ತಿರುಮಲ: ಪ್ರವಾಹದ ವೇಳೆ ದರ್ಶನ ಮಿಸ್ ಮಾಡಿಕೊಂಡ ಭಕ್ತರಿಗೆ ಪ್ರತ್ಯೇಕ ಸಮಯ ನಿಗದಿ ಮಾಡಿದ TTD

ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿ ಪ್ರವಾಹದಿಂದಾಗಿ ದರ್ಶನ (Tirumala Darshan) ಮಿಸ್ ಮಾಡಿಕೊಂಡ ಭಕ್ತರಿಗಾಗಿ ತಿರುಪತಿ ತಿರುಮಲ ದೇವಸ್ಥಾನಮ್ಸ್ ಮಂಡಳಿ (TTD) ಪರ್ಯಾಯ ವ್ಯವಸ್ಥೆ ಮಾಡಿದ್ದು, ಬೇರೆ ಸಮಯ ನಿಗದಿ ಮಾಡಿದೆ.

Published: 23rd November 2021 11:08 AM  |   Last Updated: 23rd November 2021 11:08 AM   |  A+A-


heavy rain fall gives tough time to tirumala pilgrims, Darshan Goes As Normal

ತಿರುಮಲದಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)

The New Indian Express

ತಿರುಮಲ: ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿ ಪ್ರವಾಹದಿಂದಾಗಿ ದರ್ಶನ (Tirumala Darshan) ಮಿಸ್ ಮಾಡಿಕೊಂಡ ಭಕ್ತರಿಗಾಗಿ ತಿರುಪತಿ ತಿರುಮಲ ದೇವಸ್ಥಾನಮ್ಸ್ ಮಂಡಳಿ (TTD) ಪರ್ಯಾಯ ವ್ಯವಸ್ಥೆ ಮಾಡಿದ್ದು, ಬೇರೆ ಸಮಯ ನಿಗದಿ ಮಾಡಿದೆ.

ಪ್ರವಾಹ ಏರ್ಪಟ್ಟ ನವೆಂಬರ್ 18 ಮತ್ತು 30 ರ ನಡುವೆ ತಮ್ಮ ದರ್ಶನದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದ ಮತ್ತು ತಿರುಮಲ ಮತ್ತು ತಿರುಪತಿಯಲ್ಲಿ ಪ್ರತಿಕೂಲ ಹವಾಮಾನದ ಕಾರಣ ಅದನ್ನು ಮಾಡಲು ಸಾಧ್ಯವಾಗದ ಯಾತ್ರಾರ್ಥಿಗಳಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಪರ್ಯಾಯ ಟೈಮ್ ಸ್ಲಾಟ್‌ಗಳನ್ನು ಒದಗಿಸಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ (YV Subba Reddy, President of TTD) ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಕೆಎಸ್ ಜವಾಹರ್ ರೆಡ್ಡಿ (Executive Officer KS Jawahar Reddy) ನಿರ್ಧಾರ ಕೈಗೊಂಡಿದ್ದಾರೆ. ದರ್ಶನವನ್ನು ಕಳೆದುಕೊಂಡ ಯಾತ್ರಾರ್ಥಿಗಳು ಡಿಸೆಂಬರ್‌ನಿಂದ ಆರು ತಿಂಗಳೊಳಗೆ ಟಿಟಿಡಿ ಒದಗಿಸುವ ಪರ್ಯಾಯ ಸಮಯದ ಸ್ಲಾಟ್‌ಗಳನ್ನು ಪಡೆಯಬಹುದು. ಇದಕ್ಕಾಗಿ ಟಿಟಿಡಿ ವಿಶೇಷ ಸಾಫ್ಟ್‌ವೇರ್ ರೂಪಿಸಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರವಾಹ ಪೀಡಿತರಿಗೆ ಉಚಿತ ರೇಷನ್, ಈರುಳ್ಳಿ, ಆಲೂಗೆಡ್ಡೆ, ಎಣ್ಣೆ ವಿತರಣೆ: ಆಂಧ್ರ ಪ್ರದೇಶ ಸರ್ಕಾರ

ಸೋಮವಾರ ಅನ್ನಮಯ್ಯ ಭವನದಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ(TTD Additional Executive Officer AV Dharma Reddy), ಯಾತ್ರಾರ್ಥಿಗಳು ತಮ್ಮ ಹಳೆಯ ಟಿಕೆಟ್ ಸಂಖ್ಯೆಯನ್ನು ಹೊಸ ಸಾಫ್ಟ್‌ವೇರ್‌ನಲ್ಲಿ ನಮೂದಿಸುವ ಮೂಲಕ ತಿರುಮಲ(Tirumala)ಕ್ಕೆ ತಮ್ಮ ತೀರ್ಥಯಾತ್ರೆಯ ದಿನಾಂಕವನ್ನು ಮರು ನಿಗದಿಪಡಿಸಬೇಕಾಗಿದೆ.

