ಕಲ್ಲಿದ್ದಲು ಕೊರತೆ ಸಮಸ್ಯೆ ಮುಂದಿನ ಒಂದೆರೆಡು ವಾರಗಳಲ್ಲಿ ಸ್ಥಿರಗೊಳ್ಳುತ್ತದೆ: ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್

ದೇಶದಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆಯ ವರದಿಗಳ ನಡುವೆ, ಮುಂದಿನ ಒಂದೆರಡು ವಾರಗಳಲ್ಲಿ ಸಮಸ್ಯೆಯನ್ನು ಸ್ಥಿರಗೊಳಿಸಲಾಗುವುದು ಎಂದು ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್(ಸಿಸಿಎಲ್) ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ರಾಂಚಿ: ದೇಶದಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆಯ ವರದಿಗಳ ನಡುವೆ, ಮುಂದಿನ ಒಂದೆರಡು ವಾರಗಳಲ್ಲಿ ಸಮಸ್ಯೆಯನ್ನು ಸ್ಥಿರಗೊಳಿಸಲಾಗುವುದು ಎಂದು ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್(ಸಿಸಿಎಲ್) ಹೇಳಿದೆ.

ದೇಶದಲ್ಲಿ ಅಂತಹ ಯಾವುದೇ ಬಿಕ್ಕಟ್ಟು ಇಲ್ಲ. ಖಂಡಿತವಾಗಿಯೂ ಕಲ್ಲಿದ್ದಲು ಸಂಗ್ರಹವು ಕಡಿಮೆ ಮಟ್ಟದಲ್ಲಿದೆ. ಏಕೆಂದರೆ ಈ ವರ್ಷ ವಿದ್ಯುತ್ ಉತ್ಪಾದನೆಯು ಅಧಿಕವಾಗಿದೆ. ಹೆಚ್ಚಿನ ಬೆಳವಣಿಗೆ ಇದಕ್ಕೆ ಕಾರಣವಾಗಿದೆ. ನಾವು ಹಣಕಾಸಿನ ವರ್ಷದ ಮೊದಲಾರ್ಧದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು 53 ಮಿಲಿಯನ್ ಟನ್‌ಗಳನ್ನು ಪೂರೈಸಿದ್ದೇವೆ ಎಂದು ಸಿಸಿಎಲ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪಿಎಂ ಪ್ರಸಾದ್ ಹೇಳಿದ್ದಾರೆ. 

ಪ್ರಸ್ತುತ ಕಲ್ಲಿದ್ದಲು ದಾಸ್ತಾನು ಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಕೋಲ್ ಇಂಡಿಯಾ ಸ್ಟಾಕ್ ಕನಿಷ್ಠ 20 ದಿನಗಳವರೆಗೆ ಇರುತ್ತದೆ ಎಂದು ಪಿಎಂ ಪ್ರಸಾದ್ ಹೇಳಿದ್ದಾರೆ. 

ಸಿಸಿಎಲ್ ನ ಸಂದರ್ಭದಲ್ಲಿ ಇದು 1.95 ಮಿಲಿಯನ್ ಮತ್ತು ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್(ಬಿಸಿಸಿಎಲ್) ನಲ್ಲಿ ಇದು 6.5 ಲಕ್ಷ ಟನ್ ಆಗಿದೆ. ಈ ಸ್ಟಾಕ್ ಮಟ್ಟದಿಂದ ಮತ್ತು ಮುಂಗಾರು ಮುಗಿದ ನಂತರ ಉತ್ಪಾದನೆ ಹೆಚ್ಚಾಗುತ್ತದೆ. ಸ್ಟಾಕ್ ಒಂದೇ ರೀತಿ ಉಳಿದಿದೆ, ನಾವು ಏನು ಉತ್ಪಾದಿಸಿದರೂ ಅದು ವಿದ್ಯುತ್ ಸ್ಥಾವರಕ್ಕೆ ರವಾನೆಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. 

ಮುಂಗಾರು ಮುಗಿದ ನಂತರ, ಮುಂದಿನ ಒಂದು ವಾರದಲ್ಲಿ ಅದು ಸ್ಥಿರಗೊಳ್ಳುತ್ತದೆ ಎಂದು ನನಗೆ ತುಂಬಾ ವಿಶ್ವಾಸವಿದೆ. ದುರ್ಗಾ ಪೂಜೆಯ ನಂತರ, ಇದು ಮತ್ತಷ್ಟು ಹೆಚ್ಚಾಗಲಿದೆ. ಕಳೆದ 3-4 ದಿನಗಳಲ್ಲಿ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲನ್ನು ಪಡೆಯಲಿವೆ. 1.6 ಮಿಲಿಯನ್‌ ಅವಶ್ಯಕತೆ ಇದ್ದರೆ ಸುಮಾರು 1.55 ಮಿಲಿಯನ್‌ ನಷ್ಟು ಪೂರೈಸಲಾಗುತ್ತಿದೆ. ಮುಂಬರುವ ಒಂದು ಅಥವಾ ಎರಡು ವಾರಗಳಲ್ಲಿ ಅದನ್ನು ಸ್ಥಿರಗೊಳಿಸಲಾಗುವುದು ಎಂದು ನನಗೆ ತುಂಬಾ ವಿಶ್ವಾಸವಿದೆ ಎಂದು ಅವರು ಒತ್ತಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com