ನವದೆಹಲಿ: ಲೇಹ್ ನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಏರ್ ಪೋರ್ಟ್ ಟರ್ಮಿನಲ್ ಮುಂದಿನ ವರ್ಷ ಡಿಸೆಂಬರ್ ತಿಂಗಳಿಂದ ಕಾರ್ಯಾಚರಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯ ತಿಳಿಸಿದ್ದಾರೆ.
ಇದನ್ನೂ ಓದಿ: ವಿಮಾನಯಾನ ಮೂಲಸೌಕರ್ಯ ಕುರಿತು ಸಿಎಂ ಬೊಮ್ಮಾಯಿಗೆ ಕೇಂದ್ರ ಸಚಿವ ಸಿಂಧಿಯಾ ಪತ್ರ
ಇತ್ತೀಚಿಗಷ್ಟೆ ಲೇಹ್ ಲೆಫ್ಟಿನೆಂಟ್ ಗವರ್ನರ್ ಆರ್ ಕೆ ಮಾಥುರ್ ವರ್ಚುವಲ್ ಸಭೆ ವೇಳೆ ಸಿಂಧಿಯ ಅವರಿಗೆ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಲೇಹ್ ನಲ್ಲಿ ತುರ್ತು ಚಿಕಿತ್ಸೆಗೆ ಅನುವು ಮಾಡಿಕೊಡುವ ಸಲುವಾಗಿ ಏರ್ ಆಂಬ್ಯುಲೆನ್ಸ್ ಸೇವೆ ವ್ಯವಸ್ಥೆಯ ರೂಪಿಸಲು ಯೋಜನೆ ಸಿದ್ಧ ಪಡಿಸುವುದಾಗಿ ಸಿಂಧಿಯಾ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕ ಯುದ್ಧವಿಮಾನದಲ್ಲಿ ಹುಟ್ಟಿದ್ದ ಆಫ್ಘನ್ ಹೆಣ್ಣು ಮಗುವಿಗೆ ವಿಮಾನದ ಹೆಸರು!
ಶೀಘ್ರದಲ್ಲೇ ಆವರು ಲಡಾಖ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಟರ್ಮಿನಲ್ ಕಾಮಗಾರಿ ಪ್ರಗತಿ ಪರಿಶೀಲನೆಗೆ ತೆರಳುವುದಾಗಿ ಹೇಳಿದ್ದಾರೆ.