ತಲೆ-ಬುಡಗಳಿಲ್ಲದ ಕಾಮಗಾರಿಗಳೇ ಉತ್ತರಾಖಂಡ ದುರಂತಕ್ಕೆ ಕಾರಣ: ಪರಿಸರವಾದಿಗಳ ಆಕ್ರೋಶ
ಕೇವಲ 2 ದಿನ ಸುರಿದ ಮಳೆಗೇ ಉತ್ತರಾಖಂಡ ರಾಜ್ಯ ಮತ್ತೆ ಪ್ರವಾಹದಲ್ಲಿ ಮುಳುಗಿದ್ಜು, ಆ ರಾಜ್ಯದ ಇಂದಿನ ದಯನೀಯ ಪರಿಸ್ತಿಗೆ ಅಲ್ಲಿ ನಡೆಯುತ್ತಿರುವ ಬುದ್ದಿಹೀನ -ದೂರದೃಷ್ಟಿ ರಹಿತ ಕಾಮಗಾರಿಗಳೇ ಕಾರಣ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
Published: 21st October 2021 01:02 PM | Last Updated: 21st October 2021 01:02 PM | A+A A-

ಉತ್ತರಾಖಂಡ ಪ್ರವಾಹ
ಡೆಹ್ರಾಡೂನ್: ಕೇವಲ 2 ದಿನ ಸುರಿದ ಮಳೆಗೇ ಉತ್ತರಾಖಂಡ ರಾಜ್ಯ ಮತ್ತೆ ಪ್ರವಾಹದಲ್ಲಿ ಮುಳುಗಿದ್ಜು, ಆ ರಾಜ್ಯದ ಇಂದಿನ ದಯನೀಯ ಪರಿಸ್ತಿಗೆ ಅಲ್ಲಿ ನಡೆಯುತ್ತಿರುವ ಬುದ್ದಿಹೀನ -ದೂರದೃಷ್ಟಿ ರಹಿತ ಕಾಮಗಾರಿಗಳೇ ಕಾರಣ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಉತ್ತರಾಖಂಡದಲ್ಲಿ ಇದುವರೆಗೆ ಅತಿಹೆಚ್ಚು ಮಳೆ ದಾಖಲಾಗಿದೆ. ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಪರಿಸರವಾದಿಗಳು, ಆ ರಾಜ್ಯದಲ್ಲಿ ನಡೆಯುತ್ತಿರುವ ಅತಿರೇಕದ, ಬುದ್ದಿಹೀನ 'ಅಭಿವೃದ್ಧಿ' ಚಟುವಟಿಕೆಗಳಿಂದಾಗಿ ಇಂತಹ ನೈಸರ್ಗಿಕ ಅಪಾಯಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ವರುಣನ ಅಬ್ಬರ: ಸಾವಿನ ಸಂಖ್ಯೆ 52ಕ್ಕೆ ಏರಿಕೆ; ಉತ್ತರ ಪ್ರದೇಶ, ಬಂಗಾಳ, ಸಿಕ್ಕಿಂನಲ್ಲೂ ಮಳೆಯ ಆರ್ಭಟ
ಈ ಬಗ್ಗೆ ನೀರು ಮತ್ತು ಜಲವಿದ್ಯುತ್-ಸಂಬಂಧಿತ ವಿಷಯಗಳ ಪರಿಣಿತೆ ಕವಿತಾ ಉಪಾಧ್ಯಾಯ ಅವರು ಮಾತನಾಡಿದ್ದು, 'ಕಳಪೆ ಮತ್ತು ದೂರದೃಷ್ಟಿ ರಹಿತ ಕಾಮಗಾರಿಗಳಿಂದಾಗಿ ಈಗಾಗಲೇ ಹಿಮಾಲಯಗಳು ದುರ್ಬಲವಾಗಿವೆ. ಯೋಜನೆಗಳಿಗಾಗಿ ಕಾಂಕ್ರೀಟ್ ಸುರಿಯುವುದು ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನೈನಿತಾಲ್ ಜಿಲ್ಲೆಯ ಸುಖಾತಲ್ ಮತ್ತು ಸತ್ತಲ್ ಪ್ರದೇಶಗಳಿಗೆ ಸೌಂದರ್ಯೀಕರಣ ಮತ್ತು ಪುನರ್ನಿರ್ಮಾಣ ಯೋಜನೆಗಳನ್ನು ಅನುಮೋದಿಸಲಾಗಿದೆ. ಇತ್ತೀಚಿನ ವಿಪರೀತ ಮಳೆಯಂತಹ ಘಟನೆಯು ಸುಖತಲ್ ಸರೋವರ ಉಕ್ಕಿ ಹರಿಯಲು ಕಾರಣವಾಗಬಹುದು, ಇದು ಅಂತಿಮವಾಗಿ ನೈನಿತಾಲ್ ಪಟ್ಟಣದಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.
'ಹಿಮಾಲಯ ಪ್ರದೇಶದ ಬಗ್ಗೆ ಅರಿವಿಲ್ಲದ ನೀತಿ ನಿರೂಪಕರು ಅಭಿವೃದ್ಧಿ ಯೋಜನೆಗಳನ್ನು ಮಾಡಿದರೆ ಹಾನಿ ಹೆಚ್ಚಾಗುತ್ತದೆ. ಉತ್ತರಾಖಂಡದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, 2015 ರಿಂದೀಚೆಗೆ ಮಳೆ, ಮೋಡ ಬಿರುಸುಗಳು ಮತ್ತು ಭೂಕುಸಿತಗಳು ಸೇರಿದಂತೆ 10,000 ಕ್ಕೂ ಹೆಚ್ಚು ತೀವ್ರ ಹವಾಮಾನ ಘಟನೆಗಳು ಉತ್ತರಾಖಂಡದಲ್ಲಿ ಸಂಭವಿಸಿವೆ, ಈ ವರ್ಷದ ಜೂನ್ ವರೆಗೆ ಒಟ್ಟು 553 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 17-19ರ ಅವಧಿಯಲ್ಲಿ ರಾಜ್ಯದಲ್ಲಿ ದಾಖಲೆಯ ಮಳೆಯಾಗಿದೆ. ನೈನಿತಾಲ್ ಅತಿ ಹೆಚ್ಚು ಹಾನಿಗೊಳಗಾಗಿದ್ದು, 410 ಮಿಮೀ ಮಳೆಯಾಗಿದ್ದು, 28 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಡೆಹ್ರಾಡೂನ್ ಮೂಲದ ಪರಿಸರ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಉಪ ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ಸಿಂಗ್, "ಹವಾಮಾನ ಬದಲಾವಣೆಯು ಒಂದು ಮಹತ್ವದ ಅಂಶವಾಗಿದೆ ಮತ್ತು ಇಂತಹ ಘಟನೆಗಳು ಭವಿಷ್ಯದಲ್ಲಿ ಹೆಚ್ಚಾಗಲಿವೆ" ಎಂದು ಹೇಳಿದರು.