ಲಖೀಂಪುರ್ ಹಿಂಸಾಚಾರ: ಮನವಿ ಸಲ್ಲಿಸಲು ರಾಷ್ಟ್ರಪತಿಗಳ ಅಪಾಯಿಂಟ್ಮೆಂಟ್ ಕೋರಿದ ಕಾಂಗ್ರೆಸ್ 

ಅಕ್ಟೋಬರ್ 3 ರಂದು ಸಂಭವಿಸಿದ ಲಖೀಂಪುರ್ ಖೇರಿ ಹಿಂಸಾಚಾರ ಸಂಗತಿಯ ಬಗ್ಗೆ ಸಮಗ್ರ ಮನವಿಯೊಂದನ್ನು ರಾಹುಲ್ ಗಾಂಧಿ ನೇತೃತ್ವದ ಏಳು ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಅಪಾಯಿಂಟ್ಮೆಂಟ್ ನ್ನು ಕೋರಿದೆ.
ರೈತರೊಂದಿಗೆ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ
ರೈತರೊಂದಿಗೆ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ

ನವದೆಹಲಿ: ಅಕ್ಟೋಬರ್ 3 ರಂದು ಸಂಭವಿಸಿದ ಲಖೀಂಪುರ್ ಖೇರಿ ಹಿಂಸಾಚಾರ ಸಂಗತಿಯ ಬಗ್ಗೆ ಸಮಗ್ರ ಮನವಿಯೊಂದನ್ನು ರಾಹುಲ್ ಗಾಂಧಿ ನೇತೃತ್ವದ ಏಳು ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಅಪಾಯಿಂಟ್ಮೆಂಟ್ ನ್ನು ಕೋರಿದೆ.

ಪ್ರತಿಭಟನೆ, ಸುಪ್ರೀಂಕೋರ್ಟ್ ಮಧ್ಯ ಪ್ರವೇಶದ ಹೊರತಾಗಿಯೂ ರೈತರ ಸಾವಿಗೆ ಸಂಬಂಧಿಸಿದಂತೆ  ಆರೋಪಿಗಳು ಅಥವಾ ಸಚಿವರ ವಿರುದ್ಧ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. 

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಚಲಾಯಿಸುತ್ತಿದ್ದ ಕಾರು ರೈತರ ಮೇಲೆ ಹರಿದ್ದಾಗಿ ಘಟನೆಯನ್ನು ಪ್ರತ್ಯೇಕ್ಷವಾಗಿ ಕಂಡ ರೈತರು ಹೇಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com