ಉತ್ತರಪ್ರದೇಶ ಚುನಾವಣೆ: ಸಹ ಪ್ರಭಾರಿ ಆಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇಮಕ
ಉತ್ತರ ಪ್ರದೇಶ ರಾಜ್ಯದಲ್ಲಿ 2022 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಬಿಜೆಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಇದರಂತೆ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬಿಜೆಪಿ ಪ್ರಭಾರಿಗಳನ್ನು ಹಾಗೂ ಸಹ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಮಾಡಿದೆ.
Published: 08th September 2021 01:51 PM | Last Updated: 08th September 2021 01:51 PM | A+A A-

ಶೋಭಾ ಕರಂದ್ಲಾಜೆ
ನವದೆಹಲಿ: ಉತ್ತರ ಪ್ರದೇಶ ರಾಜ್ಯದಲ್ಲಿ 2022 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಬಿಜೆಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಇದರಂತೆ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬಿಜೆಪಿ ಪ್ರಭಾರಿಗಳನ್ನು ಹಾಗೂ ಸಹ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಮಾಡಿದೆ.
ಧರ್ಮೇಂದ್ರ ಪ್ರಧಾನ ಅವರನ್ನು ಚುನಾವಣೆ ಪ್ರಭಾರಿ ಆಗಿ ನೇಮಕ ಮಾಡಿದ್ದು, ಶೋಭಾ ಕರಂದ್ಲಾಜೆ ಸೇರಿದಂತೆ 7 ಮಂದಿಯನ್ನು ಸಹ ಪ್ರಭಾರಿಗಳಾಗಿ ನೇಮಕ ಮಾಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ.
UP विधानसभा चुनाव के लिए मुझे सह प्रभारी का दायित्व देने के लिए प्रधानमंत्री श्री @narendramodi, राष्ट्रीय अध्यक्ष श्री @JPNadda, गृहमंत्री श्री @AmitShah, संगठन महामंत्री श्री @blsanthosh जी का हार्दिक आभार।
यूपी में फिर एक बार कमल खिलाने के लिए में अपना संपूर्ण योगदान दूंगी। pic.twitter.com/mZ2Sgm9dU9— Shobha Karandlaje (@ShobhaBJP) September 8, 2021
ಕೇಂದ್ರ ಕೃಷಿ ಸಹಾಯಕ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಅವರನ್ನು ಚುನಾವಣೆ ಸಹ ಪ್ರಭಾರಿ ಆಗಿ ನೇಮಕ ಮಾಡಿದ್ದು, ಹೆಚ್ಚಿನ ಜವಾಬ್ದಾರಿ ವಹಿಸಿದಂತೆ ಆಗಿದೆ. ಇತ್ತೀಚೆಗಷ್ಟೇ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಸಂಪುಟ ಸೇರ್ಪಡೆಯಾಗಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 403 ಸ್ಥಾನಗಳ ಪೈಕಿ 315 ಸ್ಥಾನಗಳನ್ನು ಗೆದ್ದು ದಾಖಲೆ ಮೂಲಕ ಅಧಿಕಾರ ಹಿಡಿದಿತ್ತು.
ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜ ಪಾರ್ಟಿ ಬಿಜೆಪಿಯನ್ನು ನಿಯಂತ್ರಿಸಲಿದೆ ಎನ್ನುವ ಲೆಕ್ಕಾಚಾರ 2017ರಲ್ಲಿ ತಲೆಕೆಳಗಾಗಿತ್ತು. ಇದೀಗ ಮತ್ತೆ ಇಂತಹದೇ ಫಲಿತಾಂಶವನ್ನು ಪಡೆಯುವ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ.
ಈ ನಡುವೆ ಉತ್ತರಾಖಂಡ್ ರಾಜ್ಯದ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.