100 ಕೋಟಿ ಡೋಸ್ ಲಸಿಕೆ ನೀಡಿಕೆಯೇ ಸುಳ್ಳು.. ಲೆಕ್ಕ ಹಾಕಿದ್ದು ಯಾರು?: ಸಂಜಯ್ ರಾವತ್ ಪ್ರಶ್ನೆ
ದೇಶದಲ್ಲಿ ಕೋವಿಡ್ -19 ವಿರುದ್ಧ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂಬ ಮೋದಿ ಸರ್ಕಾರದ ಹೇಳಿಕೆಯೇ ಸುಳ್ಳು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
Published: 24th October 2021 02:09 PM | Last Updated: 24th October 2021 02:09 PM | A+A A-

ಸಂಜಯ್ ರಾವತ್
ಮುಂಬೈ: ದೇಶದಲ್ಲಿ ಕೋವಿಡ್ -19 ವಿರುದ್ಧ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂಬ ಮೋದಿ ಸರ್ಕಾರದ ಹೇಳಿಕೆಯೇ ಸುಳ್ಳು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಶನಿವಾರ ನಡೆದ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾವತ್, 100 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ ಎಂಬುದೇ ಸುಳ್ಳು. ಇದಕ್ಕೆ ತಾವು ಪುರಾವೆ ನೀಡುವುದಾಗಿ ಹೇಳಿದರು.
ಈ ವರೆಗೂ ದೇಶದಲ್ಲಿ ಕೇವಲ 23 ಕೋಟಿ ಜನರಿಗೆ ಮಾತ್ರ ಲಸಿಕೆ ಆಗಿದೆ ಎಂಬ ಮಾಹಿತಿ ಇದೆ. ನರೇಂದ್ರ ಮೋದಿ ಅವರು ಹೇಳುತ್ತಿರುವ ಅಂಕಿ ಅಂಶಗಳು ನಿಜವಾಗಿದ್ದರೆ ಈ ಸಂಭ್ರಮಾಚರಣೆಯಲ್ಲಿ ನಾವು ಭಾಗಿಯಾಗುತ್ತೇವೆ. ಆದರೆ ನನಗೆ 100 ಕೋಟಿ ಲಸಿಕೆ ವಿತರಣೆ ಬಗ್ಗೆ ಸಂಶಯವಿದೆ. ದೇಶದಲ್ಲಿ ಕೇವಲ 33 ಕೋಟಿ ಜನರಿಗೆ ಮಾತ್ರ ಲಸಿಕೆ ಆಗಿದೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಕಳೆದ ಹದಿನೈದು ದಿನಗಳಲ್ಲಿ, 20 ಹಿಂದೂಗಳು ಮತ್ತು ಸಿಖ್ಖರನ್ನು ಕೊಲ್ಲಲಾಗಿದೆ, 17 ರಿಂದ 18 ಸೈನಿಕರು ಹುತಾತ್ಮರಾಗಿದ್ದಾರೆ, ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ಚೀನಾ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ, ಆದರೆ ನಾವು 100 ಕೋಟಿ ವ್ಯಾಕ್ಸಿನೇಷನ್ ಆಚರಿಸುತ್ತಿದ್ದೇವೆ, ಇದು ನಿಜವಲ್ಲ ಎಂದು ಶಿವಸೇನೆ ಮುಖ್ಯಸ್ಥರು ಹೇಳಿದ್ದಾರೆ.