯ ಹೇಳಿದೆ.

* ದೆಹಲಿ ಸರ್ಕಾರದ ಅಫಿಡವಿಟ್​ನನ್ನು ಪರಿಶೀಲಿಸುವಾಗ ಕೋರ್ಟ್​ ರೈತರು ಮಾಲಿನ್ಯಕ್ಕೆ ಹೇಗೆ ಕಾರಣವಾಗುತ್ತಾರೆ ಎಂದು ಪ್ರಶ್ನಿಸಿದೆ.

* ಬೆಳೆಗಳ ದಂಟನ್ನು ಸುಡುವುದು ಕೇವಲ ಶೇ. 4ರಷ್ಟು ಮಾತ್ರ ವಾಯುಮಾಲಿನ್ಯಕ್ಕೆ ಕೊಡುಗೆ ನೀಡಿದ್ರೆ, ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

* ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳಿಗೆ ಎರಡು ವಾರಗಳ ಕಾಲ ಹುಲ್ಲು ಸುಡದಂತೆ ರೈತರನ್ನು ಒತ್ತಾಯಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.

* ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವನ್ನು ಎದುರಿಸಲು ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವುದು, ಅನಿವಾರ್ಯವಲ್ಲದ ಸಾರಿಗೆ, ವಿದ್ಯುತ್ ಸ್ಥಾವರಗಳು ಮತ್ತು ಮನೆಯಿಂದಲೇ ಕೆಲಸವನ್ನು ಜಾರಿಗೊಳಿಸುವುದು ಮುಂತಾದ ವಿಷಯಗಳ ಕುರಿತು ಬುಧವಾರ ತುರ್ತು ಸಭೆ ಕರೆಯುವಂತೆ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿದೆ.

* ಸಿಜೆಐ ನೇತೃತ್ವದ ಪೀಠವು ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮುಖ್ಯ ಕಾರ್ಯದರ್ಶಿಗಳಿಗೂ ಸಭೆಯಲ್ಲಿ ಹಾಜರಿರಲು ಹೇಳಿದೆ.

* ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯದ ಹೆಚ್ಚಳವನ್ನು "ತುರ್ತು" ಪರಿಸ್ಥಿತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com