ಕೋವಿಡ್ ವೈರಸ್ ನ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ: ಇನ್ಸಾಕ್ ಮಹತ್ವದ ಮಾಹಿತಿ

ಜಗತ್ತಿನ 225ಕ್ಕೂ ಅಧಿಕ ದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕೋವಿಡ್ ವೈರಸ್ ನ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಜೀನೋಮ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ ಇನ್ಸಾಕ್ (INSACOG) ಮಹತ್ವದ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಗತ್ತಿನ 225ಕ್ಕೂ ಅಧಿಕ ದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕೋವಿಡ್ ವೈರಸ್ ನ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಜೀನೋಮ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ ಇನ್ಸಾಕ್ (INSACOG) ಮಹತ್ವದ ಮಾಹಿತಿ ನೀಡಿದೆ.

ಡೆಲ್ಟಾ ರೂಪಾಂತರ ಮತ್ತು ಅದರ ಉಪ-ವಂಶಾವಳಿಗಳು ಎಂದು ಹೇಳಲಾಗುತ್ತಿರುವ ಈ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ. ಈಗಲೂ ಭಾರತದಲ್ಲಿ ಡೆಲ್ಟಾ ರೂಪಾಂತರ ಕಾಳಜಿಯ ಮುಖ್ಯ ರೂಪಾಂತರವಾಗಿ ಉಳಿದಿದೆ ಎಂದು ಇನ್ಸಾಕ್ ಹೇಳಿದೆ.

ಇದೇ ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಧನಾತ್ಮಕ ಮಾದರಿಗಳ ಅನುಕ್ರಮದ ಕುರಿತು ಅಸ್ತಿತ್ವದಲ್ಲಿರುವ ಶಿಫಾರಸುಗಳನ್ನು ಹೆಚ್ಚು ಬಲವಾಗಿ ಜಾರಿಗೆ ತರಲು ಇನ್ಸಾಕ್ ಒಕ್ಕೂಟವು ಕರೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆಗಸ್ಟ್ 30 ರಂದು B.1.621 (B.1.621.1 ಸೇರಿದಂತೆ) ಅನ್ನು ಕಾಳಜಿಯ ರೂಪಾಂತರಗಳ (VOI) ಪಟ್ಟಿಗೆ ಸೇರಿಸಿತ್ತು. ಅದಕ್ಕೆ "ಮು (MU)" ಎಂದು ನಾಮಕರಣ ಮಾಡಿತ್ತು. ಇದೀದ C.1.2 ಅನ್ನು ಕೂಡ ಹೊಸ VOI.C.1.2 ಎಂದು ಸೇರಿಸಿದೆ, ಇದು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿದ್ದ C.1 ರೂಪಾಂತರದ ಉಪ-ವಂಶವಾಗಿದೆ. ಆದರೆ ಜಾಗತಿಕವಾಗಿ ಹರಡಲಿಲ್ಲ ಎಂದು INSACOG ಹೇಳಿದೆ.

"ಮು, ಅಥವಾ ಸಿ .1.2 ಭಾರತದಲ್ಲಿ ಇದುವರೆಗೆ ಕಂಡುಬಂದಿಲ್ಲ. ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಧನಾತ್ಮಕ ಮಾದರಿಗಳ ಅನುಕ್ರಮದ ಕುರಿತು ಅಸ್ತಿತ್ವದಲ್ಲಿರುವ ಶಿಫಾರಸುಗಳನ್ನು ಹೆಚ್ಚು ಬಲವಾಗಿ ಜಾರಿಗೊಳಿಸಬಹುದು. ಈ ಸಮಯದಲ್ಲಿ ಹೆಚ್ಚಿನ ದತ್ತಾಂಶಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವು ಸಮರ್ಪಕವಾಗಿ ತೋರುತ್ತದೆ" ಎಂದು INSACOG ಅದರ ಸೆಪ್ಟೆಂಬರ್ 10ರ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ. 