ಇದು ನವೆಂಬರ್ 30 ರಿಂದ ಲಭ್ಯವಿರುತ್ತದೆ. ತಿರುಮಲದಲ್ಲಿರುವ ಒಟ್ಟು 7,000 ಕೊಠಡಿಗಳಲ್ಲಿ ನಾರಾಯಣಗಿರಿ ವಿಶ್ರಾಂತಿ ಗೃಹದಲ್ಲಿ ಕೇವಲ ಎರಡು ಕೊಠಡಿಗಳು ಮಾತ್ರ ಪ್ರವಾಹದಿಂದಾಗಿ ಹಾನಿಗೊಳಗಾಗಿವೆ. ಉಳಿದೆಲ್ಲ ಕೊಠಡಿಗಳು ಸುಭದ್ರವಾಗಿವೆ ಎಂದು ಹೆಚ್ಚುವರಿ ಇಒ ತಿಳಿಸಿದ್ದಾರೆ. ಹಾನಿಗೊಳಗಾದ ಎರಡು ಕೊಠಡಿಗಳನ್ನು ಆದಷ್ಟು ಬೇಗ ದುರಸ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರವಾಹಕ್ಕೆ ಆಂಧ್ರ ತತ್ತರ: ಸಾವಿನ ಸಂಖ್ಯೆ 33ಕ್ಕೆ ಏರಿಕೆ; ಹೆದ್ದಾರಿಗಳು ಬಂದ್, ಸಂಕಷ್ಟದಲ್ಲಿ ಜನರು!

ಭಾರೀ ಮಳೆಯಿಂದಾಗಿ ತಿರುಮಲಕ್ಕೆ ತೆರಳುವ ಎರಡು ಯಾತ್ರಾರ್ಥಿ ಮಾರ್ಗಗಳ ಪೈಕಿ ಶ್ರೀವಾರಿ ಮೆಟ್ಟು ಮಾರ್ಗವು ತೀರಾ ಹದಗೆಟ್ಟಿದೆ. ಆದರೆ ಅಲಿಪಿರಿ ಮಾರ್ಗಕ್ಕೆ ಯಾವುದೇ ತೊಂದರೆಯಾಗಿಲ್ಲ. ಶ್ರೀವಾರಿ ಮೆಟ್ಟು ದುರಸ್ತಿ ಕಾರ್ಯಕ್ಕೆ ಸಮಯ ಹಿಡಿಯುವ ಕಾರಣ ತಾತ್ಕಾಲಿಕವಾಗಿ ಆ ರಸ್ತೆಯನ್ನು ಮುಚ್ಚಲಾಗಿದೆ. ಯಾತ್ರಾರ್ಥಿಗಳು ಈಗ ಯಾವುದೇ ಭಯವಿಲ್ಲದೆ ತಿರುಮಲಕ್ಕೆ ಭೇಟಿ ನೀಡಬಹುದು, ಏಕೆಂದರೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಟಿಟಿಡಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. 

ಇದನ್ನೂ ಓದಿ: 'ತಿಮ್ಮಪ್ಪನಿಗೇ ಜಲ ದಿಗ್ಭಂಧನ': ತಿರುಪತಿ ಪ್ರವಾಹದ ಇತ್ತೀಚಿನ ಚಿತ್ರಣ ಚಿತ್ರಗಳಲ್ಲಿ

ತಿರುಮಲದಲ್ಲಿ ಮತ್ತೆ ಯಾತ್ರಿಕರಿಂದ ದರ್ಶನ
ಇನ್ನು ತಿರುಮಲದಲ್ಲಿ ಭಕ್ತರ ದಂಡು ಮುಂದುವರಿದಿದ್ದು, ಸೋಮವಾರ 17,531 ಭಕ್ತಾದಿಗಳು ತಿರುಮಲ ಶ್ರೀಗಳ ದರ್ಶನ ಪಡೆದು, ನಮನ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನದ ಪ್ರಕಾರ ಶ್ರೀವಾರಿ ಹುಂಡಿ ಆದಾಯ ನಿನ್ನೆ 1.49 ಕೋಟಿ ರೂ ಗಳಾಗಿತ್ತು. ಅಂತೆಯೇ ನಿನ್ನೆ 8,483 ಭಕ್ತಾದಿಗಳು ಸ್ವಾಮಿಗೆ ಮುಡಿ ಅರ್ಪಿಸಿ, ನಮನ ಸಲ್ಲಿಸಿದ್ದಾರೆ ಎಂದು ಟಿಟಿಡಿ ಮಾಹಿತಿ ನೀಡಿದೆ.
 


Stay up to date on all the latest ರಾಷ್ಟ್ರೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp