ಲಖಿಂಪುರ್ ಖೇರಿ ಹಿಂಸಾಚಾರ: ರಾಜಕೀಯ ಚಟುವಟಿಕೆಗೆ ಇಂಬು, ಜಿಲ್ಲೆಗೆ ಭೇಟಿ ನೀಡಲು ಮುಖಂಡರು ಮುಂದು

ಹಿಂಸಾಚಾರ ಸಂಭವಿಸಿದ ಜಿಲ್ಲೆಗೆ ಸೋಮವಾರ ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ  ಅಖಿಲೇಶ್ ಯಾದವ್ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಉತ್ತರ ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದಂತೆ ಲಖಿಂಪುರ್ ಖೇರ್ ಹಿಂಸಾಚಾರ ವಿಚಾರದಲ್ಲಿ ರಾಜಕೀಯ ತೀವ್ರಗೊಂಡಿದೆ. 
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ

ಲಖನೌ: ಹಿಂಸಾಚಾರ ಸಂಭವಿಸಿದ ಜಿಲ್ಲೆಗೆ ಸೋಮವಾರ ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ  ಅಖಿಲೇಶ್ ಯಾದವ್ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಉತ್ತರ ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದಂತೆ ಲಖಿಂಪುರ್ ಖೇರ್ ಹಿಂಸಾಚಾರ ವಿಚಾರದಲ್ಲಿ ರಾಜಕೀಯ ತೀವ್ರಗೊಂಡಿದೆ. 

ಲಖನೌಗೆ ಭಾನುವಾರ ರಾತ್ರಿ 8-30ಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ದಿಪೇಂದರ್ ಹೂಡಾ ಅವರೊಂದಿಗೆ ಸೋಮವಾರ ಬೆಳಗ್ಗೆ ಲಖೀಂಪುರಕ್ಕೆ ತೆರಳುತ್ತದ್ದಾಗ ಸಿತಾಪುರ ಬಳಿ ಅವರನ್ನು ಬಂಧಿಸಲಾಯಿತು. ಲಖನೌದ ನಿವಾಸದ ಮುಂಭಾಗ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬಂಧಿಸಲಾಯಿತು.

ಪ್ರಿಯಾಂಕಾ ಗಾಂಧಿ ಅವರನ್ನು ಸಿತಾಪುರ ಬಳಿ ಬಂಧಿಸಿ, ಪಿಎಸಿ ಗೆಸ್ಟ್ ಹೌಸ್ ಗೆ ಕರೆದೊಯ್ಯಲಾಯಿತು. ಹತ್ಯೆ ಆರೋಪಿ ಕೇಂದ್ರ ಸಚಿವರ ಪುತ್ರನನ್ನು ಏಕೆ ಬಂಧಿಸಿಲ್ಲ ಎಂದು ಪ್ರಿಯಾಂಕಾ ಪ್ರಶ್ನಿಸಿದರು. ಉತ್ತರ ಪ್ರದೇಶದಲ್ಲಿ ಪ್ರಜಾತಂತ್ರ, ಕಾನೂನು ಪ್ರಕ್ರಿಯೆ ಸಂಪೂರ್ಣವಾಗಿ ಪತನಗೊಂಡಿದೆ ಎಂದು ಅವರು ಆರೋಪಿಸಿದರು.

ಇದೇ ರೀತಿಯಲ್ಲಿ ಲಖನೌದ ತಮ್ಮ ನಿವಾಸದ ಬಳಿ ಧರಣಿ ನಡೆಸುತ್ತಿದ್ದ ಅಖಿಲೇಶ್ ಯಾದವ್ ಅವರನ್ನು ಬಂಧಿಸಲಾಗಿತ್ತು. ಇವರಲ್ಲದೆ ಲಖಿಂಪುರ್ ಖೇರಿಗೆ ತೆರಳುತ್ತಿದ್ದ   ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್, ಲೊಹಿಯಾ, ಎಎಪಿಯ ಸಂಜಯ್ ಸಿಂಗ್, ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಎಸ್. ಸಿ. ಮಿಶ್ರಾ ಅವರನ್ನು ಬಂಧಿಸಿ ಗೃಹ ಬಂಧನದಲ್ಲಿ ಇಡಲಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಲಖನೌ ಆಡಳಿತದಿಂದ ಸೆಕ್ಷನ್ 144 ನ್ನು ಸೋಮವಾರ ಜಾರಿಗೊಳಿಸಲಾಗಿತ್ತು.

ಈ ಮಧ್ಯೆ ಸೋಮವಾರ ಲಖಿಂಪುರ್ ಖೇರಿಗೆ ಭೇಟಿ ನೀಡಲು ವೇಳಾಪಟ್ಟಿ ನಿಗದಿಪಡಿಸಿದ ಪಂಜಾಬ್ ಉಪ ಮುಖ್ಯಮಂತ್ರಿ ಸುಖಜಿಂದರ್ ಎಸ್ ರಾಂಧವ ಹಾಗೂ ಛತ್ತೀಸ್ ಗಢ ಮಖ್ಯಮಂತ್ರಿ ಭೂಪೇಶ್ ಬಗೇಲ್ ಅವರಿಗೆ ಅವಕಾಶ ನೀಡದಂತೆ ಉತ್ತರ ಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಾಸ್ಥಿ ಲಖನೌ ವಿಮಾನ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದಾಗ್ಯೂ,  ಸುಖಜಿಂದರ್ ಎಸ್ ರಾಂಧವ ಸೇರಿದಂತೆ ಪಂಜಾಬಿನ ಮುಖಂಡರನ್ನು ಷಹಜನ್ ಪುರದ ಬಳಿ ಉತ್ತರ ಪ್ರದೇಶ ಪೊಲೀಸರು ತಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com