ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಸೂಕ್ತ ಸಮಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ರಾಜ್ಯ ಸರ್ಕಾರವು ಜನಸಂಖ್ಯೆ ನಿಯಂತ್ರಣಕ್ಕಾಗಿ "ಸೂಕ್ತ ಸಮಯದಲ್ಲಿ" ಕಾನೂನನ್ನು ಜಾರಿಗೆ ತರಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಹೇಳಿದ್ದಾರೆ.

ಲಖನೌ: ರಾಜ್ಯ ಸರ್ಕಾರವು ಜನಸಂಖ್ಯೆ ನಿಯಂತ್ರಣಕ್ಕಾಗಿ "ಸೂಕ್ತ ಸಮಯದಲ್ಲಿ" ಕಾನೂನನ್ನು ಜಾರಿಗೆ ತರಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯನ್ನು ಸ್ಥಿರಗೊಳಿಸುವ ಮತ್ತು ತಾಯಂದಿರು ಮತ್ತು ಶಿಶುಗಳ ಮರಣವನ್ನು ಸಮಯಕ್ಕೆ ಅನುಗುಣವಾಗಿ ಕಡಿಮೆ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಜುಲೈನಲ್ಲಿ ಹೊಸ ನೀತಿಯನ್ನು ಬಿಡುಗಡೆ ಮಾಡಿತ್ತು ಮತ್ತು ಹೆಚ್ಚುತ್ತಿರುವ ಜನಸಂಖ್ಯೆ "ಅಭಿವೃದ್ಧಿಗೆ ಅಡಚಣೆ" ಎಂದು ಆದಿತ್ಯನಾಥ್ ಅವರು ಹೇಳಿದ್ದಾರೆ.

"ಎಲ್ಲವನ್ನೂ ಸೂಕ್ತ ಸಮಯದಲ್ಲಿ ಮಾಡಲಾಗುತ್ತದೆ. ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ಯಾವಾಗ ಪ್ರಕಟಿಸಲಾಗುವುದು ಎಂದು ಮಾಧ್ಯಮಗಳು ಮೊದಲು ಬಿಜೆಪಿಯನ್ನು ಪ್ರಶ್ನಿಸುತ್ತಿದ್ದವು. ಆದರೆ ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಈಗ ಎಲ್ಲರಿಗೂ ಸಂತೋಷವಾಗಿರಬೇಕು" ಎಂದು ಆದಿತ್ಯನಾಥ್ ಅವರು ನ್ಯೂಸ್ 24 ಕಾನ್ ಕ್ಲೇವ್ ನಲ್ಲಿ ಹೇಳಿದ್ದಾರೆ.

"ಅದೇ ರೀತಿ, 370ನೇ ವಿಧಿಯನ್ನು ಸಹ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರದ್ದುಪಡಿಸಿದ್ದಾರೆ" ಎಂದು ಅವರು ಉತ್ತರ ಪ್ರದೇಶ ಸಿಎಂ ಹೇಳಿದರು.

ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಕಲಂ 370 ಅನ್ನು ರದ್ದುಗೊಳಿಸಿತು ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

Related Stories

No stories found.

Advertisement

X
Kannada Prabha
www.kannadaprabha.com