ಒಡಿಶಾದ ಕೊನಾರ್ಕ್ ದೇಗುಲದಂತೆ, ರಾ​ಮ​ನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿ​ಸು​ವಂತೆ ರಾಮ​ಮಂದಿರ ನಿರ್ಮಾ​ಣ!

ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದರ ನಡುವೆಯೇ ದೇಗುಲ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಬಯಲಾಗಿದ್ದು, ಒಡಿಶಾದ ಕೊನಾರ್ಕ್ ದೇಗುಲದಂತೆ, ರಾ​ಮ​ನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿ​ಸು​ವಂತೆ ರಾಮ​ಮಂದಿರ ನಿರ್ಮಾ​ಣ ಮಾಡಲಾಗುತ್ತಿದೆ ಎನ್ನಲಾಗಿದೆ.
ರಾಮಮಂದಿರದ ವಿನ್ಯಾಸ
ರಾಮಮಂದಿರದ ವಿನ್ಯಾಸ

ಅಯೋಧ್ಯೆ: ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದರ ನಡುವೆಯೇ ದೇಗುಲ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಬಯಲಾಗಿದ್ದು, ಒಡಿಶಾದ ಕೊನಾರ್ಕ್ ದೇಗುಲದಂತೆ, ರಾ​ಮ​ನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿ​ಸು​ವಂತೆ ರಾಮ​ಮಂದಿರ ನಿರ್ಮಾ​ಣ ಮಾಡಲಾಗುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯ ಕಾಮೇ​ಶ್ವರ ಚಂಪಂತ್ ರಾಯ್ ಅವರು ಮಾಹಿತಿ ನೀಡಿದ್ದು, ಒಡಿಶಾದ ಕೊನಾರ್ಕ್ ದೇಗುಲದ ಕೌತುಕದಂತೆಯೇ ರಾಮಮಂದಿರದಲ್ಲೂ ರಾ​ಮ​ನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿ​ಸು​ವಂತೆ ರಾಮ​ಮಂದಿರ ನಿರ್ಮಾ​ಣ ಮಾಡಲಾಗುತ್ತಿದೆ. ಪ್ರತೀ ರಾಮನವಮಿಯಂದು ಈ ಪ್ರಾಕೃತಿಕ ಕೌತುಕ ನಡೆಯುವಂತೆ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

'ಪ್ರತಿ ರಾಮನವಮಿ ದಿನ ಸೂರ್ಯರಶ್ಮಿ ಗರ್ಭಗುಡಿ ಪ್ರವೇಶಿಸುವಂತೆ ದೇಗುಲ ವಿನ್ಯಾಸಗೊಳಿಸಲಾಗು​ವು​ದು. ಈ ಒಂದು ವಿನ್ಯಾಸಕ್ಕೆ 13ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯವೇ ಪ್ರೇರಣೆ. ವಿಜ್ಞಾನಿಗಳು, ಜ್ಯೋತಿಷಿಗಳು, ಮತ್ತು ತಂತ್ರಜ್ಞರ ಸಲಹೆ ಪಡೆದು ರಾಮನವಮಿಯಂದು ಸೂರ್ಯರಶ್ಮಿ ಗರ್ಭಗುಡಿ ಪ್ರೇವೇಶಿಸುವಂತೆ ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಕೋನಾರ್ಕ್ ಸೂರ್ಯ ದೇಗುಲ ನಮಗೆ ಮಾದರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀ ರಾಮ ನವಮಿಯಂದು ಕೆಲವು ನಿಮಿಷಗಳ ಕಾಲ ರಾಮನ ಮೂರ್ತಿಯ ಮೇಲೆ ಸೂರ್ಯನ ಕಿರಣಗಳು ಬೀಳುವ ಕುರಿತು ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಅವರು ಹೇಳಿ​ದ್ದಾ​ರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಿಲ್ಡಿಂಗ್ ಕನ್‌ಸ್ಟ್ರಕ್ಷನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ, ಐಐಟಿ ಮುಂಬೈ ಮತ್ತು ಐಐಟಿ ರೂರ್ಕಿಯ ತಜ್ಞರನ್ನು ಒಳಗೊಂಡ ಸಮಿತಿಯು ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ಅಂಶಗಳನ್ನು ನಿರ್ಧರಿಸಲು ಸ್ಥಾಪಿಸಲಾಗಿದೆ ಎಂದು ಹೇಳಿದರು. 

2023ರ ಡಿಸೆಂಬರ್‌ ವೇಳೆಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣ
2023ರ ಡಿಸೆಂಬರ್‌ ವೇಳೆಗೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಈಗಾಗಲೇ ಮೊದಲಹಂತದ ನಿರ್ಮಾಣ ಕಾರ್ಯಗಳು ಮುಕ್ತಾಯವಾಗಿದ್ದು ನವೆಂಬರ್‌ ಮೂರನೇ ವಾರದಿಂದ ಎರಡನೇ ಹಂತದ ನಿರ್ಮಾಣ ಕಾರ್ಯಗಳು ಶುರುವಾಗಲಿವೆ. ಉತ್ತರ ಪ್ರದೇಶ ಭೂಕಂಪ ಪೀಡಿತ ಮತ್ತು ಹಿಮಾಲಯದ ತಪ್ಪಲಲ್ಲಿರುವ ಪ್ರದೇಶವಾದ್ದರಿಂದ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ವೈಜ್ಞಾನಿಕ, ಭೌಗೋಳಿಕ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಮೂಲ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಎರಡು ಅಂತಸ್ತಿನ ಬದಲು ಮೂರು ಅಂತಸ್ತು ಕಟ್ಟಲಾಗುತ್ತದೆ ಎಂದು ರಾಯ್ ತಿಳಿಸಿದ್ದಾರೆ.

