ಉತ್ತರ ಪ್ರದೇಶದಲ್ಲಿ ಯಾರೇ ಪ್ರತಿಭಟನೆ ಮಾಡಲಿ, ಅವರಿಗೆ ಹೊಡೆತ, ತುಳಿತವೇ ಉತ್ತರ: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕ

ಉತ್ತರ ಪ್ರದೇಶದಲ್ಲಿ ಹಿಂಸಾಚಾರ ನಡೆದ ಲಖಿಂಪುರ್ ಖೇರಿಗೆ ತೆರಳುತ್ತಿದ್ದಾಗ ಬಂಧನಕ್ಕೊಳಗಾಗಿರುವ ಪ್ರಿಯಾಂಕ ವಾಧ್ರ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ

ಲಖಿಂಪುರ್: ಉತ್ತರ ಪ್ರದೇಶದಲ್ಲಿ ಹಿಂಸಾಚಾರ ನಡೆದ ಲಖಿಂಪುರ್ ಖೇರಿಗೆ ತೆರಳುತ್ತಿದ್ದಾಗ ಬಂಧನಕ್ಕೊಳಗಾಗಿರುವ ಪ್ರಿಯಾಂಕ ವಾಧ್ರ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

"ಲಖಿಂಪುರ್ ಖೇರಿ ಘಟನೆ ಒಂದೇ ಅಲ್ಲ, ಉತ್ತರ ಪ್ರದೇಶದಲ್ಲಿ ಯಾರೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೂ ಅವರೆಡೆಗೆ ಹಿಂಸಾಚಾರ ಹಾಗೂ ತುಳಿತ ಸರ್ಕಾರದ ಉತ್ತರವಾಗಿರಲಿದೆ" ಎಂದು ಪ್ರಿಯಾಂಕ ವಾಧ್ರ ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಇದೇ ವೇಳೆ ಲಖನೌ ಗೆ ಆಗಮಿಸಿದ ಪ್ರಧಾನಿ ಮೋದಿ ವಿರುದ್ಧವೂ ಪ್ರಿಯಾಂಕ ವಾಧ್ರ ತೀವ್ರ ವಾಗ್ದಾಳಿ ನಡೆಸಿದ್ದು, ಹೆಲಿಕಾಫ್ಟರ್ ನಲ್ಲಿ ಲಖನೌ ದಿಂದ ಲಖೀಂಪುರ್ ಖೇರಿಗೆ ಕೇವಲ 15 ನಿಮಿಷಗಳ ಪ್ರಯಾಣ. ಆದರೂ ಹತ್ಯೆಗೀಡಾದವರ ಕುಟುಂಬದವರ ಕಣ್ಣೀರು ಒರೆಸಲು ಏಕೆ ಮೋದಿ ಬರುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. 

ಲಖಿಂಪುರ್ ಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಪ್ರಿಯಾಂಕ ವಾಧ್ರ ಅವರನ್ನು ಸೀತಾಪುರ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಲಖಿಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 4 ಮಂದಿ ರೈತರಾಗಿದ್ದು, ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ತೆರಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರ ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ್ದರು.ಇನ್ನಿತರ ಮಂದಿ ಬಿಜೆಪಿ ಕಾರ್ಯಕರ್ತರಾಗಿದ್ದು, ಅವರ ವಾಹನ ಚಾಲಕನನ್ನು ಹೊರಗೆಳೆದು ಪ್ರತಿಭಟನಾ ನಿರತರು ಥಳಿಸಿದ್ದರು. 

ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಅ.04 ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಭರವಸೆ ನೀಡಿತ್ತು. 

ಈ ಘಟನೆಗಳ ಬಗ್ಗೆ ಪಿಟಿಐನೊಂದಿಗೆ ಮಾತನಾಡಿರುವ ಪ್ರಿಯಾಂಕ ವಾಧ್ರ, "ಲಖಿಂಪುರ ಘಟನೆಯನ್ನು ತಾವು ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ದೊಡ್ಡ ಚಿತ್ರಣವಾಗಿ ನೋಡುತ್ತಿರುವುದಾಗಿ ಹೇಳಿದ್ದಾರೆ. ಲಖಿಂಪುರ ಒಂದೇ ಪ್ರಕರಣವಲ್ಲ. ಸರ್ಕಾರ ಪ್ರತಿಭಟನಾ ನಿರತರಿಗೆ ಪ್ರತಿಕ್ರಿಯೆಯಾಗಿ ಹಿಂಸಾಚಾರದ ಮೂಲಕ ಅವರ ಧ್ವನಿ ಅಡಗಿಸುವುದು, ತುಳಿಯುತ್ತಿದೆ" ಎಂದು ಹೇಳಿದ್ದಾರೆ. 

"ನಿರಂತರ ತುಳಿತಕ್ಕೆ ಒಳಗಾಗಿದ್ದರಿಂದ ಈ ತೀವ್ರತರವಾದ ಪರಿಸ್ಥಿತಿ ಉಂಟಾಗಿದೆ, ಆದ್ದರಿಂದ ಉತ್ತರ ಪ್ರದೇಶದಲ್ಲಿ ಯಾರೇ ಪ್ರತಿಭಟನೆ ನಡೆಸಲಿ, ವಿದ್ಯಾರ್ಥಿಗಳಿರಲಿ ಅಥವಾ ಶಿಕ್ಷಕರಿರಲಿ ಅವರನ್ನು ಥಳಿಸಲಾಗುತ್ತದೆ ಹಾಗೂ ಜೈಲಿಗೆ ಕಳಿಸಲಾಗುತ್ತದೆ" ಎಂದು ಪ್ರಿಯಾಂಕ ವಾಧ್ರ ಆರೋಪಿಸಿದ್ದಾರೆ. 

ಪ್ರತಿಭಟನೆ ಮೂಲಕ, ತಮ್ಮ ಹಕ್ಕುಗಳ ಬೇಡಿಕೆಗಾಗಿ ಧ್ವನಿ ಎತ್ತುವ ಜನರಿಗೆ ಹಿಂಸಾತ್ಮಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಪ್ರಿಯಾಂಕ ವಾಧ್ರ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ನಮ್ಮ ದೇಶದ ಗಡಿಯನ್ನು ಕಾಯುವುದಕ್ಕೆ ನಿಲ್ಲುವುದು ಇದೇ ರೈತರ ಮಕ್ಕಳು ಅವರು ಪ್ರತಿ ದಿನ ನಮ್ಮ ಸ್ವಾತಂತ್ರ್ಯವನ್ನು ಕಾಪಾಡುತ್ತಿದ್ದಾರೆ. ಆದರೆ ಅವರ ಮಕ್ಕಳ ಸಾವಿಗೆ ಕಾರಣರಾದವರ ತಂದೆಯನ್ನು ಸಚಿವ ಹುದ್ದೆಯಿಂದ ಇನ್ನೂ ಏಕೆ ವಜಾಗೊಳಿಸಿಲ್ಲ? ಎಂದು ಪ್ರಿಯಾಂಕ ವಾಧ್ರ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com