ತಪ್ಪಿದ ಮಹಾ ದುರಂತ: ಪಾಕ್‌ನಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿ 6 ಭಯೋತ್ಪಾದಕರ ಬಂಧನ!
ಪಾಕಿಸ್ತಾನದ ನಿಯಂತ್ರಿತ ಉಗ್ರ ಸಂಘಟನೆಯ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
Published: 14th September 2021 11:05 PM | Last Updated: 15th September 2021 01:26 PM | A+A A-

ಶಂಕಿತ ಭಯೋತ್ಪಾದಕರು
ನವದೆಹಲಿ: ಪಾಕಿಸ್ತಾನದ ನಿಯಂತ್ರಿತ ಉಗ್ರ ಸಂಘಟನೆಯ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಆರು ಮಂದಿ ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿದ್ದು ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಮೋದ್ ಕುಷ್ವಾಹಾ ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಏಜೆಂಟ್ಗಳೊಂದಿಗೆ ರಕ್ಷಣಾ ರಹಸ್ಯ ಹಂಚಿಕೊಂಡ ಡಿಆರ್ಡಿಒದ 4 ಉದ್ಯೋಗಿಗಳ ಬಂಧನ
ದೆಹಲಿ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಹಬ್ಬದ ದಿನಗಳಲ್ಲಿ ಸ್ಫೋಟಗಳನ್ನು ನಡೆಸಲು ಹಾಗೂ ದೇಶದ ಪ್ರಮುಖರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಈ ಭಯೋತ್ಪಾದಕರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಆರ್ಥಿಕ ನೆರವು ನೀಡುತ್ತಿರುವುದಾಗಿ ವಿಶೇಷ ತನಿಖಾದಳ ಪೊಲೀಸ್ ಅಧಿಕಾರಿ ನೀರಜ್ ಠಾಕೂರ್ ತಿಳಿಸಿದ್ದಾರೆ.
ಬಂಧಿತರನ್ನು ಒಸಾಮಾ ಸಾಮಿ, ಮೊಹಮ್ಮದ್ ಅಬು ಬಕರ್, ಜನ್ ಮೊಹಮ್ಮದ್ ಶೇಖ್, ಜೀಶಾನ್ ಖಮಾರ್ ಎಂದು ತಿಳಿದುಬಂದಿದೆ. ಇನ್ನು ಜೀಶನ್ ಖಮಾರ್ ಮತ್ತು ಮೊಹಮ್ಮದ್ ಅಮೀರ್ ಜಾವೇದ್ ಒಸಾಮಾ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Delhi Police Special Cell has busted a Pak-organised terror module, arrested 6 people including two terrorists who received training in Pakistan pic.twitter.com/ShadqybnKU
— ANI (@ANI) September 14, 2021