ಅಲ್ಲದೆ "ಡೆಲ್ಟಾ ಮತ್ತು ಡೆಲ್ಟಾ ಉಪ-ವಂಶಾವಳಿಗಳು ಭಾರತದ ಮುಖ್ಯ VOC ಆಗಿ ಮುಂದುವರಿದಿದ್ದು, ಡೆಲ್ಟಾ ರೂಪಾಂತರವು ಹಲವಾರು ದೇಶಗಳಲ್ಲಿ ಸೋಂಕುಗಳಿಗೆ ಕಾರಣವಾಗಿದೆ. ಭಾರತದಲ್ಲಿ, ಇದು ಮಾರಕ ಎರಡನೇ ತರಂಗಕ್ಕೆ ಕಾರಣವಾಗಿತ್ತು ಎಂದು ಇನ್ಸಾಕ್ ಹೇಳಿದೆ. 

ಸಂಭಾವ್ಯ ರೋಗನಿರೋಧಕ ತಪ್ಪಿಸಿಕೊಳ್ಳುವ ಗುಣಗಳನ್ನು ಸೂಚಿಸುವ ಗುಣಲಕ್ಷಣಳನ್ನು ಮು ರೂಪಾಂತರ ಹೊಂದಿದೆ. ಬೀಟಾ ರೂಪಾಂತರದಂತೆಯೇ ಕನ್ವಲೆಸೆಂಟ್ ಮತ್ತು ಲಸಿಕೆ ಸೆರಾದ ತಟಸ್ಥಗೊಳಿಸುವಿಕೆಯ ಸಾಮರ್ಥ್ಯದಲ್ಲಿ ಇಳಿಕೆ ಕಂಡುಬರುತ್ತಿದೆ, ಆದರೆ ಇದನ್ನು ಹೆಚ್ಚಿನ ಅಧ್ಯಯನಗಳು ದೃಢಪಡಿಸಬೇಕಾಗಿದೆ ಎಂದೂ ಇನ್ಸಾಕ್ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಬುಲೆಟಿನ್ ಪ್ರಕಾರ, ಮು ರೂಪಾಂತರದ ಜಾಗತಿಕ ಹರಡುವಿಕೆಯು ಕಡಿಮೆಯಾಗಿದೆ. ಪ್ರಸ್ತುತ ಇದರ ಹರಡುವಿಕೆ ಶೇ. 0.1 ಕ್ಕಿಂತ ಕಡಿಮೆ ಇದ್ದರೂ, ಕೊಲಂಬಿಯಾ (ಶೇಕಡಾ 39) ಮತ್ತು ಈಕ್ವೆಡಾರ್ (13 ಪ್ರತಿಶತ) ದಲ್ಲಿ ಹರಡುವಿಕೆಯು ನಿರಂತರವಾಗಿ ಹೆಚ್ಚಾಗಿದೆ. ಇದು C.1.2 ರೂಪಾಂತರವು ಅಲ್ಪಾವಧಿಯಲ್ಲಿ ಅನೇಕ ರೂಪಾಂತರಗಳಿಗೆ ಒಳಗಾದಂತೆ ತೋರುತ್ತಿದೆ. ಎಲ್ಲಾ ಮೂರು ವಿಧಗಳ ರೂಪಾಂತರಗಳನ್ನು ಈ ಹಿಂದೆ ವರ್ಗಾವಣೆ ಮತ್ತು ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವಿರುವ ರೂಪಾಂತರಗಳು ಎಂದು ಪಟ್ಟಿ ಮಾಡಲಾಗಿತ್ತು.  ನಿಜವಾದ ಪ್ರಸರಣದ ಕ್ಲಿನಿಕಲ್ ಡೇಟಾ ಮೇನಲ್ಲಿ 0.2 ಶೇಕಡದಿಂದ ಜುಲೈನಲ್ಲಿ ಎರಡು ಶೇಕಡಾಕ್ಕೆ ಏರಿಕೆಯಾಗಿದೆ ಎಂದು INSACOG ಮಾಹಿತಿ ನೀಡಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com