ಮುಂಬೈನ ಕುರ್ಲಾ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ!
ಮಹಾನಗರಿ ಮುಂಬೈಯ ಕುರ್ಲಾ ಪ್ರದೇಶದಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿ ಬರ್ಭರವಾಗಿ ಹತ್ಯೆ ಮಾಡಲಾಗಿದೆ. ಹೆಚ್ ಡಿಐಎಲ್ ಕಂಪೌಂಡ್ ನ ಖಾಲಿ ಕಟ್ಟಡದ 13ನೇ ಮಹಡಿಯಲ್ಲಿ ಯುವತಿಯ ಮೃತದೇಹ ಸಿಕ್ಕಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
Published: 27th November 2021 01:58 PM | Last Updated: 27th November 2021 02:12 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಮಹಾನಗರಿ ಮುಂಬೈಯ ಕುರ್ಲಾ ಪ್ರದೇಶದಲ್ಲಿ(Mumbai Kurla area) 20 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿ ಬರ್ಭರವಾಗಿ ಹತ್ಯೆ ಮಾಡಲಾಗಿದೆ. ಹೆಚ್ ಡಿಐಎಲ್ ಕಂಪೌಂಡ್ ನ ಖಾಲಿ ಕಟ್ಟಡದ 13ನೇ ಮಹಡಿಯಲ್ಲಿ ಯುವತಿಯ ಮೃತದೇಹ ಸಿಕ್ಕಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಯುವತಿಯನ್ನು ಲೈಂಗಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಪ್ರಾಥಮಿಕ ವೈದ್ಯಕೀಯ ವರದಿ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(ಅತ್ಯಾಚಾರ) ಮತ್ತು 302(ಹತ್ಯೆ) ಅಡಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
18 ವರ್ಷದ ಬಾಲಕ ತನ್ನಿಬ್ಬರು ಸ್ನೇಹಿತರೊಂದಿಗೆ ಕಟ್ಟಡದ ವಿಡಿಯೊ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಯುವತಿಯ ಮೃತದೇಹ ಕಾಣಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ವಿನೋಬ ಭಾವೆ ನಗರ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ, ಯುವತಿಯ ತಲೆಗೆ ಗಂಭೀರವಾದ ಗಾಯವಾಗಿದೆ. ದೇಹ ಕೊಳೆಯಲು ಪ್ರಾರಂಭವಾಗಿತ್ತು ಎಂದು ಕೂಡ ಪೊಲೀಸರು ವಿವರ ನೀಡಿದ್ದಾರೆ.
ಆರೋಪಿಗಳ ಪತ್ತೆಗೆ ಪ್ರತಿ ಪೊಲೀಸ್ ಠಾಣೆಗೆ ನಾವು ಮಾಹಿತಿ ನೀಡಿದ್ದು ಆದಷ್ಟು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು 5ನೇ ವಲಯ ಡಿಸಿಪಿ ಪ್ರಣಯ ಅಶೋಕ್ ತಿಳಿಸಿದ್ದಾರೆ.