ಹವಾಯಿ ಚಪ್ಪಲಿ ಧರಿಸಿರುವವರು ವಿಮಾನದಲ್ಲಿ ಪ್ರಯಾಣಿಸುವುದಿರಲಿ, ಜನ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ!
ನವದೆಹಲಿ : ಇಂಧನ ದರ ದರ ತೀವ್ರ ಏರಿಕೆಯಿಂದಾಗಿ ಮಧ್ಯಮವರ್ಗದ ಜನರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಹವಾಯಿ ಚಪ್ಪಲಿಯನ್ನು ಧರಿಸಿರುವವರೂ ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಈಗ ಮಧ್ಯಮವರ್ಗದ ಜನರಿಗೂ ರಸ್ತೆಯಲ್ಲಿ ಚಲಿಸಲಾಗದ ಸ್ಥಿತಿಯನ್ನು ತರಲಾಗಿದೆ ಎಂದು ಟೀಕಿಸಿದ್ದಾರೆ. ವಿಮಾನಗಳಿಗೆ ಬಳಸುವ ಎಟಿಎಫ್ ತೈಲದ ದರಕ್ಕಿಂತಲೂ ಪೆಟ್ರೋಲ್, ಡೀಸೆಲ್ ದರ ಈಗ ಮೂರು ಪಟ್ಟು ಹೆಚ್ಚಾಗಿದೆ ಎಂದು ವಾಗ್ದಾಳಿ
ನಡೆಸಿದ್ದಾರೆ.
ಬಿಜೆಪಿ ಭರವಸೆ ಕುರಿತಂತೆ ಮಾಧ್ಯಮ ವರದಿಯ ಜೊತೆಗೆ ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯು ದುಬಾರಿ ದಿನಗಳನ್ನು ತಂದಿಟ್ಟಿದೆ’ ಎಂದು ವ್ಯಂಗ್ಯಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ದರವನ್ನು ಭಾನುವಾರ ಲೀಟರಿಗೆ 35 ಪೈಸೆ ಏರಿಸಲಾಗಿತ್ತು. ಇದರ ಪರಿಣಾಮ, ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಬಳಸುವ ಪೆಟ್ರೋಲ್‌ದರವು, ವಿಮಾನಗಳಿಗೆ ಬಳಸುವ ಎಟಿಎಫ್ ತೈಲಕ್ಕಿಂತಲೂ ಶೇ 33ರಷ್ಟು ಅಧಿಕವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