ಗೋವಾಗೆ ಮಹದಾಯಿ ಬಗ್ಗೆ ಕಾಳಜಿಯಿದ್ದು, ನೀರನ್ನು ತಿರುಗಿಸುವುದಕ್ಕೆ ವಿರೋಧವಿದೆ: ಸಿಎಂ ಪ್ರಮೋದ್ ಸಾವಂತ್

ಮಹದಾಯಿ ನದಿ ನೀರನ್ನು ಗೋವಾದಿಂದ ತಿರುಗಿಸುವ ಮೂಲಕ ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಎಲ್ಲಾ ಅನುಮತಿಗಳನ್ನು ಪಡೆಯಲು ಕರ್ನಾಟಕ ಸರ್ಕಾರಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹೇಳಿದರು.
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್

ಬೆಳಗಾವಿ: ಮಹದಾಯಿ ನದಿ ನೀರನ್ನು ಗೋವಾದಿಂದ ತಿರುಗಿಸುವ ಮೂಲಕ ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಎಲ್ಲಾ ಅನುಮತಿಗಳನ್ನು ಪಡೆಯಲು ಕರ್ನಾಟಕ ಸರ್ಕಾರಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹೇಳಿದರು.

ಟಿಎನ್‌ಐಇ ಜೊತೆ ಮಾತನಾಡಿದ ಸಂದರ್ಭದಲ್ಲಿ, ಮಹಾದಾಯಿ ಯೋಜನೆಯನ್ನು ಹೆಚ್ಚು ವಿವರಿಸಲು ಇಷ್ಟಪಡುವುದಿಲ್ಲ ಎಂದು ಸಾವಂತ್ ಹೇಳಿದರು. ಅದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದ ಮುಂದೆ ಬಾಕಿ ಇರುವುದರಿಂದ, ಅದರ ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಮಹದಾಯಿ ಜಲ ವಿವಾದ ನ್ಯಾಯಮಂಡಳಿ(ಎಂಡಬ್ಲ್ಯುಡಿಟಿ) ಆಗಸ್ಟ್ 2018ರಲ್ಲಿ ಮಹದಾಯಿ ಯೋಜನೆಯಡಿ ಕರ್ನಾಟಕಕ್ಕೆ ತನ್ನ ಪಾಲಿನ ನೀರನ್ನು ಹಂಚಿಕೆ ಮಾಡಿದರೂ ಸಹ, ಗೋವಾ ಸರ್ಕಾರವು ಮಹಾದಾಯಿ ನೀರನ್ನು ತಿರುಗಿಸುವುದಕ್ಕೆ ವಿರೋಧಿಸುತ್ತಿದ್ದು ಇದು ಗೋವಾದ ಜೀವನಾಡಿಯಾಗಿದೆ ಎಂದು ವಾದಿಸುತ್ತಿದೆ. 

ಕರ್ನಾಟಕ-ಗೋವಾ ಗಡಿಯಲ್ಲಿರುವ ಕಣಕುಂಬಿಯಲ್ಲಿ ಮಹದಾಯಿ ಯೋಜನೆಯ ಒಂದು ಭಾಗವಾದ ಕಳಸಾ-ಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರವು ರಾಜ್ಯಕ್ಕೆ ಪರಿಸರ ಮತ್ತು ವನ್ಯಜೀವಿ ಅನುಮತಿಗಳನ್ನು ನೀಡಿದ ನಂತರ ಕರ್ನಾಟಕ ಸರ್ಕಾರವು ಮಹದಾಯಿ ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com