ಡೆಲ್ಟಾಗಿಂತಲೂ ವೇಗವಾಗಿ ಹರಡುವ ಕೊರೋನಾದ ಹೊಸ ರೂಪಾಂತರಿ ಎವೈ.4.2 ಪತ್ತೆ: ಭಾರತದಲ್ಲಿ ಹೈ ಅಲರ್ಟ್
ಸಾರ್ಸ್ ಸಿಒವಿ2 ನ ಡೆಲ್ಟಾ ರೂಪಾಂತರಿಯಲ್ಲಿ ಹೊಸ ತಳಿ ಬ್ರಿಟನ್ ಹಾಗೂ ಅಮೆರಿಕದಲ್ಲಿ ಪತ್ತೆಯಾಗಿದ್ದು, ಭಾರತದ ಕೋವಿಡ್-19 ಜಿನೋಮಿಕ್ ಕಣ್ಗಾವಲು ಯೋಜನೆ ಹೈ ಅಲರ್ಟ್ ನಲ್ಲಿದೆ.
Published: 24th October 2021 10:39 AM | Last Updated: 24th October 2021 10:39 AM | A+A A-

ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ (ಸಂಗ್ರಹ ಚಿತ್ರ)
ನವದೆಹಲಿ: ಸಾರ್ಸ್ ಸಿಒವಿ2 ನ ಡೆಲ್ಟಾ ರೂಪಾಂತರಿಯಲ್ಲಿ ಹೊಸ ತಳಿ ಬ್ರಿಟನ್ ಹಾಗೂ ಅಮೆರಿಕದಲ್ಲಿ ಪತ್ತೆಯಾಗಿದ್ದು, ಭಾರತದ ಕೋವಿಡ್-19 ಜಿನೋಮಿಕ್ ಕಣ್ಗಾವಲು ಯೋಜನೆ ಹೈ ಅಲರ್ಟ್ ನಲ್ಲಿದೆ.
ಹೊಸ ರೂಪಾಂತರಿ ವೈರಾಣು ಡೆಲ್ಟಾ ರೂಪಾಂತರಿಗಿಂತಲೂ ವೇಗವಾಗಿ ಹರಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಹೊಸ ರೂಪಾಂತರಿಯನ್ನು ಎ.ವೈ 4.2 ಎಂದು ಗುರುತಿಸಲಾಗಿದ್ದು, ಬ್ರಿಟನ್ ನಲ್ಲಿ ಈ ಹೊಸ ತಳಿಯನ್ನು "ವೇರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್" ಎಂದು ಘೋಷಿಸಲಾಗಿದೆ. ಈ ವರೆಗೂ ಭಾರತದಲ್ಲಿ ಈ ರೂಪಾಂತರಿ ತಳಿಯ ಸೋಂಕು ಪತ್ತೆಯಾಗಿಲ್ಲ. 68,000 ಸ್ಯಾಂಪಲ್ ಗಳನ್ನು ಕೋವಿಡ್-19 ಸೋಂಕಿತರಿಂದ ಸಂಗ್ರಹಿಸಲಾಗಿದ್ದು, ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಟ್ಟಿದೆ.
ಎವೈ.4.2 ತಳಿ ಪತ್ತೆಯಾಗಿರುವುದರಿಂದ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗುವುದು ಈ ಮೂಲಕ ಎವೈ 4.2 ನಿಂದ ಬರುವ ಸೋಂಕುಗಳ ಪತ್ತೆ ಸಾಧ್ಯತೆಯನ್ನು ತಪ್ಪಿಸುವುದಿಲ್ಲ ಇದರಿಂದ ಸೋಂಕಿತರಾದವರನ್ನು ತ್ವರಿತವಾಗಿ ಗುರುತಿಸಲಾಗುತ್ತದೆ ಎಂದು ಐಎನ್ ಎಸ್ಎ ಸಿಒಜಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವಾರ ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿ ಡೆಲ್ಟಾ ರೂಪಾಂತರಿಯ ಸಬ್ ಟೈಪ್ ಕೊರೋನಾ ವೈರಾಣು ದೇಶದಲ್ಲಿ ಹರಡುತ್ತಿರುವುದನ್ನು ಘೋಷಿಸಿತ್ತು. ಅಮೆರಿಕಾದ ಬಳಿಕ ಬ್ರಿಟನ್ ಜಾಗತಿಕವಾಗಿ ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿರುವ ರಾಷ್ಟ್ರವಾಗಿದೆ. ಸೆ.27 ರಂದು ಪ್ರಾರಂಭವಾದ ವಾರದಲ್ಲಿ ಸಾರ್ಸ್ ಸಿಒವಿ2 ನ ಎಲ್ಲಾ ಜೆನೆಟಿಕ್ ಸೀಕ್ವೆನ್ಸ್ ಗಳ ಪೈಕಿ ಹೊಸದಾಗಿ ಪತ್ತೆಯಾಗಿರುವ ವೈರಾಣು ತಳಿ ಶೇ.6 ರಷ್ಟು ಇದೆ.
ಹೊಸ ರೂಪಾಂತರಿ ತಳಿ ಏರುಗತಿಯಲ್ಲಿದ್ದು ಡೆಲ್ಟಾ ರೂಪಾಂತರಿಗಿಂತಲೂ ಶೇ.10 ರಷ್ಟು ವೇಗವಾಗಿ ಇದು ಹರಡಬಲ್ಲದು ಎನ್ನಲಾಗುತ್ತಿದ್ದು ಅಮೆರಿಕದಲ್ಲೂ ಈ ತಳಿಯ ಸೋಂಕು ವರದಿಯಾಗಿದೆ.