'ನನ್ನ ಮಗ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಸುತ್ತಲಿ' ಎಂದಿದ್ದ ಶಾರುಖ್ ಖಾನ್ ಹಳೆಯ ವಿಡಿಯೋ ವೈರಲ್
ಖಾಸಗಿ ಕ್ರೂಸ್ ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಎನ್ ಸಿಬಿ ಬಂಧಿಸಿದ್ದು, ಇದರ ನಡುವೆಯೇ ಮಗನ ಕುರಿತು ಶಾರುಖ್ ಹೇಳಿದ್ದ ಮಾತುಗಳ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.
Published: 04th October 2021 01:05 PM | Last Updated: 04th October 2021 01:20 PM | A+A A-

ಶಾರುಖ್ ಖಾನ್ ಹಳೆಯ ಸಂದರ್ಶನ
ಮುಂಬೈ: ಖಾಸಗಿ ಕ್ರೂಸ್ ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಎನ್ ಸಿಬಿ ಬಂಧಿಸಿದ್ದು, ಇದರ ನಡುವೆಯೇ ಮಗನ ಕುರಿತು ಶಾರುಖ್ ಹೇಳಿದ್ದ ಮಾತುಗಳ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.
This is what #SRK did teach to his son #AryanKhan, So he is not wrong at all. pic.twitter.com/9H0UdhNNIB
— KRKBOXOFFICE (@KRKBoxOffice) October 3, 2021
ಸಿಮಿ ಗರೇವಾಲ್ ಅವರ ಸಂದರ್ಶನವೊಂದರಲ್ಲಿ ಪತ್ನಿ ಗೌರಿ ಖಾನ್ ಸಮೇತ ಪಾಲ್ಗೊಂಡಿದ್ದ ಶಾರುಖ್ ಖಾನ್ ಮಗನ ಕುರಿತು ಮಾತನಾಡಿದ್ದಾರೆ. ಸಂದರ್ಶಕಿ ಸಿಮಿ ಅವರು ಪುತ್ರನ ಭವಿಷ್ಯದ ಬಗ್ಗೆ ಕೇಳಿದಾಗ ತಮಾಷೆಯಾಗಿ ಉತ್ತರಿಸಿದ ಶಾರುಖ್ ಖಾನ್, 'ತಮ್ಮ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಸೇವಿಸಲಿ, ಮನಬಂದಷ್ಟು ಸಿಗರೇಟ್ ಸೇದಲಿ, ಬೇಕಾದರೆ ಹುಡುಗಿಯರ ಹಿಂದೆಯೂ ಹೋಗಲಿ.. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್ ಎಂಜಾಯ್ ಮಾಡಲಿ ಹೇಳಿದ್ದರು. ಈ ಸಂದರ್ಭದಲ್ಲಿ ಮಗನ ವಯಸ್ಸು 3 ವರ್ಷ ಎಂದೂ ಶಾರುಖ್ ಹೇಳಿದ್ದರು. ಪಕ್ಕದಲ್ಲೇ ಇದ್ದ ಗೌರಿಖಾನ್ ನಗುತ್ತಾ ಇಲ್ಲ.. 2 ವರ್ಷ ವಯಸ್ಸು ಎಂದು ಹೇಳುತ್ತಾರೆ.
1997ರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೊತೆಯಾಗಿ ನೀಡಿದ್ದ ಸಂದರ್ಶನ ಇದಾಗಿದ್ದು, ಶಾರುಖ್ ಅವರ ಈ ಹಳೆಯ ಹೇಳಿಕೆ ಇದೀಗ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇನ್ನು ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಅ.2ರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಬಾಲಿವುಡ್ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಭಾಗಿಯಾದ ಆರೋಪದ ಮೇರೆಗೆ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.