ಕ್ರೂಸ್ ಶಿಪ್ ಡ್ರಗ್ ಕೇಸು: ಅರ್ತೂರ್ ರೋಡ್ ಜೈಲಿನ ಸಾಮಾನ್ಯ ಕೊಠಡಿಗೆ ಆರ್ಯನ್ ಖಾನ್ ಸೇರಿ 6 ಮಂದಿ ವರ್ಗ 

ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರ ಐವರು ಆರೋಪಿಗಳನ್ನು ಮುಂಬೈ ಅರ್ಥೂರ್ ರೋಡ್ ಜೈಲಿನ ಸಾಮಾನ್ಯ ಕೊಠಡಿಗೆ ವರ್ಗಾಯಿಸಲಾಗಿದೆ. ಇಷ್ಟು ದಿನ ಕೋವಿಡ್ ಕ್ವಾರಂಟೈನ್ ಕೊಠಡಿಯಲ್ಲಿದ್ದ ಈ ಆರೋಪಿಗಳ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ಕೊಠಡಿಗೆ ವರ್ಗಾಯಿಸಲಾಗಿದೆ.
ಆರ್ಯನ್ ಖಾನ್
ಆರ್ಯನ್ ಖಾನ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರ ಐವರು ಆರೋಪಿಗಳನ್ನು ಮುಂಬೈ ಅರ್ಥೂರ್ ರೋಡ್ ಜೈಲಿನ ಸಾಮಾನ್ಯ ಕೊಠಡಿಗೆ ವರ್ಗಾಯಿಸಲಾಗಿದೆ. ಇಷ್ಟು ದಿನ ಕೋವಿಡ್ ಕ್ವಾರಂಟೈನ್ ಕೊಠಡಿಯಲ್ಲಿದ್ದ ಈ ಆರೋಪಿಗಳ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ಕೊಠಡಿಗೆ ವರ್ಗಾಯಿಸಲಾಗಿದೆ.

ಮುಂಬೈ ಕ್ರೂಸ್ ಹಡಗು ಮೇಲೆ ರೇವ್ ಪಾರ್ಟಿ ನಡೆಸುತ್ತಿದ್ದ ವೇಳೆ ಮಾದಕ ವಸ್ತು ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ಸೇರಿದಂತೆ ಇತರರನ್ನು ಕಳೆದ ಅಕ್ಟೋಬರ್ 2ರಂದು ಎನ್ ಸಿಬಿ ಬಂಧಿಸಿತ್ತು. 

ಮುಂಬೈಯ ನಾರ್ಕೊಟಿಕ್ಸ್ ಡ್ರಗ್ಸ್ ಅಂಡ್ ಸೈಕೊಟ್ರೊಪಿಕ್ ಸಬ್ಸ್ಟೆನ್ಸ್ (ಎನ್ ಡಿಪಿಎಸ್) ಕೋರ್ಟ್ ಆರ್ಯನ್ ಖಾನ್, ಅರ್ಬಾಸ್ ಮರ್ಚೆಂಟ್ ಮತ್ತು ಮುನ್ಮುನ್ ಧಮೆಚ ಅವರ ಜಾಮೀನು ಅರ್ಜಿಯನ್ನು ಆಲಿಸುತ್ತಿದೆ. ಪ್ರಕರಣದಲ್ಲಿ ಇದುವರೆಗೆ ಒಟ್ಟು 20 ಮಂದಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com