ಮುಂಬೈ ಕ್ರೂಸ್ ರೇವ್ ಪಾರ್ಟಿ: ಯಾರು ಈ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ?

ಪ್ರವಾಸಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ನಡೆಸಿ, ಪ್ರಭಾವಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಹಾಗೂ ಶ್ರೀಮಂತ ಉದ್ಯಮಿಗಳ ಮಕ್ಕಳನ್ನು ಹೆಡೆಮುರಿ ಕಟ್ಟಿರುವ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಹೆಸರು ಈಗ ದೇಶದ ಜನರ ಗಮನ ಸೆಳೆದಿದೆ. ಅವರ ಕುರಿತು ಮಾಹಿತಿ ಪಡೆಯಲು ಜನರು ಅಂತರ್ಜಾಲದಲ್ಲಿ ಬಾರಿ ಪ್ರಮಾಣದಲ್ಲಿ ಹುಡುಕಾಟ ನಡೆಸುತ್ತಿದ್ದ
ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ
ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ

ಮುಂಬೈ: ಪ್ರವಾಸಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ನಡೆಸಿ, ಪ್ರಭಾವಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಹಾಗೂ ಶ್ರೀಮಂತ ಉದ್ಯಮಿಗಳ ಮಕ್ಕಳನ್ನು ಹೆಡೆಮುರಿ ಕಟ್ಟಿರುವ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಹೆಸರು ಈಗ ದೇಶದ ಜನರ ಗಮನ ಸೆಳೆದಿದೆ. ಅವರ ಕುರಿತು ಮಾಹಿತಿ ಪಡೆಯಲು ಜನರು ಅಂತರ್ಜಾಲದಲ್ಲಿ ಬಾರಿ ಪ್ರಮಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. 

40 ವರ್ಷದ ಸಮೀರ್ ವಾಂಖೆಡೆ ಮುಂಬೈನಲ್ಲಿ ಜನಿಸಿದರು. ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಸಮೀರ್ ಮರಾಠಿ ನಟಿ ಕ್ರಾಂತಿ ರೆಡ್ಕರ್ ಅವರನ್ನು 2017 ರಲ್ಲಿ ವಿವಾಹವಾಗಿದ್ದರು. 2004 ರಲ್ಲಿ ಭಾರತೀಯ ಕಂದಾಯ ಸೇವೆಗೆ (IRS) ಆಯ್ಕೆಗೊಂಡಿದ್ದರು. ಅವರು ಮೊದಲು ವಾಯು ಗುಪ್ತಚರ ಘಟಕದ (ಎಐಯು) ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐ ಎ) ಹೆಚ್ಚುವರಿ ಎಸ್‌ಪಿಯಾಗಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಜಂಟಿ ಆಯುಕ್ತರಾಗಿ, ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ತೆರಿಗೆ ವಂಚಿಸುವ ಶ್ರೀಮಂತರ ಬಂಡಾರವನ್ನೇ ಬಹಿರಂಗಪಡಿಸಿದ್ದಾರೆ. ತೆರಿಗೆ ವಂಚಕರ ಮೇಲೆ ಕಠಿಣ ಕ್ರಮ ಕೈಗೊಂಡು ಕೋಟ್ಯಂತರ ರೂ ತೆರಿಗೆ ಸಂಗ್ರಹಿಸಿದ್ದಾರೆ. ಸಮೀರ್ ನಿರ್ಭೀತ, ಶಿಸ್ತು ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಆವರೊಂದಿಗೆ ಕೆಲಸ ಮಾಡಿದವರು ಹೇಳುತ್ತಾರೆ. 

ಬಾಲಿವುಡ್ ಚಲನಚಿತ್ರಗಳೆಂದರೆ ಸಮೀರ್‌ ಅವರಿಗೆ ಬಹಳ ಇಷ್ಟ ಆದರೆ, ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ವೈಯಕ್ತಿಕ ಇಷ್ಟಾ ನಿಷ್ಟಾಗಳಿಗೆ ಜಾಗವೇ ಇಲ್ಲ 2020 ನವೆಂಬರ್ 22,ರಂದು ಡ್ರಗ್ಸ್ ಗ್ಯಾಂಗೊಂದು ಸಮೀರ್ ಸೇರಿ ಐವರು ಎನ್‌ಸಿಬಿ ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಅವರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com