ಪ್ಯಾಂಡೋರಾ ಪೇಪರ್ಸ್ ಕೇಸ್: ಬಹು ಏಜೆನ್ಸಿ ಗ್ರೂಪ್ ನಿಂದ ತನಿಖೆ ಮೇಲ್ವಿಚಾರಣೆ

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದಲ್ಲಿನ ಬಹು-ಏಜೆನ್ಸಿ ಗ್ರೂಪ್  ಪಂಡೋರಾ ಪೇಪರ್ಸ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.
ಪ್ಯಾಂಡೋರಾ ಪೇಪರ್ಸ್ ಕೇಸ್ ಸಾಂದರ್ಭಿಕ ಚಿತ್ರ
ಪ್ಯಾಂಡೋರಾ ಪೇಪರ್ಸ್ ಕೇಸ್ ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದಲ್ಲಿನ ಬಹು-ಏಜೆನ್ಸಿ ಗ್ರೂಪ್  ಪಂಡೋರಾ ಪೇಪರ್ಸ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.

ಉದ್ಯಮಿಗಳು ಸೇರಿದಂತೆ 300ಕ್ಕೂ ಹೆಚ್ಚು ಭಾರತೀಯ ಶ್ರೀಮಂತರ ಹೆಸರುಗಳು ಪಂಡೋರಾ ಪೇಪರ್ಸ್ ಕೇಸ್ ನಲ್ಲಿ ಕಂಡುಬಂದಿದ್ದು, ವಿಶ್ವದಾದ್ಯಂತ ಶ್ರೀಮಂತರು ಹೊಂದಿರುವ ರಹಸ್ಯ ಸಂಪತ್ತಿನ ಮಾಹಿತಿ ಸೋರಿಕೆಯಾಗಿದ್ದು, ಅನೇಕ ಭಾರತೀಯರು ತಪ್ಪು ಆರೋಪಗಳನ್ನು ತಿರಸ್ಕರಿಸಿದ್ದಾರೆ.

ಕಡಲಾಚೆ ಸೋರಿಕೆಯಾದ ಸಂಪತ್ತಿನ ದಾಖಲೆಗಳನ್ನು ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಪಡೆದಿದೆ.ಸರ್ಕಾರವು ಇದನ್ನು ಗಮನಿಸಿದೆ ಮತ್ತು ಸಂಬಂಧಿತ ತನಿಖಾ ಸಂಸ್ಥೆಗಳು ಈ ಪ್ರಕರಣಗಳಲ್ಲಿ ತನಿಖೆ ನಡೆಸುತ್ತವೆ ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬಿಡಿಟಿ ಹೇಳಿದೆ.

ಪಂಡೋರಾ ಪೇಪರ್ಸ್ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಬಂದ ಕೇಸ್ ತನಿಖೆಯನ್ನು ಸಿಬಿಡಿಟಿ ಅಧ್ಯಕ್ಷರ ನೇತೃತ್ವದಲ್ಲಿನ ಬಹು ಏಜೆನ್ಸಿ ಗ್ರೂಪ್ ಮೇಲ್ವಿಚಾರಣೆ ಮಾಡಲಿದೆ. ಇದರಲ್ಲಿ ಸಿಬಿಡಿಟಿ, ಆರ್ ಬಿಐ ಮತ್ತು ಎಫ್ ಐಯು ಪ್ರತಿನಿಧಿಗಳಿರುತ್ತಾರೆ ಎಂದು ಸರ್ಕಾರ ಇಂದು ನಿರ್ದೇಶಿಸಿದೆ. 

ಈ ಪ್ರಕರಣಗಳ ಪರಿಣಾಮಕಾರಿ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ಸಂಬಂಧಿತ ತೆರಿಗೆದಾರರು, ಘಟಕಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಸರ್ಕಾರವು ವಿದೇಶಿ ನ್ಯಾಯವ್ಯಾಪ್ತಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ. ಇಂತಹ ಸೋರಿಕೆಗೆ ಸಂಬಂಧಿಸಿದ ತೆರಿಗೆ ಅಪಾಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು  ಅಂತರ್ ಸರ್ಕಾರದ ಗ್ರೂಪ್ ನೊಂದಿಗೆ ಭಾರತ ಸರ್ಕಾರ ಕೂಡಾ ಭಾಗಿಯಾಗುತ್ತದೆ ಎಂದು ಸಿಬಿಡಿಟಿ ಹೇಳಿದೆ.

ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ ವೆಬ್‌ಸೈಟ್ ಕೂಡ ಇನ್ನೂ ಎಲ್ಲಾ ಘಟಕಗಳ ಹೆಸರುಗಳು ಮತ್ತು ಇತರ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಹಂತ ಹಂತವಾಗಿ ಮಾಹಿತಿ ಬಿಡುಗಡೆ ಮಾಡಲಾಗುವುದು,  ಪಂಡೋರಾ ಪೇಪರ್ಸ್ ತನಿಖೆಗೆ ಸಂಬಂಧಿಸಿದ ರಚನಾತ್ಮಕ ಡೇಟಾವನ್ನು ಮುಂದಿನ ದಿನಗಳಲ್ಲಿ ತನ್ನ ಕಡಲಾಚೆಯ ಸೋರಿಕೆ ಡೇಟಾಬೇಸ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಜಿಐಜೆ ವೆಬ್ ಸೈಟ್ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com