ಸದನದಲ್ಲಿ ತೀವ್ರ ಅಪಮಾನ: ಸಿಎಂ ಗಾದಿಗೇರುವವರೆಗೂ ಅಸೆಂಬ್ಲಿಗೆ ಕಾಲಿಡುವುದಿಲ್ಲ ಎಂದು ಚಂದ್ರಬಾಬು ನಾಯ್ಡು ಶಪಥ!
ಆಡಳಿತಾರೂಢ ವೈಎಸ್ ಆರ್ ಪಿ ಪಕ್ಷದ ಸದಸ್ಯರಿಂದ ಉಂಟಾದ ತೀವ್ರ ವಾಗ್ದಾಳಿ ಮತ್ತು ಅಪಮಾನದಿಂದ ನೊಂದ ಆಂಧ್ರ ಪ್ರದೇಶ ಮಾಜಿ ಸಿಎಂ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಮತ್ತೆ ಸಿಎಂ ಗಾದಿಗೇರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಶಪಥ ಗೈದಿದ್ದಾರೆ.
Published: 19th November 2021 03:40 PM | Last Updated: 19th November 2021 05:51 PM | A+A A-

ಚಂದ್ರಬಾಬು ನಾಯ್ಡು
ಅಮರಾವತಿ: ಆಡಳಿತಾರೂಢ ವೈಎಸ್ ಆರ್ ಪಿ ಪಕ್ಷದ ಸದಸ್ಯರಿಂದ ಉಂಟಾದ ತೀವ್ರ ವಾಗ್ದಾಳಿ ಮತ್ತು ಅಪಮಾನದಿಂದ ನೊಂದ ಆಂಧ್ರ ಪ್ರದೇಶ ಮಾಜಿ ಸಿಎಂ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಮತ್ತೆ ಸಿಎಂ ಗಾದಿಗೇರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಶಪಥ ಗೈದಿದ್ದಾರೆ.
#BreakingNews #TDP chief #chandrababu Naidu breaks down, announces he will not return to Assembly till he becomes CM again, decries #YSRC for allegedly humiliating him and his family @NewIndianXpress #AndhraPradesh #Jagan pic.twitter.com/I2809wlhJf
— TNIE Andhra Pradesh (@xpressandhra) November 19, 2021
ವಿಧಾನಸಭೆ ಆರಂಭವಾದಾಗಿನಿಂದಲೂ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರು ಟಿಡಿಪಿ ಮತ್ತು ಪಕ್ಷದ ಮುಖ್ಯಸ್ಥರ ವಿರುದ್ಧ ನಿಂದಿಸುತ್ತಲೇ ಕಾಲ ಕಳೆಯುತ್ತಿದ್ದಾರೆ. ಒಂದೆಡೆ ಸಚಿವ ಕೊಡಾಲಿ ನಾನಿ ಚಂದ್ರಬಾಬು ಲುಚ್ಚಾ ಎನ್ನುತ್ತಿದ್ದರೆ ಮತ್ತೊಂದೆಡೆ ಮತ್ತೊಬ್ಬ ಸಚಿವ ಕನ್ನಬಾಬು ಸೇರಿದಂತೆ ಶಾಸಕರು ತಮ್ಮದೇ ಶೈಲಿಯಲ್ಲಿ ಖಾರವಾದ ವಾಗ್ದಾಳಿ ನಡೆಸುತ್ತಿದ್ದಾರೆ. ನನ್ನ ಮೇಲೆ ಮಾತ್ರವಲ್ಲದೇ ನನ್ನ ಕುಟುಂಬಸ್ಥರ ವಿರುದ್ಧ ನನ್ನ ಪತ್ನಿ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಆಘಾತವಾಗಿದ್ದು, ನಾನು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಸದನಕ್ಕೆ ಕಾಲಿಡುವುದಿಲ್ಲ ಎಂದು ಭಾವುಕರಾಗಿ ಶಪಥ ಮಾಡಿದ್ದಾರೆ.
#WATCH | Former Andhra Pradesh CM & TDP chief Chandrababu Naidu breaks down at PC in Amaravati
— ANI (@ANI) November 19, 2021
He likened the Assembly to 'Kaurava Sabha' & decided to boycott it till 2024 in protest against 'ugly character assassinations' by YSRCP ministers & MLAs, says TDP in a statement pic.twitter.com/CKmuuG1lwy
'ನನ್ನ ಇಷ್ಟು ವರ್ಷಗಳ ರಾಜಕೀಯ ಇತಿಹಾಸದಲ್ಲಿ ದೊಡ್ಡ ದೊಡ್ಡ ನಾಯಕರೊಂದಿಗೆ, ರಾಷ್ಟ್ರಮಟ್ಟದಲ್ಲಿಯೂ ಹಲವು ನಾಯಕರ ಜತೆ ಕೆಲಸ ಮಾಡಿದ್ದೇನೆ. ಆದರೆ ಕಳೆದ ಎರಡೂವರೆ ವರ್ಷಗಳಿಂದ ಸದನದಲ್ಲಿ ಹಲವು ಟೀಕೆಗಳು ಕೇಳಿ ಬರುತ್ತಿವೆ. ನಾನು ವಿರೋಧ ಪಕ್ಷದಲ್ಲಿದ್ದಾಗಲೂ.. ಆಡಳಿತದಲ್ಲಿದ್ದಾಗಲೂ ಇಂತಹ ಕೆಟ್ಟ ಅನುಭವಗಳನ್ನು ಕಂಡಿಲ್ಲ. ದೊಡ್ಡ ದೊಡ್ಡ ನಾಯಕರೊಂದಿಗಾಗದ ಎಂದಿಗೂ ಎದುರಿಸದ ಅಪಮಾನಗಳನ್ನು ಈಗ ಎದುರಿಸುತ್ತಿದ್ದೇವೆ. ನಿನ್ನೆ ಕೂಡ ಮುಖ್ಯಮಂತ್ರಿ ಜಗನ್ ಅವರು ಸದನಕ್ಕೆ ಗೈರಾದ ಕುರಿತು ಕೆಟ್ಟದಾಗಿ ನನ್ನ ಬಗ್ಗೆ ಮಾತನಾಡಿದರು. ಈ ಸದನದಲ್ಲಿ ಹೇಳಲಾಗದ ಅವಮಾನಗಳಿಗೆ ಒಳಗಾದ ಅನೇಕ ಸನ್ನಿವೇಷಗಳಿವೆ. ವೈಯಕ್ತಿಕವಾಗಿ ಮತ್ತು ಪಕ್ಷದ ದೃಷ್ಟಿಯಿಂದ ಟೀಕಿಸುತ್ತಿದ್ದಾರೆ ಎಂದು ಗದ್ಗಧಿತರಾಗಿ ಹೇಳಿದರು.