ಟಿವಿ ಡಿಬೇಟುಗಳಿಂದಲೇ ಹೆಚ್ಚು ಮಾಲಿನ್ಯ ಸೃಷ್ಟಿ: ಸುಪ್ರೀಂ ಕೋರ್ಟ್

ಟಿವಿ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗಿಯಾದ ಪ್ರತಿಯೊಬ್ಬರು ತಮ್ಮದೇ ಆದ ಅಜೆಂಡಾಗಳನ್ನು ಹೊಂದಿರುತ್ತಾರೆ.  ಅವರೆಲ್ಲರಿಂದಾಗಿ ವಿಷಯ ಹಾದಿ ತಪ್ಪುತ್ತಿದೆ. ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವವರಿಗೆ ನಿಜಕ್ಕೂ ದೆಹಲಿಯ ಪರಿಸ್ಥಿತಿ ಏನು ಎಂಬುದರ ಅರಿವು ಇರುವುದಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಟಿವಿ ಸುದ್ದಿವಾಹಿನಿಗಳಲ್ಲಿ ಈ ಬಗ್ಗೆ ಅಸಂಖ್ಯ ಡಿಬೇಟುಗಳು ನಡೆಯುತ್ತಿದ್ದು ಅವುಗಳಿಂದಲೇ ಹೆಚ್ಚಿನ ಮಾಲಿನ್ಯ ಸೃಷ್ಟಿಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. 

ಮುಖ್ಯನ್ಯಾಯಮೂರ್ತಿ ಎನ್.ವಿ ರಮಣ ಅವರ ನೇತೃತ್ವದ ಸದಸ್ಯಪೀಠ ಈ ಕುರಿತಾದ ಹೇಳಿಕೆಯನ್ನು ನೀಡಿದೆ. ಟಿವಿ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗಿಯಾದ ಪ್ರತಿಯೊಬ್ಬರು ತಮ್ಮದೇ ಆದ ಅಜೆಂಡಾಗಳನ್ನು ಹೊಂದಿರುತ್ತಾರೆ. 

ಅವರೆಲ್ಲರಿಂದಾಗಿ ವಿಷಯ ಹಾದಿ ತಪ್ಪುತ್ತಿದೆ. ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವವರಿಗೆ ನಿಜಕ್ಕೂ ದೆಹಲಿಯ ಪರಿಸ್ಥಿತಿ ಏನು ಎಂಬುದರ ಅರಿವು ಇರುವುದಿಲ್ಲ. ಸುಮ್ಮನೆ ತಮ್ಮ ವಾದ ಮಂಡಿಸುವ ಸಲುವಾಗಿ ಅಲ್ಲಿ ಕೂತಿರುತ್ತಾರೆ. ಆದರೆ ನಾವು ಆ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ನ್ಯಾಯಾಲಯ ತಿಳಿಸಿದೆ. 

ಸಮಾಜಕ್ಕೆ ಒಳಿತನ್ನು ಉಂಟುಮಾಡುವ ದ್ದೇಶದಿಂದ ನಾವು ಕೆಲಸಮಾಡುತ್ತಿದ್ದೇವೆ. ನಮ್ಮ ಉದ್ದೇಶಗಳು ಸ್ಪಷ್ಟವಾಗಿವೆ. ಹೀಗಾಗಿ ನಮ್ಮನ್ನು ಹಾದಿತಪ್ಪಿಸಲು ಯಾರಂದಲೂ ಸಾಧ್ಯವಿಲ್ಲ ಎಂದು ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.   

ಕೃಷಿ ತ್ಯಾಜ್ಯ ಸುಡುವುದರಿಂದ ಮಾಲಿನ್ಯ ಸೃಷ್ಟಿಯಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರನಣೆ ನಡೆಸುವ ಸಂದರ್ಭ ನ್ಯಾಯಾಲಯ ಈ ಪ್ರತಿಕ್ರಿಯೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com