ಮೋದಿ ನೇತೃತ್ವದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ: ಸುಬ್ರಮಣಿಯನ್ ಸ್ವಾಮಿ
ಪಶ‍್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಡಳಿತ ಶೈಲಿಯನ್ನು ಹೊಗಳಿದ 24 ಗಂಟೆಗಳ ನಂತರ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ...
Published: 26th November 2021 03:32 PM | Last Updated: 26th November 2021 07:14 PM | A+A A-

ಮೋದಿ-ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಪಶ‍್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಡಳಿತ ಶೈಲಿಯನ್ನು ಹೊಗಳಿದ 24 ಗಂಟೆಗಳ ನಂತರ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆರ್ಥಿಕ ಪರಿಸ್ಥಿತಿ ನಿರ್ವಹಣೆ ರಕ್ಷಣೆ, ನೆರೆಹೊರೆ ದೇಶಗಳೊಂದಿಗೆ ಸಂಬಂಧಸುಧಾರಣೆ ಸೇರಿದಂತೆ ಆಡಳಿತದ ಎಲ್ಲ ರಂಗಗಳಲ್ಲೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಇದನ್ನು ಓದಿ: ರಾಮನ ಭಾರತದಲ್ಲಿ ಪೆಟ್ರೋಲ್ ದರ 93 ರೂ., ರಾವಣನ ಲಂಕೆಯಲ್ಲಿ 51 ರೂ.: ಕೇಂದ್ರದ ವಿರುದ್ಧ ಮತ್ತೆ ಸ್ವಾಮಿ ಕಿಡಿ!
ಆಫ್ಘಾನಿಸ್ತಾನದ ಪರಿಸ್ಥಿತಿ ನಿರ್ವಹಣೆ, ಪೇಗಾಸಿಸ್ ಗೂಢಚಾರಿಕೆ ಪ್ರಕರಣದಲ್ಲೂ ಸರ್ಕಾರ ವಿವೇಚನಾರಹಿತ ಹೆಜ್ಜೆ ಇಟ್ಟಿದೆ ಎಂದು ಸ್ವಾಮಿ ದೂರಿದ್ದಾರೆ. ಪ್ರಸಕ್ತ ನರೇಂದ್ರ ಮೋದಿ ಆಡಳಿತದಲ್ಲಿ ಕಾಶ್ಮೀರ ಅಭಿವೃದ್ದಿ ಕಾಣುವ ಬದಲಿಗೆ ಕತ್ತಲೆಯಲ್ಲಿ ಮುಳುಗಿದೆ ಎಂದಿದ್ದಾರೆ.
ಕಳೆದ 24 ಗಂಟೆಗಳ ಹಿಂದೆ ದೆಹಲಿಯಲ್ಲಿ ಸುಬ್ರಹ್ಮಮಣಿಯನ್ ಸ್ವಾಮಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ಅವರ ನಾಯಕತ್ವವನ್ನು ಮನಸಾರೆ ಹೊಗಳಿದ್ದರು.
ಮಮತಾ ಬ್ಯಾನರ್ಜಿ ಮುತ್ಸದ್ದಿ ನಾಯಕಿಯಾಗಿದ್ದು, ಜಯಪ್ರಕಾಶ್ ನಾರಾಯಣ್ ರಾಜೀವ್ ಗಾಂಧಿ ಮತ್ತು ಮುರಾರ್ಜಿ ದೇಸಾಯಿ, ಪಿ.ವಿ. ನರಸಿಂಹ ರಾವ್ ಅವರ ರೀತಿಯಲ್ಲಿ ಉತ್ತಮ ಆಡಳಿತ, ಉತ್ತಮ ನಾಯಕತ್ವ ಗುಣ ಹೊಂದಿದ್ದಾರೆ ಎಂದೂ ಸ್ವಾಮಿ ಟ್ವೀಟ್ ಮಾಡಿದ್ದಾರೆ.