ಭಾರತದ ಬುಡಕಟ್ಟು ಜನಸಂಖ್ಯೆಗೆ ಕೋವಿಡ್-19 ನ ಅಪಾಯ ಹೆಚ್ಚು: ಅಧ್ಯಯನ ವರದಿ 

ಅಂಡಮಾನ್ ದ್ವೀಪದಲ್ಲಿ ಪ್ರತ್ಯೇಕವಾಗಿ ವಾಸಿಸುವ ಒಂಗೆ,ಜರವ ರೀತಿಯ ಭಾರತದ ಬುಡಕಟ್ಟು ಜನಸಂಖ್ಯೆಗೆ ಕೋವಿಡ್-19 ನ ಅಪಾಯ ಹೆಚ್ಚು ಇರಲಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.
ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ (ಸಂಗ್ರಹ ಚಿತ್ರ)
ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ (ಸಂಗ್ರಹ ಚಿತ್ರ)

ನವದೆಹಲಿ: ಅಂಡಮಾನ್ ದ್ವೀಪದಲ್ಲಿ ಪ್ರತ್ಯೇಕವಾಗಿ ವಾಸಿಸುವ ಒಂಗೆ,ಜರವ ರೀತಿಯ ಭಾರತದ ಬುಡಕಟ್ಟು ಜನಸಂಖ್ಯೆಗೆ ಕೋವಿಡ್-19 ನ ಅಪಾಯ ಹೆಚ್ಚು ಇರಲಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

ಸಿಎಸ್ ಐಆರ್- ಸಿಸಿಎಂಬಿ ಹಾಗೂ ಬಿಹೆಚ್ ಯು ಸಂಶೋಧಕರು ನಡೆಸಿದ ಅಧ್ಯಯನ ವರದಿ ಇದಾಗಿದೆ.

ಜರ್ನಲ್ ಜೀಸ್&ಇಮ್ಯುನಿಟಿಯಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದ್ದು, ಸರ್ಕಾರ ಈ ಪ್ರತ್ಯೇಕವಾಗಿ ವಾಸಿಸುವ ಮಂದಿಗೆ ಹೆಚ್ಚಿನ ಆದ್ಯತೆಯ ಭದ್ರತೆ ಹಾಗೂ ಕಾಳಜಿಯನ್ನು ವಹಿಸಬೇಕೆಂದು ಸಲಹೆ ನೀಡಿದೆ. 

ಹೈದರಾಬಾದ್ ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರಕ್ಕಾಗಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದ ಪರಿಷತ್ (CSIR-CCMB) ನ ಕುಮಾರಸ್ವಾಮಿ ತ್ಯಾಗರಾಜ್ ಹಾಗೂ ಬನಾರಸ್ ಹಿಂದೂ ವಿವಿಯ ಪ್ರೊಫೆಸರ್ ಗ್ಯಾನೇಶ್ವರ್ ಚೌಬೆ ಜಾಗತಿಕ ಮಟ್ಟದಲ್ಲಿ ವಿವಿಧ ಜನಾಂಗೀಯ ಗುಂಪುಗಳನ್ನು ಕೋವಿಡ್-19 ವೈರಾಣು ಪರಿಣಾಮ ಬೀರಿದೆ ಎಂಬುದನ್ನು ಗುರುತಿಸಿದ್ದಾರೆ.

ಇತ್ತೀಚೆಗಷ್ಟೇ ಬ್ರೆಜಿಲ್ ನಲ್ಲಿ ದೇಶೀಯ ಜನಾಂಗೀಯ ಗುಂಪುಗಳನ್ನು SARS-CoV-2 ವೈರಾಣುಗಳು ತೀವ್ರವಾಗಿ ಬಾಧಿಸಿರುವುದು ವರದಿಯಾಗಿದೆ. ಈ ಜನಾಂಗೀಯ ಗುಂಪಿನಲ್ಲಿ ಕೋವಿಡ್ ನಿಂದ ಸಂಭವಿಸಿರುವ ಸಾವಿನ ಪ್ರಮಾಣ ಬೇರೆಯದ್ದಕ್ಕೆ ಹೋಲಿಕೆ ಮಾಡಿದರೆ ದುಪ್ಪಟ್ಟಿದೆ ಎನ್ನುತ್ತಾರೆ ಸಂಶೋಧಕರು.

ಈ ಸಾಂಕ್ರಾಮಿಕದ ಕಾರಣದಿಂದಾಗಿ ಹಲವಾರು ಪ್ರದೇಶಗಳಲ್ಲಿ ಅಲ್ಲಿನ ದೇಶೀಯ ಸಮುದಾಯಗಳು ಅವನತಿಯ ಅಂಚಿಗೂ ಹೋಗಿರುವುದನ್ನು ಸಂಶೋಧಕರು ಉಲ್ಲೇಖಿಸಿದ್ದಾರೆ.

ಸಂಶೋಧಕರ ಮಾಹಿತಿಯ ಪ್ರಕಾರ, ಅಂಡಮಾನ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಹಲವಾರು ಸಣ್ಣ ಬುಡಕಟ್ಟು ಜನಾಂಗಗಳಿದ್ದು ಕೋವಿಡ್-19 ಕರಿನೆರಳು ಇವರ ಮೇಲೆಯೂ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.

13 ವಿವಿಧ ಸಂಸ್ಥೆಗಳಿಂದ 11ವಿಜ್ಞಾನಿಗಳಿರುವ ತಂಡದಲ್ಲಿ ಸಂಶೋಧಕರು 227 ಭಾರತೀಯ ವಿವಿಧ ಜನಾಂಗಗಳ ಜಿನೋಮ್ ವಿಶ್ಲೇಷಣೆಯನ್ನು ನಡೆಸಿದ್ದು, ಈ ಪೈಕಿ ಈ ಜನಸಂಖ್ಯೆಯಲ್ಲಿ ತಮ್ಮ ಜೀನೋಮ್‌ನಲ್ಲಿ ದೀರ್ಘ ಹೋಮೋಜೈಗಸ್ ವಿಭಾಗಗಳನ್ನು ಹೊಂದಿರುವವರು ಕೋವಿಡ್-19 ನಿಂದ ಹೆಚ್ಚು ಅಪಾಯ ಎದುರಿಸುತ್ತಿರುತ್ತಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com