ಮುಂಬೈಯ ಹೈಪ್ರೊಫೈಲ್ ಡ್ರಗ್ ಕೇಸು: ಎನ್ ಸಿಬಿಯ ಸಾಕ್ಷಿ ಕಿರಣ್ ಗೋಸಾವಿ ಪುಣೆಯಲ್ಲಿ ಬಂಧನ

ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಮುಂಬೈ ಕ್ರೂಸ್ ಹಡಗಿನಲ್ಲಿ ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ)ದ ಸಾಕ್ಷಿ ಕಿರಣ್ ಗೋಸಾವಿಯನ್ನು ಗುರುವಾರ ಪುಣೆಯಲ್ಲಿ ಬಂಧಿಸಲಾಗಿದೆ. 
ಕಿರಣ್ ಗೋಸಾವಿ
ಕಿರಣ್ ಗೋಸಾವಿ

ಪುಣೆ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಮುಂಬೈ ಕ್ರೂಸ್ ಹಡಗಿನಲ್ಲಿ ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ)ದ ಸಾಕ್ಷಿ ಕಿರಣ್ ಗೋಸಾವಿಯನ್ನು ಗುರುವಾರ ಪುಣೆಯಲ್ಲಿ ಬಂಧಿಸಲಾಗಿದೆ. 

ಕಿರಣ್ ಗೋಸಾವಿಯನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತ ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೊದಲ್ಲಿ ಪೊಲೀಸ್ ಠಾಣೆಗೆ ಬಂದು ಶರಣಾಗುವುದಾಗಿ ಅಜ್ಞಾನ ಸ್ಥಳದಿಂದ ಮೂರು ದಿನಗಳ ಹಿಂದೆ ಹೇಳಿಕೆ ನೀಡಿದ್ದ ಗೋಸಾವಿಯನ್ನು ಇಂದು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

2018ರ ಮೇ 19ರಂದು ಕಿರಣ್ ಗೋಸಾವಿ ವಿರುದ್ಧ ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದ ಆರೋಪ ಈತನ ಮೇಲಿತ್ತು. 

ಆದರೆ ವ್ಯಕ್ತಿಗೆ ಉದ್ಯೋಗ ಕೊಡಿಸುವುದಾಗಲಿ, ಹಣ ವಾಪಸ್ ನೀಡುವುದಾಗಲಿ ಮಾಡಿರಲಿಲ್ಲ. ಹೀಗಾಗಿ ಕಿರಣ್ ಗೋಸಾವಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 419, 420ರಡಿಯಲ್ಲಿ ಇಂಟೆಲೆಕ್ಚುವಲ್ ಟೆಕ್ನಾಲಜಿ ಆಕ್ಟ್ ನಡಿ ಕೇಸು ದಾಖಲಾಗಿತ್ತು.

ಆರೋಪಿ ಗೋಸಾವಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಗೋಸಾವಿ ಮೇಲೆ ಆ ಕೇಸು ವಿಚಾರಣೆ ಇನ್ನೂ ಬಾಕಿಯಿದೆ. 

ಇದಲ್ಲದೆ, ಕಳೆದ ಅಕ್ಟೋಬರ್ 18ರಂದು ಪಲ್ಗರ್ ನ ಕೆಲ್ವ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸನ್ನು ಕೂಡ ದಾಖಲಿಸಲಾಗಿದೆ. ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿ ವಂಚಿಸಿದ ಆರೋಪ ಕೂಡ ಇದೆ. 
ಕಿರಣ್ ಗೋಸಾವಿಯ ಖಾಸಗಿ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಮುಂಬೈ ಡ್ರಗ್ಸ್ ಕೇಸಿನ ಪ್ರಮುಖ ಸಾಕ್ಷಿಯಾಗಿದ್ದು, ಎನ್ ಸಿಬಿ ಅಧಿಕಾರಿಗಳು ಹಡಗಿನಲ್ಲಿ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ನಂತರ ಅವರ ಬಿಡುಗಡೆ ಸಂಬಂಧ ಮಾತುಕತೆಯ ಹಂತದಲ್ಲಿ ವ್ಯಕ್ತಿಯೊಬ್ಬರಿಂದ ತನಗೆ 50 ಲಕ್ಷ ರೂಪಾಯಿ ಲಂಚ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com