ಎನ್ ಸಿಪಿ ಗಾಂಧಿ-ನೆಹರು ಸಿದ್ಧಾಂತಕ್ಕೆ ಬದ್ಧ, ಉದ್ಧವ್ ಠಾಕ್ರೆ ಮೃದು ಸ್ವಭಾವದ ವ್ಯಕ್ತಿ: ಶರದ್ ಪವಾರ್

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು "ಮೃದು ಸ್ವಭಾವದ ವ್ಯಕ್ತಿ" ಮತ್ತು ಜವಾಬ್ದಾರಿಯನ್ನು ಎದುರಿಸುವಾಗ ಹಿಂದೆ ಸರಿಯುವುದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್...
ಶರದ್ ಪವಾರ್ - ಉದ್ಧವ್ ಠಾಕ್ರೆ
ಶರದ್ ಪವಾರ್ - ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು "ಮೃದು ಸ್ವಭಾವದ ವ್ಯಕ್ತಿ" ಮತ್ತು ಜವಾಬ್ದಾರಿಯನ್ನು ಎದುರಿಸುವಾಗ ಹಿಂದೆ ಸರಿಯುವುದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಶುಕ್ರವಾರ ಶಿವಸೇನಾ ಮುಖ್ಯಸ್ಥನನ್ನು ಹಾಡಿ ಹೊಗಳಿದ್ದಾರೆ.

ಎನ್ ಸಿಪಿ ಕಾಂಗ್ರೆಸ್‌ನೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಆದರೆ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ವಿಚಾರಧಾರೆಗಳ ಮೇಲೆ ಪ್ರತಿಜ್ಞೆ ಮಾಡುತ್ತದೆ ಎಂದು ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ಹೇಳಿದ್ದಾರೆ.

ಮರಾಠಿ ಸುದ್ದಿ-ಪೋರ್ಟಲ್ `ಮುಂಬೈ ತಕ್ 'ಜೊತೆ ಮಾತನಾಡಿದ ಪವಾರ್, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಲು ಎನ್ ಸಿಪಿ, ಕಾಂಗ್ರೆಸ್ ಶಿವಸೇನೆ ಕೈಜೋಡಿಸಬಹುದೆಂದು ಅಂತಿಮವಾಗಿ ಸೋನಿಯಾ ಗಾಂಧಿ ನಿರ್ಧರಿಸಿದರು ಎಂದು ತಿಳಿಸಿದ್ದಾರೆ.

"ನಾನು ಉದ್ಧವ್ ಠಾಕ್ರೆ ಅವರನ್ನು ಬಾಲ್ಯದಿಂದಲೂ ನೋಡಿದ್ದೇನೆ. ಅವರು ಶಿವಸೇನೆಯ ವ್ಯವಹಾರಗಳ ಮೇಲ್ವಿಚಾರಣೆಯನ್ನು ಆರಂಭಿಸಿದಾಗ, ಅವರು ತಮ್ಮ ತಂದೆಯ (ಬಾಲ್ ಠಾಕ್ರೆ) ಮಾರ್ಗಸೂಚಿಗಳನ್ನು ಅನುಸರಿಸಿದರು. ಆದರೆ ಪಕ್ಷದ ಜವಾಬ್ದಾರಿ ಅವರ ಮೇಲೆ ಬಿದ್ದಾಗ, ಅವರ ಸಾಮರ್ಥ್ಯದ ಬಗ್ಗೆ ಸ್ವಲ್ಪ ಸಂಶಯವಿತ್ತು," ಎಂದು ಪವಾರ್ ಹೇಳಿದರು.

ಆದರೆ ಉದ್ಧವ್ ಠಾಕ್ರೆ ನಾಯಕತ್ವದಲ್ಲಿ ಶಿವಸೇನೆ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿತು. ಅದರ ನಂತರ ಆತ ಮೃದು ಸ್ವಭಾವದ ವ್ಯಕ್ತಿಯಾಗಿದ್ದರೂ ಸಾಮರ್ಥ್ಯ ಹೊಂದಿದ್ದಾನೆ ಮತ್ತು ಜವಾಬ್ದಾರಿಯನ್ನು ಹೊತ್ತುಕೊಳ್ಳಬಹುದು ಎಂಬುದು ಸ್ಪಷ್ಟವಾಯಿತು" ಎಂದು ಎನ್‌ಸಿಪಿ ಮುಖ್ಯಸ್ಥರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com