ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಸದೃಢ ಜೊತೆಗಾರ: ಪ್ರಧಾನಿ ಮೋದಿ

ಭಾರತದ 100 ಕೋಟಿ ಲಸಿಕೆ ಡೋಸ್ ಮೈಲಿಗಲ್ಲು ಬಗ್ಗೆ ಜಾಗತಿಕ ನಾಯಕರ ಅಭಿನಂದನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ದೃಢವಾದ ಪಾಲುದಾರನಾಗಿದೆ ಎಂದು ಹೇಳಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಭಾರತದ 100 ಕೋಟಿ ಲಸಿಕೆ ಡೋಸ್ ಮೈಲಿಗಲ್ಲು ಬಗ್ಗೆ ಜಾಗತಿಕ ನಾಯಕರ ಅಭಿನಂದನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ದೃಢವಾದ ಪಾಲುದಾರನಾಗಿದೆ ಎಂದು ಹೇಳಿದ್ದಾರೆ. 

ಭಾರತದ ಈ ಹೊಸ ಮೈಲಿಗಲ್ಲಿಗೆ ವಿವಿಧ ದೇಶಗಳ ನಾಯಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸ್ಸನ್ ಟ್ವೀಟ್ ಮಾಡಿ " 1 ಬಿಲಿಯನ್ ಡೋಸ್ ಗಳಷ್ಟು ಕೋವಿಡ್-19 ಲಸಿಕೆ ನೀಡಿದ್ದಕ್ಕಾಗಿ ನನ್ನ ಸ್ನೇಹಿತ ನರೇಂದ್ರ ಮೋದಿ ಹಾಗೂ ಆತನ ಸರ್ಕಾರಕ್ಕೆ ಅಭಿನಂದನೆಗಳು" ಎಂದು ತಿಳಿಸಿದ್ದಾರೆ. 

"ಭಾರತ ಹಾಗೂ ಆಸ್ಟ್ರೇಲಿಯಾ ಕ್ವಾಡ್ ನ ಭಾಗವಾಗಿದ್ದು, ಇಂಡೋ-ಪೆಸಿಫಿಕ್ ನಾದ್ಯಂತ ಲಸಿಕೆ ಲಭ್ಯತೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದವು" ಎಂದು ಮಾರಿಸ್ಸನ್ ಉಲ್ಲೇಖಿಸಿದ್ದಾರೆ. 

ಮಾರಿಸ್ಸನ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, "ಶತಕೋಟಿ ಲಸಿಕೆಯ ಭಾರತದ ಮೈಲಿಗಲಿಗ್ಗೆ ಅಭಿನಂದನೆ ಸಲ್ಲಿಸಿದ ನನ್ನ ಸ್ನೇಹಿತ ಸ್ಕಾಟ್ ಮಾರಿಸ್ಸನ್ ಗೆ ಧನ್ಯವಾದಗಳು ಅಂತೆಯೇ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ನಿಮಗೂ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ. 

ಮಾರಿಷಸ್ ನ ಪ್ರಧಾನಿ ಪ್ರವೀಂದ್ ಜಗ್ನೌಥ್ ಅವರೂ ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದೆಡೆಗಿನ ಶ್ರಮದಲ್ಲಿ ಭಾರತದ ನೇತೃತ್ವವನ್ನು ತಮ್ಮ ದೇಶ ಶ್ಲಾಘಿಸುತ್ತದೆ" ಎಂದಿದ್ದಾರೆ. 

ಅಷ್ಟೇ ಅಲ್ಲದೇ ಮಾರಿಷಸ್ ನ್ನು ಲಸಿಕೆ ಮೈತ್ರಿಯಲ್ಲಿ ಮೊದಲ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು ಎಂದು ಮಾರಿಷಸ್ ಪ್ರಧಾನಿ ತಿಳಿಸಿದ್ದಾರೆ. ಇದಕ್ಕೆ ಧನ್ಯವಾದದ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಎರಡೂ ದೇಶಗಳು ನಮ್ಮ ಲಸಿಕೆ ಯೋಜನೆಗಳಲ್ಲಿ ತ್ವರಿತ ಹೆಜ್ಜೆಗಳನ್ನಿಡುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು, ಡೊಮಿನಿಕನ್ ಪ್ರಧಾನಿ, ಸೇಂಟ್ ಕಿಟ್ಸ್ ಮತ್ತು ನೆವಿಸ್ ತಿಮೋತಿ ಹ್ಯಾರಿಸ್ ನ ಪ್ರಧಾನಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಮೈಕ್ರೋಸಾಫ್ಟ್ ಕಾರ್ಪ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಸಹ ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ದೇಶದ ಆವಿಷ್ಕಾರ, ಉತ್ಪಾದನೆ ಸಾಮರ್ಥ್ಯ ಹಾಗೂ ಕೋವಿನ್ ನಿಂದ ಬೆಂಬಲಿತ ಲಕ್ಷಾಂತರ ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ.

ಇದಕ್ಕೆ ಮೋದಿ ಪ್ರತಿಕ್ರಿಯೆ ನೀಡಿದ್ದು 1 ಶತಕೋಟಿ ಲಸಿಕೆ ಮೈಲಿಗಲ್ಲು ಸಾಧಿಸುವಲ್ಲಿ ಭಾರತೀಯ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com