ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ ಹೆದ್ದಾರಿಯಿಂದ ತಿಂಗಳಿಗೆ 1,000- 1,500 ಕೋಟಿ ಆದಾಯ: ನಿತಿನ್ ಗಡ್ಕರಿ

ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ 2023ರಿಂದ ಸಾರ್ವಜನಿಕ ಬಳಕೆಗೆ ಸಿದ್ಧಗೊಳ್ಳಲಿರುವ ಈ ಎಕ್ಸ್ ಪ್ರೆಸ್ ಹೈವೇ ಸರ್ಕಾರದ ಪಾಲಿಗೆ ಚಿನ್ನದ ಗಣಿ ಎಂದು ನಿತಿನ್ ಗಡ್ಕರಿ ಹೋಲಿಕೆ ಮಾಡಿದ್ದಾರೆ. 
ಕಾಮಗಾರಿ ಸಮೀಕ್ಷೆ ನಡೆಸುತ್ತಿರುವ ಗಡ್ಕರಿ
ಕಾಮಗಾರಿ ಸಮೀಕ್ಷೆ ನಡೆಸುತ್ತಿರುವ ಗಡ್ಕರಿ

ನವದೆಹಲಿ: ಕಾಮಗಾರಿ ಪೂರ್ಣಗೊಂಡ ನಂತರ ಮಹತ್ವಾಕಾಂಕ್ಷಿ ಯೋಜನೆಯಾದ ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ ಹೆದ್ದಾರಿಯಿಂದ ಸರ್ಕಾರದ ಬೊಕ್ಕಸಕ್ಕೆ 1,000- 1,500 ಕೋಟಿ ರೂ. ಆದಾಯ ಸೇರ್ಪಡೆಗೊಳ್ಲಲಿದೆೆಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ 2023ರಿಂದ ಸಾರ್ವಜನಿಕ ಬಳಕೆಗೆ ಸಿದ್ಧಗೊಳ್ಳಲಿರುವ ಈ ಎಕ್ಸ್ ಪ್ರೆಸ್ ಹೈವೇ ಸರ್ಕಾರದ ಪಾಲಿಗೆ ಚಿನ್ನದ ಗಣಿ ಎಂದು ಹೋಲಿಕೆ ಮಾಡಿದ್ದಾರೆ. 

ಸದ್ಯ ದೇಶಾದ್ಯಂತ ನಡೆಯುತ್ತಿರುವ ರಸ್ತೆ ಸೌಕರ್ಯ ಅಭಿವೃದ್ಧಿ ಯೋಜನೆಗಳಿಂದಾಗಿ ಮುಂದಿನ ೫ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಗಳಿಂದ ವಾರ್ಷಿಕ 1.40 ಲಕ್ಷ ಕೋಟಿ ಆದಾಯ ನಿರೀಕ್ಷಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ. ಸದ್ಯ ಟೋಲ್ ಗಳಿಂದ ಸಂಗ್ರಹವಾಗುತ್ತಿರುವ ಮೊತ್ತ 40,000 ಕೋಟಿ ರೂ.

ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ 4 ರಾಜ್ಯಗಳನ್ನು ಹಾದುಹೋಗುತ್ತಿದೆ. ವಿಶ್ವದಲ್ಲೇ ಅತಿದೊಡ್ಡ ರಸ್ತೆ ನಿರ್ಮಾಣ ಕಾಮಗಾರಿ ಎನ್ನುವ ಹೆಸರಿಗೆ ಅದು ಪಾತ್ರವಾಗಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com