ಶಾರೂಖ್ ಪುತ್ರನಿಗೆ ಜೈಲೇ ಗತಿ: ಜಾಮೀನು ಅರ್ಜಿ ವಜಾಗೊಳಿಸಿದ ಎನ್‌ಡಿಪಿಎಸ್ ವಿಶೇಷ ಕೋರ್ಟ್!
ಮುಂಬೈನ ಐಷಾರಾಮಿ ಹಡಗಿನೊಂದರಲ್ಲಿನ ಡ್ರಗ್ ಪಾರ್ಟಿ ಸಂಬಂಧ ಬಂಧಿತನಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಎನ್‌ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿದ್ದು ಆರ್ಯನ್ ಗೆ ಇನ್ನು ಕೆಲ ದಿನ ಜೈಲೇ ಗತಿ.
Published: 20th October 2021 03:17 PM | Last Updated: 20th October 2021 03:47 PM | A+A A-

ಆರ್ಯನ್ ಖಾನ್
ಮುಂಬೈ: ಮುಂಬೈನ ಐಷಾರಾಮಿ ಹಡಗಿನೊಂದರಲ್ಲಿನ ಡ್ರಗ್ ಪಾರ್ಟಿ ಸಂಬಂಧ ಬಂಧಿತನಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಎನ್‌ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿದ್ದು ಆರ್ಯನ್ ಗೆ ಇನ್ನು ಕೆಲ ದಿನ ಜೈಲೇ ಗತಿ.
ಅಕ್ಟೋಬರ್ 3ರಂದು ಎನ್ಸಿಬಿಯಿಂದ ಬಂಧಿತನಾಗಿದ್ದ ಆರ್ಯನ್ ಖಾನ್ ಸದ್ಯ ಮುಂಬೈನ ಅರ್ಥೂರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದನ್ನೂ ಓದಿ: ಡ್ರಗ್ಸ್ ಕೇಸ್: ಜೈಲಿನಿಂದ ಶಾರೂಖ್ ಗೆ ವಿಡಿಯೋ ಕಾಲ್; 4,500 ರೂ. ಮನಿ ಅರ್ಡರ್ ಪಡೆದ ಆರ್ಯನ್ ಖಾನ್
ಆರ್ಯನ್ ಖಾನ್ ಗೆ ಜಾಮೀನು ನೀಡುವಂತೆ ಮುಂಬೈನ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಸೇರಿದಂತೆ ಇನ್ನು ಮೂವರಿಗೆ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: 'ಒಳ್ಳೆಯ ಮನುಷ್ಯನಾಗುತ್ತೇನೆ; ಶಾರುಖ್ ಖಾನ್ ಪುತ್ರನ ವಾಗ್ದಾನ'
ಈ ಪ್ರಕರಣದ ಆರೋಪಿ ಆರ್ಯನ್ ಖಾನ್ ಮತ್ತು ಇತರರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.