ಅಖಾಡ ಪರಿಷತ್ ಮುಖ್ಯಸ್ಥರ ಆತ್ಮಹತ್ಯೆ: ಶಿಷ್ಯ ಆನಂದ ಗಿರಿ ಪೊಲೀಸ್ ವಶಕ್ಕೆ 

ಅಖಿಲ ಭಾರತೀಯ ಅಖಾಡ ಪರಿಷತ್ ನ ಮುಖ್ಯಸ್ಥರಾಗಿದ್ದ ಮಹಾಂತ್ ನರೇಂದ್ರ ಗಿರಿ ಅವರ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಅವರ ಶಿಷ್ಯ ಆನಂದ ಗಿರಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಅಖಾಡ ಪರಿಷತ್ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ
ಅಖಾಡ ಪರಿಷತ್ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ

ಪ್ರಯಾಗ್ ರಾಜ್: ಅಖಿಲ ಭಾರತೀಯ ಅಖಾಡ ಪರಿಷತ್ ನ ಮುಖ್ಯಸ್ಥರಾಗಿದ್ದ ಮಹಾಂತ್ ನರೇಂದ್ರ ಗಿರಿ ಅವರ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಅವರ ಶಿಷ್ಯ ಆನಂದ ಗಿರಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ನರೇಂದ್ರ ಗಿರಿ ಅವರ ಮೃತ ದೇಹದ ಬಳಿ ಆತ್ಮಹತ್ಯೆಗೂ ಮುನ್ನ ಬರೆಯಲಾಗಿದ್ದ 7 ಪುಟಗಳ ಪತ್ರ ದೊರೆತಿದ್ದು, ಅದರಲ್ಲಿ ಮಾನಸಿಕವಾಗಿ ನೊಂದಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದರು.

ತಮ್ಮ ಓರ್ವ ಶಿಷ್ಯನ ವಿಷಯದಲ್ಲಿ ತಾವು ಮಾನಸಿಕವಾಗಿ ನೊಂದಿರುವುದಾಗಿ ನರೇಂದ್ರ ಗಿರಿ ಅವರು ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ರದಲ್ಲಿ ಉಲ್ಲೇಖಿಸಲಾಗಿರುವ ನರೇಂದ್ರ ಗಿರಿ ಅವರ ಶಿಷ್ಯ ಆನಂದ ಗಿರಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

"ನಾವು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ವಿಧಿವಿಜ್ಞಾನ ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದೇವೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸುತ್ತಿದ್ದೇವೆ. ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ.  ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ" ಎಂದು ಪ್ರಯಾಗ್ ರಾಜ್ ನ ಹೆಚ್ಚುವರಿ ನಿರ್ದೇಶಕ ಎಡಿಜಿ ಪ್ರೇಮ್ ಪ್ರಕಾಶ್ ಹೇಳಿದ್ದಾರೆ.

"ಆನಂದಗಿರಿ ಅವರನ್ನು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದಿದ್ದಾರೆ" ಎಂದು ಹರಿದ್ವಾರ ಎಸ್ ಪಿ ಕಮಲೇಶ್ ಉಪಾಧ್ಯಾಯ ತಿಳಿಸಿದ್ದಾರೆ

ತಮ್ಮ ವಿರುದ್ಧದ ಆರೋಪವನ್ನು ಆನಂದ ಗಿರಿ ಷಡ್ಯಂತ್ರವೆಂದು ಹೇಳಿದ್ದಾರೆ. ಗುರೂಜಿ ಅವರಿಂದ ಕೆಲವು ಮಂದಿ ಹಣ ಪಡೆಯುತ್ತಿದ್ದರು. ಅವರು ಪತ್ರದಲ್ಲಿ ನನ್ನ ಹೆಸರು ಬರೆದಿದ್ದಾರೆ. ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಜೀವನದಲ್ಲಿ ಎಂದೂ ಪತ್ರ ಬರೆದವರಲ್ಲ ಈ ಪತ್ರದ ಬಗ್ಗೆ, ಪತ್ರದಲ್ಲಿರುವ ಕೈ ಬರಹದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com