ಸತ್ತ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ವ್ಯಕ್ತಿ

ಆತನ ಶವವನ್ನು ಅಲ್ಲಿನ ಸಿಬ್ಬಂದಿ ಶವಾಗಾರಕ್ಕೆ ಸ್ಥಳಾಂತರಿಸಿದರು. ಆತನ ಮನೆಯವರು ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿ, ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿ ಸಹಿಯನ್ನೂ ಹಾಕಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊರಾದಾಬಾದ್: ಸಿನಿಮಾಗಳಲ್ಲಿ ನಡೆಯುವಂತೆ ಸತ್ತಿದ್ದ ವ್ಯಕ್ತಿಯೋರ್ವ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ಕುತೂಹಲಕರ ಪ್ರಸಂಗ ಉತ್ತರಪ್ರದೇಶದ ಮೊರಾದಾಬಾದ್ ಎಂಬಲ್ಲಿ ನಡೆದಿದೆ. 

ಶ್ರೀಕೇಶ್ ಕುಮಾರ್ ಎಂಬ ಎಲೆಕ್ಟ್ರಿಷಿಯನ್ ವೃತ್ತಿ ನಿರ್ವಹಿಸುತ್ತಿದ್ದ. ಬೈಕಿನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಆಕ್ಸಿಡೆಂಟ್ ಆಗಿ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಆತನನ್ನು ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. 

ಆತನ ಶವವನ್ನು ಅಲ್ಲಿನ ಸಿಬ್ಬಂದಿ ಶವಾಗಾರಕ್ಕೆ ಸ್ಥಳಾಂತರಿಸಿದರು. ಆತನ ಮನೆಯವರು ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿ, ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿ ಸಹಿಯನ್ನೂ ಹಾಕಿದರು. ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಸಂಬಧಿಕರಲ್ಲಿ ಒಬ್ಬಳು ಹುಡುಗಿ ಮೃತದೇಹದಲ್ಲಿ ಚಲನೆಯನ್ನು ಗುರುತಿಸಿದ್ದಳು. ನಂತರ ಆತ ಜೀವದಿಂದ ಇರುವುದು ಪತ್ತೆಯಾಗಿತ್ತು. ನಂತರ ಸೂಕ್ತ ಶುಶ್ರೂಷೆ ಮಾಡಿದನಂತರ ಆತ ಎದ್ದು ಕೂತ ಎಂದು ತಿಳಿದುಬಂದಿದೆ.

ಆತನ ದೇಹವನ್ನು ಆಸ್ಪತ್ರೆಗೆ ತಂದಾಗ ಬೆಳಗಿನ ಜಾವ ೩ ಗಂಟೆ. ಆ ಸಂದರ್ಭ ಆಸ್ಪತ್ರೆಯಲ್ಲಿ ಹಾಜರಿದ್ದ ಮೆಡಿಕಲ್ ಆಫೀಸರ್ ದೇಹವ ತಪಾಸಣೆ ನಡೆಸಿದಾಗ ಹೃದಯ ಬಡಿತ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂಥ ಘಟನೆಗಳು ನಡೆಯುವುದು ಅಪರೂಪ. ಈ ಘಟನೆ ನಿರ್ಲಕ್ಷ್ಯದಿಂದ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com