ಪ್ರಸ್ತುತ ದೇವಾಲಯದ ಅಡಿಪಾಯದ ಮೇಲಿರುವ ತೆಪ್ಪದ ಎರಕದ ಕೆಲಸ ನಡೆಯುತ್ತಿದೆ. ಬಿತ್ತರಿಸುವ ಸಮಯದಲ್ಲಿ ಗರಿಷ್ಠ 22-23 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಬೇಕಾಗುತ್ತದೆ. ಇದಕ್ಕಾಗಿ, ರಾತ್ರಿಯ ಸಮಯದಲ್ಲಿ ಕೆಲಸ (ಎರಕಹೊಯ್ದ) ಮಾಡಲಾಗುತ್ತಿದೆ. ತಾಪಮಾನವನ್ನು ನಿರ್ವಹಿಸಲು ದೊಡ್ಡ ಪ್ರಮಾಣದಲ್ಲಿ ಐಸ್ ಅನ್ನು ಸಹ ಬಳಸಲಾಗುತ್ತಿದೆ.  ಅಲ್ಲದೇ ರಾಮಮಂದಿರ ವಸ್ತು ಸಂಗ್ರಹಾಲಯ, ದಾಖಲೆಗಳ ಸಂಗ್ರಹಾಲಯ ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಪ್ರವಾಸಿ ಕೇಂದ್ರ ಆಡಳಿತ ಭವನ, ಯೋಗ ಕೇಂದ್ರ ಸೇರಿ ಇತರ ಸೌಲಭ್ಯಗಳನ್ನು ಒಳಗೊಂಡಿರಲಿದೆ ಎಂದು ಅವರು ಮಾಹಿತಿ ನೀಡಿದರು.

ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಗ್ರಾನೈಟ್‌
ರಾಮಮಂದಿರ ಅಡಿಪಾಯ ನಿರ್ಮಾಣದ ನಂತರ ದೇವಸ್ಥಾನದ ಎರಡನೇ ಹಂತದ ನಿರ್ಮಾಣ ಕಾರ್ಯಗಳಿಗೆ ಮಂಗಳವಾರ ಚಾಲನೆ ನೀಡಲಾಗಿದೆ. ಈ ಹಂತದಲ್ಲಿ ದೇವಸ್ಥಾನದ ಪ್ಲಿಂಥ್‌ ನಿರ್ಮಾಣಕ್ಕೆ ಕರ್ನಾಟಕ ಚಾಮರಾಜನಗರದ ಕೊಳ್ಳೆಗಾಲ ಪ್ರದೇಶದ ಕಪ್ಪು ಗ್ರಾನೈಟ್‌ ಕಲ್ಲನ್ನು ಬಳಸಲಾಗುತ್ತಿದೆ. ಇದರ ಅಕ್ಕಪಕ್ಕದಲ್ಲಿ ಮಿರ್ಜಾಪುರದ ಕಲ್ಲುಗಳು ಮತ್ತು ರಾಜಸ್ಥಾನದ ಗುಲಾಬಿ ಬಣ್ಣದ ಕಲ್ಲುಗಳಲ್ಲಿ ಶಿಲ್ಪಗಳನ್ನು ಕೆತ್ತಲಾಗುತ್ತಿದೆ.

‘ಈಗಾಗಲೇ ಕೊಳ್ಳೆಗಾಲ ಮತ್ತು ಮಿರ್ಜಾಪುರಗಳಿಂದ ಕಲ್ಲುಗಳ ಪೂರೈಕೆ ಆರಂಭವಾಗಿದೆ. ಭಾರತಾದ್ಯಂತ ವಿಎಚ್‌ಪಿ 2 ಲಕ್ಷ ಇಟ್ಟಿಗೆಗಳನ್ನು ದೇವಸ್ಥಾನಕ್ಕಾಗಿ ಸಂಗ್ರಹ ಮಾಡಿದೆ. 1989ರಿಂದ ಭಕ್ತರು ದೇವಸ್ಥಾನ ನಿರ್ಮಾಣಕ್ಕೆ 3 ಲಕ್ಷಕ್ಕೂ ಇಟ್ಟಿಗೆಗಳನ್ನು ನೀಡಿದ್ದಾರೆ ಈಗ ಇವುಗಳನ್ನು ದೇವಸ್ಥಾನ ನಿರ್ಮಾವಾಗುತ್ತಿರುವ ಸ್ಥಳಕ್ಕೆ ಸಾಗಿಸಲಾಗುತ್ತಿದೆ ಎಂದು ರಾಮ ಜನ್ಮ ಭೂಮಿ ಟ್ರಸ್ಟ್‌ನ ಸದಸ್ಯ ಅನಿಲ್‌ ಮಿಶ್ರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com