'ಒಮಿಕ್ರಾನ್' ಈಗಾಗಲೇ ದೇಶವನ್ನು ಪ್ರವೇಶಿಸಿರಬಹುದು: ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಳದ ಅಗತ್ಯವಿದೆ- ಡಾ. ಗಗನ್ ದೀಪ್ ಕಾಂಗ್
ದೇಶದಲ್ಲಿ ಒಮಿಕ್ರಾನ್ ಕೊರೋನಾವೈರಸ್ ರೂಪಾಂತರದ ಬಗ್ಗೆ ಆತಂಕ ಹೆಚ್ಚಾಗಿರುವ ನಡುವೆ, ಇದು ಈಗಾಗಲೇ ದೇಶವನ್ನು ಪ್ರವೇಶಿಸಿರಬಹುದು ಎಂದು ಹೆಸರಾಂತ ಮೈಕ್ರೋ ಬಯೋಲಾಜಿಸ್ಟ್ ಡಾ. ಗಗನ್ ದೀಪ್ ಕಾಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
Published: 30th November 2021 11:10 AM | Last Updated: 30th November 2021 11:10 AM | A+A A-

ಸಾಂದರ್ಭಿಕ ಫೋಟೋ
ಬೆಂಗಳೂರು: ದೇಶದಲ್ಲಿ ಒಮಿಕ್ರಾನ್ ಕೊರೋನಾವೈರಸ್ ರೂಪಾಂತರದ ಬಗ್ಗೆ ಆತಂಕ ಹೆಚ್ಚಾಗಿರುವ ನಡುವೆ, ಇದು ಈಗಾಗಲೇ ದೇಶವನ್ನು ಪ್ರವೇಶಿಸಿರಬಹುದು ಎಂದು ಹೆಸರಾಂತ ಮೈಕ್ರೋ ಬಯೋಲಾಜಿಸ್ಟ್ ಡಾ. ಗಗನ್ ದೀಪ್ ಕಾಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸುವುದು ಮತ್ತು ಅದನ್ನು ತ್ವರಿತವಾಗಿ ಪತ್ತೆಹಚ್ಚಲು ಎಸ್ ಜೀನ್ ಪಿಸಿಆರ್ ಟೆಸ್ಟಿಂಗ್ ಪರಿಚಯಿಸುವುದು ಮತ್ತು ಹರಡುವಿಕೆ ನಿಯಂತ್ರಿಸುವತ್ತ ಗಮನ ಕೇಂದ್ರಿಕರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಮೈಕ್ರೋಬಯೋಲಾಜಿಸ್ಟ್ ಡಾ. ಕಾಂಗ್, ಈ ರೂಪಾಂತರ ಇಲ್ಲಿಯವರೆಗೆ ಪತ್ತೆಯಾದ 12 ದೇಶಗಳಿಗಿಂತ ಹೆಚ್ಚಿನದಾಗಿದೆ. ಇದು ಭಾರತದಲ್ಲಿಯೂ ಇರಬಹುದು, ಆದರೆ ನಮ್ಮ ಜೀನೋಮ್ ಅನುಕ್ರಮವು ತುಂಬಾ ನಿಧಾನವಾಗಿದೆ ಆದ್ದರಿಂದ ಅದನ್ನು ತಿಳಿಯಲು ಸಾಧ್ಯವಾಗಿಲ್ಲ ಎಂದರು.
ಇದನ್ನೂ ಓದಿ: ಅಗತ್ಯ ಬಿದ್ದರೆ ಒಮಿಕ್ರಾನ್ ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತೇವೆ- ಮಾಡರ್ನ ಕಂಪನಿ
ಒಮಿಕ್ರಾನ್ ಬಂದ ಒಂದು ತಿಂಗಳ ನಂತರ ಸೀಕ್ವೆನ್ಸಿಂಗ್ ಡೇಟಾ ಬಂದರೆ ಯಾವುದೇ ಪ್ರಯೋಜನವಿಲ್ಲ. ಒಮಿಕ್ರಾನ್ ಜನರಿಗೆ ಬಂದರೆ ಅದರ ನಿಯಂತ್ರಣಕ್ಕೆ ಇದು ಸಹಾಯ ಮಾಡುವುದಿಲ್ಲ. ಸೀಕ್ವೆನ್ಸಿಂಗ್ ತ್ವರಿತಗತಿಯಲ್ಲಿ ನಡೆಯಲಿದೆ ಎಂಬ ಆಶಾಭಾವನೆಯಿದೆ ಎಂದು ಅವರು ಹೇಳಿದರು.
ಎಸ್ ಜಿನ್ ಪಿಸಿಆರ್ ಟೆಸ್ಟ್ ಮಾಡಿಸಿದರೆ ಕೆಲವೇ ಗಂಟೆಗಳಲ್ಲಿ ಒಮಿಕ್ರಾನ್ ಇರುವಿಕೆ ಬಗ್ಗೆ ತಿಳಿಯಬಹುದಾಗಿದೆ. ಇದರಿಂದ ಒಮಿಕ್ರಾನ್ ಹರಡುವಿಕೆಯ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಹಿಂದಿನ ಯಾವುದೇ ರೂಪಾಂತರಗಳಿಗಿಂತ ಓಮಿಕ್ರಾನ್ ಹೆಚ್ಚು ರೂಪಾಂತರಗಳನ್ನು ಹೊಂದಿದೆ (ಸ್ಪೈಕ್ ಪ್ರೋಟೀನ್‌ನಲ್ಲಿ 30-ಪ್ಲಸ್) ಎಂದು ಅವರು ಹೇಳಿದರು.
ಒಮಿಕ್ರಾನ್ ಪ್ರಸರಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಇದು ಒಂದು ವಾರದ ಸಮಯವನ್ನು ತೆಗೆದುಕೊಳ್ಳಬಹುದು ಎಂದು ಡಾ. ಗಗನ್ ದೀಪ್ ಕಾಂಗ್ ತಿಳಿಸಿದರು.